Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಬ್ಬಕ್ಕೆ ಮಾಡಿ ರುಚಿ ರುಚಿಯ ಬಾದಾಮ್ ಪುರಿ..! ಇಲ್ಲಿದೆ ಸರಳ ಸಿಹಿ ತಿಂಡಿ ರೆಸಿಪಿ
ಹಬ್ಬದಲ್ಲಿ ನಾವು ಒಂದು ಬಗೆಯ ಸಿಹಿ ತಿಂಡಿ ಮಾಡುತ್ತೇವೆ. ಸಿಹಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಹಬ್ಬವಿಲ್ಲದಿದ್ದರೂ ನಾವು ಹಲವು ಬಾರಿ ಸಿಹಿಯನ್ನು ಮಾಡಿ ಸವಿಯುತ್ತೇವೆ. ಸಿಹಿ ಒಂದಿಷ್ಟು ದಿನವನ್ನು ಇಟ್ಟು ಸವಿಯಬೇಕು ಎಂದು ಭಾವಿಸುತ್ತೇವೆ. ಹೀಗಾಗಿ ಸಿಹಿ ತಿಂಡಿಯನ್ನು ಶೇಖರಿಸಿ ಇಟ್ಟು ಸವಿಯುತ್ತೇವೆ.
ಹೀಗಾಗಿ ಹಬ್ಬದ ಖುಷಿ ಡಬಲ್ ಮಾಡುವಂತಹ ಸಿಹಿ ತಿಂಡಿ ಮಾಡುವ ಕುರಿತು ತಿಳಿದುಕೊಳ್ಳೋಣ. ನಾವಿಂದು ಹಬ್ಬದಂದು ಮಾಡಬಹುದಾದ ಬಾದಾಮ್ ಪುರಿ ಅಥವಾ ಬಾದುಷಾ ಎಂದು ಕರೆಯುವ ಈ ಸಿಹಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಬಾದಾಮ್ ಪುರಿ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರ ವರೆಗು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಅದರಲ್ಲೂ ಮನೆಯಲ್ಲಿ ಪೂಜೆ ಇದ್ದರೆ, ಶುಭ ಕಾರ್ಯಗಳಿದ್ದರೆ ಈ ಸಿಹಿ ಹೆಚ್ಚಾಗಿ ಮಾಡುತ್ತಾರೆ. ಇದನ್ನು ಪೂಜೆಗೆ, ನೈವೇದ್ಯಕ್ಕೆ ಬಳಸುವುದರಿಂದ ಹಬ್ಬದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಹಾಗಾದ್ರೆ ಬಾದಾಮ್ ಪುರಿ ಮಾಡುವುದು ಹೇಗೆ?, ಬಾದಾಮ್ ಪುರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾದಾಮ್ ಪುರಿ ಮಾಡಲು ಬೇಕಾಗುವ ವಸ್ತುಗಳು
- ಮೈದಾ ಹಿಟ್ಟು
- ಸಕ್ಕರೆ
- ಎಣ್ಣೆ
- ಅರಶಿನ
- ಹಳದಿ ಬಣ್ಣ
- ಏಲಕ್ಕಿ ಪುಡಿ
- ಉಪ್ಪು
ಬಾದಾಮ್ ಪುರಿ ಮಾಡುವ ವಿಧಾನವೇನು?
ಒಂದು ಬೌಲ್ಗೆ 2 ಕಪ್ ಮೈದಾ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಅರಶಿಣ ಅಥವಾ ಹಳದಿ ಬಣ್ಣದ ಪುಡಿ ಸಹ ಬಳಸಬಹದು. ಅರ್ಧ ಸ್ಪೂನ್ ಅರಶಿಣ ಅಥವಾ ಪುಡಿ ಹಾಕಿಕೊಳ್ಳಿ. ನಂತರ ಉಪ್ಪು, ಬಿಸಿ ಮಾಡಿದ ತುಪ್ಪ 2 ಚಮಚ ಅಥವಾ ಬಿಸಿ ಎಣ್ಣೆ ಸಹ ಹಾಕಿಕೊಳ್ಳಬಹುದು. ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು.
ಚಪಾತಿ ಹಾಗೂ ಪೂರಿಗೆ ಹಿಟ್ಟು ಹದ ಮಾಡಿಕೊಳ್ಳುವಂತೆಯೇ ಈ ಹಿಟ್ಟನ್ನು ಸಹ ಮಾಡಿಕೊಳ್ಳಿ. ನಂತರ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಮುಚ್ಚಿ 15 ನಿಮಿಷ ಇಡಬೇಕು. ಈಗ ಸಕ್ಕರೆ ಪಾಕ ಮಾಡಿಕೊಳ್ಳಬೇಕು. ಒಂದು ಪಾತ್ರೆಗೆ 2 ಕಪ್ ಸಕ್ಕರೆ, 1 ಕಪ್ ನೀರು ಹಾಕಿಕೊಳ್ಳಿ. ತೆಳುವಾದ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಇಳಿಸಿಕೊಳ್ಳಿ.
ಈಗ ಹಿಟ್ಟನ್ನು ತೆಗೆದುಕೊಂಡು ಮತ್ತೆ ನಾದುಕೊಂಡು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಿ. ಒಂದು ಉಂಡೆಯನ್ನು ತೆಗೆದುಕೊಂಡು ಮೈದಾ ಹಿಟ್ಟು ಹಾಕಿ ಲಟ್ಟಿಸಿಕೊಳ್ಳಿ. ಚಪಾತಿಯಂತೆ ಲಟ್ಟಿಸಿಕೊಳ್ಳಿ. ನಂತರ ಇದನ್ನು ನಾಲ್ಕು ಮೂಲೆಯಂತೆ ಮಡಚಿಕೊಳ್ಳಿ. ಮಡಚಿದ ಬಳಿಕ ನಿಧಾನವಾಗಿ ಲಟ್ಟಿಸಿಕೊಳ್ಳಿ. ಅರ್ಧ ಅಂಗೈ ಅಗಲದಷ್ಟು ದೊಡ್ಡದಾಗುವಂತೆ ಲಟ್ಟಿಸಿಕೊಳ್ಳಿ. ಹೀಗೆ ಲಟ್ಟಿಸಿಕೊಂಡ ಬಳಿಕ ಇದನ್ನು ಒಲೆ ಮೇಲೆ ಇಟ್ಟ ಎಣ್ಣೆಯಲ್ಲಿ ಬಿಡಬೇಕು. ಎಣ್ಣೆಯಲ್ಲಿ ಚೆನ್ನಾಗಿ ಕರಿದ ಬಳಿಕ ಇದನ್ನು ತೆಗೆದು ಸಕ್ಕರೆ ಪಾಕಕ್ಕೆ ಹಾಕಿಕೊಳ್ಳಬೇಕು.
ಸಕ್ಕರೆ ಪಾಕವನ್ನು ಬಾದಾಮ್ ಪುರಿ ಚೆನ್ನಾಗಿ ಹೀರಿಕೊಳ್ಳಬೇಕು. ಪಾಕ ಉಗುರುಬೆಚ್ಚಗೆ ಇರಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬಾದಾಮ್ ಪುರಿ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
