Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಬೇಬಿ ಪೊಟೇಟೋ ಬಿರಿಯಾನಿ ಸವಿದು ನೋಡಿ..! ಎಷ್ಟು ರುಚಿ ಇದು ಗೊತ್ತಾ?
ಬಿರಿಯಾನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ನಾನ್ ವೆಜ್ ಬಿರಿಯಾನಿಯು ಪ್ರತಿಯೊಬ್ಬರು ಇಷ್ಟಪಟ್ಟು ಸವಿಯುತ್ತಾರೆ. ಆದ್ರೆ ಸಸ್ಯಹಾರಿಗಳಿಗೂ ಒಂದಿಷ್ಟು ಬಿರಿಯಾನಿಗಳಿವೆ. ವೆಜ್ ಬಿರಿಯಾನಿಗಳಲ್ಲೂ ಹತ್ತು ಹಲವು ವಿಧಗಳಿವೆ. ನಾವು ಹಲವು ರೀತಿಯ ಬಿರಿಯಾನಿಗಳ ಸವಿದು ನೋಡಿರುತ್ತೇವೆ. ಹಾಗೆ ಎಲ್ಲಾ ಬಿರಿಯಾನಿಯೂ ಅದ್ಭುತ ರುಚಿ ನೀಡುತ್ತೆ.
ಹೀಗಾಗಿ ಸಸ್ಯಹಾರಿ ಪ್ರಿಯರು ವೆಜ್ ಬಿರಿಯಾನಿ ಅಂದ್ರೆ ಬಹಳ ಇಷ್ಟಪಡುತ್ತಾರೆ. ಹಾಗೆ ಬಹಳಷ್ಟು ಬಗೆಯ ಬಿರಿಯಾನಿ ಸವಿಯಲು ಕೂಡ ಇಷ್ಟಪಡುತ್ತಾರೆ. ಇಂತಹ ಹಲವು ಬಿರಿಯಾನಿಗಳ ಪೈಕಿ ಸೋಯಾ ಬಿರಿಯಾನಿ, ವೆಜ್ ಕುಷ್ಕದಂತಹ ರುಚಿ ರುಚಿಯ ಬಿರಿಯಾನಿ ಸವಿದಿರುತ್ತೀರಿ. ಹಾಗೆ ನಾವಿಂದು ಬೇಬಿ ಪೊಟೆಟೋದಿಂದ ಮಾಡುವಂತಹ ಅದ್ಭುತ ರುಚಿಯ ಬಿರಿಯಾನಿ ಮಾಡುವ ಕುರಿತು ತಿಳಿದುಕೊಳ್ಳೋಣ.

ವೆಜ್ ಪ್ರಿಯರಿಗೆ ಈ ಬೇಬಿ ಆಲೂಗಡ್ಡೆಯ ಬಿರಿಯಾನಿ ಸಖತ್ ಇಷ್ಟವಾಗುತ್ತೆ. ಚಿಕ್ಕ ಗಾತ್ರದ ಈ ಆಲೂಗಡ್ಡೆಗಳನ್ನು ಬೇಯಿಸಿ ಮಾಡುವಂತಹ ಬಿರಿಯಾನಿಯು ನಿಮ್ಮ ಬಾಯಲ್ಲಿ ನೀರು ತರಿಸುತ್ತೆ. ಹಾಗಾದ್ರೆ ಈ ಬೇಬಿ ಪೊಟೇಟೋದಿಂದ ರುಚಿ ರುಚಿಯ ವೆಜ್ ಬಿರಿಯಾನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಈ ಬೇಬಿ ಆಲೂಗಡ್ಡೆಯ ಬಿರಿಯಾನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಈ ವೆಜ್ ಬಿರಿಯಾನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಬಿ ಆಲೂಗಡ್ಡೆ ಬಿರಿಯಾನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೇಬಿ ಆಲೂಗಡ್ಡೆ- ಕಾಲು ಕೆ.ಜಿ
- ಈರುಳ್ಳಿ
- ಟೊಮೇಟೊ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಧನಿಯಾ ಪುಡಿ
- ಖಾರದ ಪುಡಿ
- ಗರಂ ಮಸಾಲೆ
- ಅರಶಿಣ ಪುಡಿ
- ಅನ್ನ
- ಉಪ್ಪು
- ಎಣ್ಣೆ
ಬೇಬಿ ಆಲೂಗಡ್ಡೆ ಬಿರಿಯಾನಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸಣ್ಣ ಆಲೂಗಡ್ಡೆ ತೊಳೆದುಕೊಂಡು ಹಾಕಿ ನೀರು ಹಾಕಿಕೊಳ್ಳಿ. ಇದಕ್ಕೆ ಅರಶಿಣ ಹಾಗೂ ಉಪ್ಪು ಹಾಕಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಿ. 15 ನಿಮಿಷ ಚೆನ್ನಾಗಿ ಬೇಯಿಸಿದರೆ ಸಾಕು. ನಂತರ ಬೆಂದಿರುವ ಆಲೂಗಡ್ಡೆಯನ್ನು ಒಂದು ಬೌಲ್ಗೆ ಹಾಕಿಕೊಂಡು ತಣ್ಣೀರು ಹಾಕಿ ಅದು ತಣ್ಣಗಾದ ಬಳಿಕ ಸಿಪ್ಪೆ ಬಿಡಿಸಿಟ್ಟುಕೊಳ್ಳಿ.
ಈಗ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ನೀವು ಅದಕ್ಕೆ ಹಸಿ ಮೆಣಸು, ಈರುಳ್ಳಿ ಹಾಕಿ ಫ್ರೈ ಮಾಡಿ. 1 ನಿಮಿಷದ ಬಳಿಕ ಇದಕ್ಕೆ ಟೊಮೆಟೋ, ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಈಗ ಬೇಯಿಸಿಕೊಂಡಿರುವ ಇಡಿಯಾದ ಆಲೂಗಡ್ಡೆಯನ್ನು ಇದಕ್ಕೆ ಹಾಕಿಕೊಂಡು ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿ. ಆಲೂಗಡ್ಡೆ ಒಡೆಯದಂತೆಯೂ ನೋಡಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿಕೊಂಡ ಬಳಿಕ ಇದಕ್ಕೆ ಮೊದಲೇ ಮಾಡಿಕೊಂಡಿರುವ ಅನ್ನವನ್ನು ಹಾಕಿಕೊಳ್ಳಬೇಕು. ಅನ್ನವನ್ನು ಹುಡಿಹುಡಿಯಾಗಿ ಮಾಡಿಕೊಂಡಿರಬೇಕು. ಈ ಅನ್ನ ಹಾಕಿ ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಸಾಲೆ ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಈ ಬೇಬಿ ಆಲೂಗಡ್ಡೆ ಬಿರಿಯಾನಿ ರೆಡಿಯಾಗುತ್ತೆ. ಒಂದು ದಿನ ಮಾಡಿ ಸವಿದರೆ ಪದೇ ಪದೇ ಮಾಡಲು ಮುಂದಾಗುತ್ತೀರಿ.



Click it and Unblock the Notifications
