Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಉಪ್ಪಿಟ್ಟು ಅಂದ್ರೆ ಮೂಗು ಮುರಿಯಬೇಡಿ..! ಈ ರುಚಿಯ ಉಪ್ಪಿಟ್ಟು ಟ್ರೈ ಮಾಡಿ.!
ನೀವು ಬೆಳಗ್ಗೆಯ ತಿಂಡಿಗೆ ವಿಶೇಷವಾಗಿ ಏನಾದರು ಮಾಡುವ ಆಲೋಚನೆ ಇಟ್ಟುಕೊಂಡಿದ್ದೀರಾ? ನಿತ್ಯ ಮಾಡಿದ್ದೆ ತಿಂಡಿ ಮಾಡಿ ಅದೇ ರುಚಿ ನಿಮಗೂ ಬೇಸರ ತರಿಸಿರುತ್ತದೆ. ವಿಶೇಷವಾಗಿ ಮಾಡಲು ಸಮಯ ಹೆಚ್ಚು ಹಿಡಿಯುತ್ತೆ ಅನ್ನೋದು ನಿಮ್ಮ ಅನಿಸಿಕೆ ಆಗಿರಬಹುದು. ಇನ್ನು ಬೆಳಗ್ಗೆಯ ತಿಂಡಿಗೆ ಉಪ್ಪಿಟ್ಟು ಅಂದರೆ ಹಲವರು ಮೂಗು ಮುರಿಯುತ್ತಾರೆ. ಉಪ್ಪಿಟ್ಟು ಬೆಳಗ್ಗೆ ತಿಂದರೆ ಸಂಜೆಯ ವರೆಗೂ ದಿನ ಹಾಳಾಗುತ್ತದೆ ಎಂಬುದು ಹಲವರ ವಾದ.
ಉಪ್ಪಿಟ್ಟು ಅತಿ ಬೇಗನೇ, ರುಚಿಯಾಗಿ ಮತ್ತು ಪುಷ್ಟಿಕರವಾಗಿ ಮಾಡಬಹುದಾದ ತಿಂಡಿಯಾಗಿರುವುದು. ವಾರಕ್ಕೆ ಹಲವು ಬಾರಿ ತಿಂದೂ ತಿಂದೂ ಬೇಸರವಾಗಿರುವ ಒಂದೇ ಕಾರಣ ಬಿಟ್ಟರೆ ಉಪ್ಪಿಟ್ಟನ್ನು ನಿರಾಕರಿಸಲು ಬೇರಾವುದೇ ಕಾರಣವಿಲ್ಲ. ಆದರೆ ಇದಕ್ಕೊಂದು ಸುಲಭ ಪರಿಹಾರವಿದೆ. ಅದೆಂದರೆ ಉಪ್ಪಿಟ್ಟಿನಲ್ಲಿ ಕೊಂಚ ಬದಲಾವಣೆ ಮಾಡಿ ಬೇರೆ ಬೇರೆ ರುಚಿಗಳನ್ನು ಸೇರಿಸುವುದು.

ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಪಹಾರಗಳಲ್ಲಿ ಒಂದು. ಇದನ್ನು ಉಪ್ಮಾ, ಖಾರಾ ಬಾತ್ ಎಂದು ಕರೆಯುತ್ತಾರೆ. ಇದನ್ನು ಸವಿಯುವಾಗ ಕೇಸರಿ ಬಾತ್ ಅನ್ನು ಜೊತೆಗೆ ಸೇಸೇರಿಸುವುದು ಒಂದು ಸುಂದರವಾದ ಸಂಯೋಜನೆ ಎನ್ನಬಹುದು. ಇದರ ತಯಾರಿಯಲ್ಲಿ ಬಳಸುವ ಕ್ಯಾರೆಟ್, ಕ್ಯಾಪ್ಸಿಕಮ್, ಬಟಾಣಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಇದರ ರುಚಿಯನ್ನು ಹೆಚ್ಚಿಸುತ್ತವೆ.
ಆದ್ರೆ ನಾವಿಂದು ಅವರೇಕಾಳು ಹಾಕಿ ಮಾಡುವ ಮಸಾಲೆ ಉಪ್ಪಿಟ್ಟಿನ ಬಗ್ಗೆ ತಿಳಿದುಕೊಳ್ಳೋಣ. ಅವರೇ ಕಾಳು ಉಪ್ಪಿಟ್ಟು ಬೇರೆಲ್ಲಾ ಉಪ್ಪಿಟ್ಟಿಗಿಂತ ಹುಡಿಹುಡಿಯಾಗಿ ರುಚಿ ರುಚಿಯಾಗಿ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾದ್ರೆ ಈ ಅವರೇ ಕಾಳು ಉಪ್ಪಿಟ್ಟು ಮಾಡುವುದು ಹೇಗೆ? ಇದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಅವರೆಕಾಳು ಉಪ್ಪಿಟ್ಟಿನ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಅವರೆಕಾಳು ಉಪ್ಪಿಟ್ಟ ಮಾಡಲು ಬೇಕಾಗುವ ಪದಾರ್ಥಗಳು
- ರವಾ -1 ಗ್ಲಾಸ್
- ಲಿಮಾ ಬೀನ್ಸ್ - 1 ಕಪ್
- ಈರುಳ್ಳಿ - 2
- ಟೊಮೇಟೊ - 1
- ಕ್ಯಾರೆಟ್ - 1
- ಶುಂಠಿ -1/2 ಇಂಚು
- ಬೆಳ್ಳುಳ್ಳಿ - 2
- ಹಸಿರು ಮೆಣಸಿನಕಾಯಿ - 4
- ಪುದೀನ ಎಲೆಗಳು - 2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbs
- ತೆಂಗಿನಕಾಯಿ
- ಜೀರಿಗೆ - 1/4 ಟೀಸ್ಪೂನ್
- ಸಾಸಿವೆ - 1/4 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
- ಪಲಾವ್ ಎಲೆಗಳು - 2
- ಏಲಕ್ಕಿ-2
- ಲವಂಗ-4
- ದಾಲ್ಚಿನ್ನಿ - 2 ಪೀಸ್
- ಕರಿಬೇವಿನ ಎಲೆಗಳು
- ಸೋಂಕಾಳು
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಅವರೆಕಾಳು ಉಪ್ಪಿಟ್ಟ ಮಾಡುವ ವಿಧಾನ
ಒಂದು ಲೋಟದಲ್ಲಿ ಉಪ್ಪಿಟ್ಟು ರವೆ ತೆಗೆದುಕೊಂಡು ಅದನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. 5 ನಿಮಿಷ ಹುರಿದರೆ ಸಾಕು. ಇನ್ನೊಂದು ಕಡೆ ಶುಂಠಿ, ಏಲಕ್ಕಿ, ಮೆಣಸಿನ ಕಾಯಿ, ಬೆಳ್ಳುಳ್ಳಿ, ಪುದೀನ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿಯನ್ನು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾವಿವೆ, ಜೀರಿಗೆ, ಪಲಾವ್, ಎಲೆ, ಚಕ್ರಮೊಗ್ಗು ಹಾಗೂ ಎಲ್ಲ ಮಸಾಲೆ ವಸ್ತು ಹಾಕಿ ಫ್ರೈ ಮಾಡಿ. ಬಳಿಕ ಇದಕ್ಕೆ ಈರುಳ್ಳಿ, ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಬಳಿಕ ಹಸಿ ಅವರೆಕಾಳು, ಉಪ್ಪು ಹಾಕಿ ಪ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ರುಬ್ಬಿಕೊಂಡ ಮಸಾಲೆ ಹಾಕಿ 3 ನಿಮಿಷ ಫ್ರೈ ಮಾಡಿ.
ಇದಾದ ಮೇಲೆ ಟೊಮೆಟೋ, ಗರಂ ಮಸಾಲಾ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ರವೆ ತೆಗೆದುಕೊಂಡ ಕಪ್ನಲ್ಲಿಯೇ 2ರಷ್ಟು ನೀರು ಹಾಕಿಕೊಳ್ಳಿ. ಈ ನೀರು ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಇದಕ್ಕೆ ಹುರಿದಿಟ್ಟುಕೊಂಡ ರವೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಮಿಕ್ಸ್ ಮಾಡಿ ಬಳಿಕ ಮುಚ್ಚಳ ಮುಚ್ಚಿ ಬಿಡಿ. ಮಧ್ಯದಲ್ಲಿ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಉಪ್ಪಿಟ್ಟು ಸವಿಯಲು ರೆಡಿಯಾಗುತ್ತದೆ.



Click it and Unblock the Notifications