Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅವರೆಕಾಳಿನಲ್ಲಿ ಅದ್ಭುತ ರುಚಿಯ ವಡೆ ಮಾಡಿ..! ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುತ್ತೀರಿ..!
ಮಸಾಲೆ ವಡೆ ಸಾಮಾನ್ಯವಾಗಿ ಎಲ್ಲರೂ ತಿಂದಿರ್ತೀರಾ, ಆದರೆ ಅವರೆಕಾಳು ಅಂಬೋಡೆಯು ಒಂದು ವಿಶಿಷ್ಟ ಮಸಾಲ ವಡೆಯಾಗಿದೆ. ಇದನ್ನು ಅವರೆ ಬೇಳೆ ಅಂಬೋಡೆ ಅಥವಾ ಅವೆಕಾಳು ಅಂಬೋಡೆ ಎಂದು ಕರೆಯುತ್ತಾರೆ. ಈ ಪಾಕವಿಧಾನವು ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದ್ದು, ಆರೋಗ್ಯಕರವಾದ ಅವರೆಕಾಳು ಹಾಗೂ ರುಚಿಕರವಾದ ಮಸಾಲೆಗಳೊಂದಿಗೆ ಅದ್ಭುತ ರುಚಿಯನ್ನು ನೀಡುತ್ತದೆ. ಬಿಸಿ-ಬಿಸಿಯಾದ ಕಾಫಿ ಮತ್ತು ಟೀ ಯೊಂದಿಗೆ ಅಂಬೋಡೆ ಇಟ್ಟರೆ ಸೂರ್ಯ ಮುಳುಗಿದ್ದೇ ಅರಿವಿಗೆ ಬಾರದು. ಬಹಳ ಸುಲಭ ಹಾಗೂ ಸರಳವಾದ ವಿಧಾನದ ಮೂಲಕ ಈ ತಿಂಡಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ನೀವು ಈ ಪಾಕವಿಧಾನವನ್ನು ತಯಾರಿಸಿ, ನಿಮ್ಮವರಿಗೆ ಉಣಬಡಿಸಿ.

ಮಸಾಲೆ ವಡೆ ಸಾಮಾನ್ಯವಾಗಿ ಎಲ್ಲರೂ ತಿಂದಿರ್ತೀರಾ, ಆದ್ರೆ ಥಟ್ ಅಂತ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ? ನೀವು ಹೋಟೆಲ್ನಲ್ಲಿ ಬಾಯಿ ಚಪ್ಪರಿಸಿ ಮಸಾಲಾ ವಡೆ ತಿಂದಿರಬಹುದು, ಆದ್ರೆ ಅದನ್ನು ಮಾಡುವುದು ಹೇಗೆ ಅನ್ನೋದು ನಿಮಗೆ ತಿಳಿದಿರುವುದಿಲ್ಲ. ಸಂಜೆ ವೇಳೆ ಕಾಫಿ, ಟೀ ಜೊತೆ ಈ ಮಸಾಲ ವಡೆ ಸೇವಿಸುತ್ತಾರೆ, ಜೊತೆಗೆ ಬೆಳಗ್ಗೆಯ ತಿಂಡಿಗೂ ಈ ವಡೆ ಹೆಚ್ಚಾಗಿ ಬಳಸುತ್ತಾರೆ.
ಹಾಗಾದರೆ ನಾವಿಂದು ಅವರೆ ಕಾಳಿನಿಂದ ಮಸಾಲೆ ವಡೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥವೇನು? ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಅವರೆ ಕಾಳು ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ - 1 ಕಪ್
- ಅವರೆ ಕಾಳು - 1 ಕಪ್
- ಲವಂಗ- 2
- ದಾಲ್ಚಿನ್ನಿ- 1
- ಸೋಂಕಾಳು- 1 ಟೀಸ್ಪೂನ್
- ಕೆಂಪು ಮೆಣಸಿನಕಾಯಿ - 3
- ಬೆಳ್ಳುಳ್ಳಿ - 3 ಪಿಸಿಗಳು
- ಶುಂಠಿ-1/2 ಇಂಚು
- ಈರುಳ್ಳಿ-2
- ಕರಿಬೇವಿನ ಎಲೆಗಳು - 2 tbs
- ಹಸಿರು ಮೆಣಸಿನಕಾಯಿ - 2
- ಕೊತ್ತಂಬರಿ ಸೊಪ್ಪು - 1/4 ಕಪ್
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಅವರೆ ಕಾಳು ವಡೆ ಮಾಡುವ ವಿಧಾನ
ಮೊದಲು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಬೌಲ್ನಲ್ಲಿ ನೆನೆಸಿಡಬೇಕು. ಸುಮಾರು 2 ಗಂಟೆ ನೆನೆಸಿಡಬೇಕು. ಇದಾದ ಬಳಿಕ ಅದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಕಡಲೆ ಬೇಳೆ ಜೊಗೆ ಸೋಂಕಾಳು, ಒಣ ಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಈ ಪುಡಿಗೆ ಉಪ್ಪು, ಸಣ್ಣದಾಗಿ ಕೊಚ್ಚಿಕೊಂಡಿರುವ ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿಮೆಣಸು, ಕೊತ್ತಂಬರಿ ಸೊಪ್ಪಿ (ಎಲ್ಲಾ ವಸ್ತುಗಳು ಸಣ್ಣದಾಗಿ ಕತ್ತರಿಸಿಕೊಳ್ಳಿ) ಅವರೆಕಾಳನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ದಪ್ಪವಾಗಿ ಗಟ್ಟಿಯಾಗಿರಬೇಕು. ಕೈಯಲ್ಲಿ ಉಂಡೆ ಕಟ್ಟುವಂತೆ ಹಿಟ್ಟು ಮಾಡಿಕೊಳ್ಳಿ.
ಬಳಿಕ ಪ್ಲಾಸ್ಟಿಕ್ ಅತವಾ ಕೈ ಮೇಲೆ ಹಿಟ್ಟು ಇಟ್ಟುಕೊಂಡು ಅದನ್ನು ನಿಮಗೆ ಬೇಕಾದ ಗಾತ್ರಕ್ಕೆ ತಟ್ಟಿಕೊಂಡು ಕಾದಿರುವ ಎಣ್ಣೆಗೆ ವಡೆಯನ್ನು ಬಿಡಿ. ಮೂರರಿಂದ 5 ನಿಮಿಷಗಳ ಕಾಲ ಎರಡೂ ಕಡೆ ವಡೆಯನ್ನು ಕಾಯಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ಅವರೆಕಾಳು ವಡೆ ರೆಡಿಯಾಗುತ್ತದೆ. ಇದನ್ನು ಸಂಜೆ ಟೀ ಜೊತೆ ಇಲ್ಲವೆ ಊಟದ ಜೊತೆ ಸೈಡ್ಸ್ ಆಗಿ ಸೇವಿಸಬಹುದು.
ಇನ್ನು ಇದೇ ವಿಧಾನ ಬಳಸಿ ಆದ್ರೆ ಅವರೆಕಾಳು ಹಾಕುವ ಜಾಗದಲ್ಲಿ ಹುರಿ ಗಡಲೆ ಹಾಕಿಯೂ ಈ ಮಸಾಲೆ ವಡೆ ಮಾಡಬಹುದು. ಆದ್ರೆ ರುಚಿಯಲ್ಲಿ ಸ್ವಲ್ಪ ಬದಲಾವಣೆ ಬಿಟ್ಟರೆ ಬೇರೇನು ವ್ಯತ್ಯಾಸವಿರುವುದಿಲ್ಲ.



Click it and Unblock the Notifications
