Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಸಿಕ್ಕಾಪಟ್ಟೆ ಟೇಸ್ಟಿ ಈ ಅವರೆಕಾಳಿನ ಸಾರು..! ಮಾಡೋದು ಸಹ ಸುಲಭ..!
ನಾವು ನಿತ್ಯ ಅಡುಗೆಗೆ ಬಳಸುವ ಒಂದೊಂದು ತರಕಾರಿಗಳಲ್ಲು ಒಂದೊಂದು ಆರೋಗ್ಯಕರ ಲಾಭವಿರುತ್ತದೆ. ಅದರಲ್ಲು ಹಸಿ ಕಾಳುಗಳಲ್ಲಿ ಪೋಷಕಾಂಶ, ವಿಟಮಿನ್ಗಳು ಹೇರಳವಾಗಿ ಸಿಗುತ್ತವೆ. ಹೀಗಾಗಿ ಬೇಳೆ-ಕಾಳು ಹೆಚ್ಚಾಗಿ ಸೇವಿಸಬೇಕು ಎನ್ನಲಾಗುತ್ತದೆ. ಅದರಂತೆ ಈ ಅವರೆಕಾಳು ಸಹ ಇಂತಹದ್ದೆ ಗುಣ ಹೊಂದಿರುವ ತರಕಾರಿಯಾಗಿದೆ.
ಅವರೆಕಾಳಿನಲ್ಲಿ ಹಲವು ರೀತಿಯ ಪ್ರೋಟಿನ್, ವಿಟಮಿನ್ಗಳು ಸಿಗುತ್ತವೆ. ವಿಟಮಿನ್ ಬಿ ಸಿಗುವ ತರಕಾರಿ, ಕಾಳುಗಳಲ್ಲಿ ಈ ಅವರೆಕಾಳು ಪ್ರಮುಖವಾದ ಕಾಳಾಗಿದೆ. ಅವರೆಕಾಳಿನಲ್ಲಿ ಹಲವು ರೀತಿಯ ಖಾದ್ಯಗಳ ಮಾಡಬಹುದು. ಅಲ್ಲದೆ ಅವರೆ ಕಾಳನ್ನು ಎಲ್ಲಾ ತರಕಾರಿಯ ಜೊತೆ ಮಿಕ್ಸ್ ಮಾಡಿ ಸಾಂಬಾರ್ನಲ್ಲಿ ಹಾಕಿಯು ಸವಿಯಬಹುದು.

ಅಲ್ಲದೆ ಬೆಳಗ್ಗಿನ ತಿಂಡಿಗೆ ಮಾಡಲು ಉಪ್ಪಿಟ್ಟು, ಪಲಾವ್ಗೂ ಸಹ ಈ ಅವರೆಕಾಳು ಹಾಕಿ ಸವಿಯಬಹುದು. ಇಷ್ಟೆಲ್ಲಾ ಆರೋಗ್ಯಕರ ಅಂಶಗಳ ಹೊಂದಿರುವ ಈ ಅವರೆಕಾಳಿನಲ್ಲಿ ಸಾರು ಮಾಡಬಹುದು. ನೀವು ಹೋಟೆಲ್ನಲ್ಲಿ ಅವರೆ ಕಾಳಿನ ವಿವಿಧ ಖಾದ್ಯ ಸವಿದಿರಬಹುದು. ಅಲ್ಲದೆ ಸಾರು ಮಾಡಲು ಯಾವ ತರಕಾರಿಯೂ ಇಲ್ಲ ಎಂದಾದರೆ ಈ ಅವರೆಕಾಳಿನಿಂದ ಬೊಂಬಾಟ್ ರುಚಿಯ ಸಾರು ಮಾಡಬಹುದು.
ಅವರೆಕಾಳಿನಲ್ಲಿ ಇರುವಂತಹ ತಾಮ್ರದ ಅಂಶವು ಮಾನಸಿಕ ನಿಶ್ಯಕ್ತಿ ಕಡಿಮೆ ಮಾಡುವುದು ಮತ್ತು ಏಕಾಗ್ರತೆ ವೃದ್ಧಿಸಲು ಸಹ ಸಹಾಯ ಮಾಡಲಿದೆ. ಹಾಗಾದ್ರೆ ನಾವಿಂದು ಅವರೆಕಾಳಿನ ಸಾರು ಮಾಡುವುದು ಹೇಗೆ? ಈ ಅವರೆಕಾಳಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಎಂಬುದನ್ನು ವಿವರವಾಗಿ ನೋಡೋಣ.
ಅವರೆ ಕಾಳಿನ ಸಾರು ಮಾಡಲು ಬೇಕಾಗುವ ವಸ್ತುಗಳು
- ಅವರೆಕಾಳು -200 ಗ್ರಾಮ್
- ತೆಂಗಿನಕಾಯಿ
- ಟೊಮೆಟೋ-5
- ಹುಣಸೆ ಹುಳಿ
- ಖಾರದ ಪುಡಿ
- ಅರಶಿಣ
- ಸಾಂಬಾರ್ ಪುಡಿ
- ಈರುಳ್ಳಿ - 3
- ಆಲೂಗಡ್ಡೆ
- ಬದನೆಕಾಯಿ
- ಸಾಸಿವೆ
- ಜೀರಿಗೆ
- ಕರಿಬೇವು
- ಒಣ ಮೆಣಸು
- ಎಣ್ಣೆ
ಅವರೆ ಕಾಳಿನ ಸಾರು ಮಾಡುವ ವಿಧಾನ
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಅವರೆ ಕಾಳು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇನ್ನು ಅವರೆ ಕಾಳು ನೆನೆಸಿಟ್ಟು ಸಹ ಸಾಂಬಾರ್ ಮಾಡುತ್ತಾರೆ. ಆದ್ರೆ ನಾವಿಂದು ಹುರಿದುಕೊಂಡು ಮಾಡುವ ವಿಧಾನದ ಕುರಿತು ತಿಳಿದುಕೊಳ್ಳೋಣ.
ಇತ್ತ ಅವರೆಕಾಳು ಹುರಿದುಕೊಂಡು ಅದರ ಬಣ್ಣ ಸ್ವಲ್ಪ ಬದಲಾಗುತ್ತದೆ. ಈಗ ಅದಕ್ಕೆ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಇಡಿ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ತೆಂಗಿನ ಕಾಯಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಟೊಮೆಟೋ, ಹುಣಸೆ ಹುಳಿ, ಸಾಂಬಾರ್ ಪುಡಿ, ಸ್ವಲ್ಪ ಖಾರದ ಪುಡಿ, ಅರಶಿಣ, ಸ್ವಲ್ಪ ನೀರು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಗೊಜ್ಜಿನ ರೀತಿ ಈ ಮಸಾಲ ಕಂಡುಬರಬೇಕು. ಬಳಿಕ ಒಲೆ ಆರಿಸಿಕೊಂಡು ತಣ್ಣಗಾಗಲು ಬಿಡಿ.
ಈ ಮಸಾಲೆ ತಣ್ಣಗಾದ ಬಳಿಕ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ಇದಾಗುವ ಬೇಳೆಗೆ ಕುಕ್ಕರ್ನಲ್ಲಿಟ್ಟ ಅವರೆಕಾಳು 5 ಸೀಟಿ ಹೊಡೆಯಲು ಬಿಡಿ. 5 ಸೀಟಿ ಹೊಡೆದಿದ್ದರೆ ಮುಚ್ಚಳ ತೆಗೆದು ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಅದಕ್ಕೆ ಹಾಕಿಕೊಳ್ಳಿ.
ಇದಕ್ಕೆ ಸ್ವಲ್ಪ ನೀರು ಹಾಕಿ, ಅದಕ್ಕೆ ಉಪ್ಪು ಸಹ ಹಾಕಿಕೊಂಡು ಕುದಿಯಲು ಬಿಡಿ. ಸ್ವಲ್ಪ ಹೆಚ್ಚು ನೀರು ಹಾಕಿಕೊಳ್ಳಿ, ಏಕೆಂದರೆ ಇದು ತಣ್ಣಗಾದಾಗ ಗಟ್ಟಿಯಾಗುತ್ತದೆ. ಈಗ ಒಲೆ ಮೇಲೆ ಇರುವ ಸಾರಿಗೆ ತರಕಾರಿ ಇದ್ದರೆ ಹಾಕಿಕೊಳ್ಳಿ. ಆಲೂಗಡ್ಡೆ, ಬದನೆಕಾಯಿ, ಟೊಮೆಟೋ ಮೂರನ್ನೂ ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ. 5 ನಿಮಿಷ ಕುದಿಯಬೇಕು.
ಬಳಿಕ ಇದಕ್ಕೆ ಸಣ್ಣದಾಗಿ ಒಗ್ಗರಣೆ ಮಾಡಿ. ಎಣ್ಣೆ ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಅವರೆಕಾಳಿನ ಸಾರು ರೆಡಿಯಾಗುತ್ತದೆ.



Click it and Unblock the Notifications