Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ಅವರೆಕಾಳು ರಸಂ ಹೀಗೆ ಮಾಡಿದರೆ ಒಂದು ತುತ್ತು ಹೆಚ್ಚೇ ತಿನ್ನುವಿರಿ
ಅವರೆಕಾಳು ಸೀಸನ್ನಲ್ಲಿ ಯಾವ ಮಟನ್, ಚಿಕನ್ ಬೇಕಾಗಿಲ್ಲ, ಅವರಿಕಾಳು ಸಾರು ಮಾಡಿದ್ದೇನೆ ಎಂದು ಹೇಳಿದರೆ ಸಾಕು ಮುಖ ಅರಳಿ ಬಿಡುತ್ತದೆ, ಅವರೆಕಾಳು ಗತ್ತು ಅದು, ಅವರೆಕಾಳು ಸಾರು, ಹುಳಿ , ರಸಂ ಹೀಗೆ ನೂರಕ್ಕೂ ಅಧಿಕ ವೆರೈಟಿಯಲ್ಲಿ ಮಾಡಬಹುದು. ನಾವಿಲ್ಲಿ ಅವರೆಕಾಳು ರಸಂ ರೆಸಿಪಿ ನೀಡಿದ್ದೇವೆ, ಈ ರಸಂ ಮಾಡಿದ್ದೇ ಆದರೆ ಮಾಮೂಲಿ ಊಟ ಮಾಡುವುದಕ್ಕಿಂತ ಹೆಚ್ಚು ಊಟ ಮಾಡುತ್ತೀರಿ ಅಷ್ಟಂದು ರುಚಿಯಾಗಿರುತ್ತದೆ.
ಬನ್ನಿ ಈ ಅವರೆಕಾಳು ರಸಂ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅವರೆಕಾಳು 1/2 ಕಪ್
ಹುಣಸೆ ರಸ (ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು ತೆಗೆದು ನೀರಿಗೆ ಹಾಕಿ ರಸ
ಮಾಡಿ)
ಸ್ವಲ್ಪ ಕೊತ್ತಂಬರಿ ಸೊಪ್ಪು
ರಸಂ ಪುಡಿ 1 ಚಮಚ
ಎಣ್ಣೆ 2 ಚಮಚ
ತೆಂಗಿನತುರಿ 1 ಕಪ್
1/2 ಚಮಚ ಸಾಸಿವೆ
ಚಿಟಿಕೆಯಷ್ಟು ಇಂಗು
ಅರಿಶಿಣ ಪುಡಿ 1/2 ಚಮಚ
ಬೆಲ್ಲ 1 ಚಮಚ
ಸ್ವಲ್ಪ ಶುಂಠಿ (ಜಜ್ಜಿದ್ದು)
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕರಿಬೇವು
ಮಾಡುವ ವಿಧಾನ
ಸ್ಟೆಪ್ 1
ಅವರೆಕಾಳು ತೊಳೆದು ಕುಕ್ಕರ್ನಲ್ಲಿ ಹಾಕಿ, ನೀರು ಮತ್ತು ಉಪ್ಪು ಸೇರಿಸಿ ಬೇಯಿಸಿ. ನೀವು ಅವರೆಕಾಳಿನ ಸಿಪ್ಪೆ ತೆಗಿಯಬೇಕಾಗಿಲ್ಲ ಸಿಪ್ಪೆ ಸಹಿತ ಬೇಯಿಸಬಹುದು.
ಅವರೆಕಾಳು ಬೆಂದ ಮೇಲೆ ಅದರ ಬಿಸಿ ಆರಲು ಬಿಡಿ
ಇದೇ ಸಮಯದಲ್ಲಿ ತೆಂಗಿನ ತುರಿ, ರಸಂ ಪುಡಿ, ಹುಣಸೆ ರಸ, ಶುಂಠಿ, ಬೆಲ್ಲ,
ಅವರೆಕಾಳು ಹಾಕಿ ರುಬ್ಬಿ.
ನೀವು ನುಣ್ಣನೆ ರುಬ್ಬಿಕೊಳ್ಳಿ, ನೀರು ಸೇರಿಸಿ ರುಬ್ಬಿ
ಸ್ಟೆಪ್ 2
ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ
ಚಟ್ಪಟ್ ಶಬ್ದ ಬರುವಾಗ ಕರಿಬೇವು ಹಾಕಿ ರುಬ್ಬಿದ ಅವರೆಕಾಳು ಮಸಾಲೆ ಹಾಕಿ,
ಸ್ವಲ್ಪ ನೀರು ಸೇರಿಸಿ ಕುದಿಸಿ, ಉಪ್ಪು ಸರಿಯಾಗಿದೆಯೇ ಎಂದುನೋಡಿ ನಂತರ
ಕೊತ್ತಂಬರಿ ಸೊಪ್ಪು ಹಾಕ ಕುದಿಸಿದರೆ ರುಚಿ ರುಚಿಯಾದ ಅವರೆಕಾಳು ಸಾರು ರೆಡಿ.
ಇತರ ಸಲಹೆ
ಅವರೆಕಾಳಿನ ಸೀಸನ್ ಸಮಯದಲ್ಲಿ ಅವರೆಕಾಳು ಸಾರು ಮಿಸ್ ಮಾಡಲು ಯಾರೂ ಮಿಸ್ ಮಾಡಲ್ಲ, ಕೆಲವರಂತೂ ವಾರದಲ್ಲಿ 2-3 ಬಾರಿ ಮಾಡುತ್ತಾರೆ. ಅವರೆಕಾಳು ರಸಂ ಮಾಡುವಾಗ ಅದನ್ನು ಗ್ರೈಂಡ್ ಮಾಡಿ ಬಳಸುವುದರಿಂದ ರಸವನ್ನು ತಟ್ಟೆಯಲ್ಲಿ ಹಾಕಿ ಹೀರಿ ಕುಡಿಯುತ್ತೀರಿ, ಅಷ್ಟೊಂದು ರುಚಿಯಾಗಿರುತ್ತದೆ.
ಅವರೆಕಾಳು ರಸಂ ಮಾಡುವಾ ಟೊಮೆಟೊ ಸ್ವಲ್ಪ ಎಣ್ಣೆಯಲ್ಲಿಫ್ರೈ ಮಾಡಿ ಅದನ್ನು ಕೂಡ ಗ್ರೈಂಡ್ ಮಾಡಿ ಸೇರಿಸಿ, ಹುಣಸೆ ಬದಲಿಗೆ ನಿಂಬೆರಸ ಸೇರಿಸಬಹುದು.
ಈ ಅವರೆಕಾಳು ರಸಂ ನೀವು ಸಿಪ್ಪೆ ಸಹಿತ ಗ್ರೈಂಡ್ ಮಾಡುವುದರಿಂದ ಸಿಪ್ಪೆಯಲ್ಲಿರುವ ಗುಣಗಳು ದೇಹಕ್ಕೆ ದೊರೆಯುತ್ತದೆ.
ರೆಡಿಯಾದ ಅವರೆಕಾಳು ರಸಂ ಬಿಸಿ ಬಿಸಿ ಅನ್ನದ ಜೊತೆಯಲ್ಲಿ ತಿನ್ನಲು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications
