Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಂಜೆಯ ಸ್ನ್ಯಾಕ್ಸ್‌ಗೆ ಹಿತಕಿದ ಅವರೆಕಾಳಿನ ಮಿಕ್ಸ್ಚರ್.! ಇಲ್ಲಿದೆ ಸುಲಭದ ತಿಂಡಿ!
ಮನೆಯಲ್ಲಿ ಅದ್ರಲ್ಲೂ ಈ ಮಳೆಗಾಲದ ಸಮಯದಲ್ಲಿ ಸಂಜೆ ವೇಳೆ ಯಾವುದದರು ಸ್ನ್ಯಾಕ್ಸ್ ಸವಿಯಲು ಇದ್ದರೆ ದಿನವಂತು ಅದ್ಭುತವಾಗಿರಲಿದೆ. ಹಾಗೆ ಸಂಜೆ ವೇಳೆ ನೀವು ಹಲವು ರೀತಿಯ ಸ್ನ್ಯಾಕ್ಸ್ ಅನ್ನು ಮನೆಯಲ್ಲಿ ಮಾಡಿ ಅಥವಾ ಅಂಗಡಿಯಂದ ತಂದು ಸವಿಯುವುದು ಸಾಮಾನ್ಯ. ಹಾಗೆ ಮನೆಯಲ್ಲಿ ನೀವು ಸ್ನ್ಯಾಕ್ಸ್ ಆಗಿ ಬೋಂಡಾ, ಬಜ್ಜಿ, ಮಸಾಲೆ ಕಡಲೆ, ಬಿಸ್ಕೇಟ್ ಸೇರಿದಂತೆ ಹಲವು ರಿತಿಯ ಸೈಡ್ಸ್ ಸವಿಯಲು ಇಷ್ಟಪಡುತ್ತೀರಿ.
ಹಾಗೆ ಸ್ನ್ಯಾಕ್ಸ್ ಅಂದ ಮಾತ್ರಕ್ಕೆ ಅಲ್ಲಿ ರುಚಿ ರುಚಿಯ ಕರಿದ ತಿಂಡಿಗಳು ನಿಮಗೆ ನೆನಪಾಗಬಹುದು. ಅದರಲ್ಲೂ ಮಸಾಲೆ ಭರಿತ ಕಡಲೆಗಳು ಕಾಫಿ ಟೀ ಜೊತೆಗೆ ಅದ್ಭುತ ರುಚಿ ನೀಡಲಿವೆ. ಹೀಗಾಗಿ ನಾವಿಂದು ಮನೆಯಲ್ಲೇ ಸವಿಯುವಂತಹ ರುಚಿ ರಚಿಯಾದ ಹಿತಕಿದ ಅವರೆಕಾಳಿನ ಮಿಕ್ಸ್ಚರ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.

ಈ ಕಾಳನ್ನು ನೀವು ಬೇಕರಿಗಳಲ್ಲಿ, ಅಂಗಡಿಗಳಲ್ಲಿ ನೋಡಿರಬಹುದು. ಹಾಗೆ ಈ ಹಿತಕಿದ ಅವರೆಕಾಳಿನಿಂದ ಹಲವು ಬಗೆಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದರಲ್ಲೂ ಸಂಬಾರಗೆ ಗ್ರೇವಿ, ಉಪ್ಪಿಟ್ಟು , ಸೇರಿ ಹಲವು ಬಗೆಯ ಖಾದ್ಯಗಳಿಗೆ ಈ ಕಾಳು ಬಳಸುವುದು ಸಹ ನೋಡಬಹುದು. ಆದ್ರೆ ನಾವಿಂದು ಹಿತಕಿದ ಅವರೆಕಾಳಿನ ಅದ್ಭುತ ಮಿಕ್ಸ್ಚರ್ ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹಿತಕಿದ ಅವರೆಕಾಳಿನ ಮಿಕ್ಸ್ಚರ್ ಮಾಡು ಯಾವೆಲ್ಲಾ ವಸ್ತು
ಬೇಕು?
- ಅವರೆಕಾಳು
- ಶೇಂಗಾ ಬೀಜ
- ಕರಿಬೇವು
- ಖಾರದ ಪುಡಿ
- ಉಪ್ಪು
- ಎಣ್ಣೆ
- ಬೆಳ್ಳುಳ್ಳಿ
- ಒಣ ಮೆಣಸು
- ಜೀರಿಗೆ ಪುಡಿ
ಹಿತಕಿದ ಅವರೆಕಾಳಿನ ಮಿಕ್ಸ್ಚರ್ ಮಾಡುವುದು ಹೇಗೆ?
ಹಿತಕಿದ ಅವರೆಕಾಳನ್ನು ತೊಳೆದ ಒಂದು ಕಾಟನ್ ಬಟ್ಟೆ ಮೇಲೆ ಹಾಕಿ ತೇವಾಂಶ ಒಣಗಲು ಬಿಡಿ. 5 ನಿಮಿಷದ ಬಳಿಕ ಒಂದು ತಟ್ಟೆಗೆ ಹಾಕಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಸ್ವಲ್ಪ ಹೆಚ್ಚಾಗಿೇ ಹಾಕಿಕೊಳ್ಳಿ. ನಂತರ ಚೆನ್ನಾಗಿ ಎಣ್ಣೆ ಕಾದ ಬಳಿಕ ಒಣಗಿದ ಈ ಅವರೆಕಾಳನ್ನು ಈ ಎಣ್ಣೆಯೊಳಗೆ ಹಾಕಿಕೊಂಡು ಚೆನ್ನಾಗಿ ಕರಿಯಲು ಬಿಡಿ.
ಅದು ನೊರೆ ಬಂದು ಚೆನ್ನಾಗಿ ಕರಿದುಕೊಳ್ಳಬೇಕು. ಮಧ್ಯಮ ಉರಿಯಲ್ಲಿ 3ರಿಂದ 4 ನಿಮಿಷ ಹುರಿದು ಆಗಾಗ ತಿರುಗಿಸಿಕೊಳ್ಳಿ. ಚೆನ್ನಾಗಿ ಕರಿದ ಈ ಕಾಳುಗಳು ಮೇಲೆ ಬರಲಿವೆ ಆಗ ತೆಗೆದು ಪೇಪರ್ ಹಾಕಿರುವ ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಎಣ್ಣೆಗೆ ಶೇಂಗಾ ಬೀಜ ಸಹ ಹಾಕಿ ಪ್ರೈ ಮಾಡಿಕೊಂಡು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ಹುರಿಗಡಲೆಯನ್ನು ಕೂಡ ಫ್ರೈ ಮಾಡಿಕೊಳ್ಳಿ.
ಅನಂತರ ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು ಕೂಡ ಇದೇ ಎಣ್ಣೆಯಲ್ಲಿ ಹಾಕಿ ಕರಿದು ಇಟ್ಟುಕೊಳ್ಳಿ. ಈಗ ಹುರಿದುಕೊಂಡಿದ್ದ ಎಲ್ಲಾ ಪದಾರ್ಥಗಳನ್ನು ಅವರೆಕಾಳಿನ ಜೊತೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಜಿರಿಗೆ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಹಿತಕಿದ ಅವರೆಕಾಳಿನ ಮಿಕ್ಸ್ಚರ್ ರೆಡಿಯಾಗುತ್ತದೆ. ನೀವು ಸಹ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
