Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಲ್ದಿ & ಟೇಸ್ಟಿ.. ಸಿಂಪಲ್ಲಾಗೊಂದ್ ಅವರೆಕಾಳು ದೋಸೆ ಮಾಡಿ! ಸುಲಭ ವಿಧಾನ ಇಲ್ಲಿದೆ
ನೀವು ಅವರೆಕಾಯಿ ಪ್ರಿಯರೇ? ಸಿಂಪಲ್ಲಾಗೊಂದ್ ಅವರೆಕಾಳು ದೋಸೆ ಮಾಡಿ ನೋಡಿ. ಇದು ರುಚಿ ಮತ್ತು ಆರೋಗ್ಯದ ಸಮ್ಮಿಲನ. ಹೌದು, ಅವರೆಕಾಯಿ ಅಥವಾ ಅವರೆಕಾಳು ದೋಸೆ (Avarekalu Dosa) ಒಂದು ಪೌಷ್ಟಿಕಾಂಶ ಭರಿತ ಖಾದ್ಯವಾಗಿದೆ. ದೋಸೆ ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದಿನಬೇಳೆಯಿಂದ ತಯಾರಿಸಲಾಗುತ್ತದೆ. ಆದರೆ, ಅವರೆಕಾಯಿ ದೋಸೆ ಅದಕ್ಕೆ ಅವರೆಕಾಯಿಯನ್ನು ಸೇರಿಸಿ ಮಾಡಲಾಗುತ್ತದೆ. ಇದು ಸಾಂಪ್ರದಾಯಿಕ ದೋಸೆಗೆ ಹೊಸ ರುಚಿ ನೀಡುತ್ತದೆ. ಅವರೆಕಾಯಿ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸುವ ದ್ವಿದಳ ಧಾನ್ಯವಾಗಿದ್ದು, ಇದನ್ನು ಅನೇಕ ಸಾಂಪ್ರದಾಯಿಕ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಅವರೆಕಾಯಿಯ ಸೇವನೆಯು ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ.
ಪ್ರತಿದಿನ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಎಂಬುದು ಅನೇಕ ಮಹಿಳೆಯರಿಗೆ ಸವಾಲಿನ ವಿಷಯ. ಇಡ್ಲಿ, ದೋಸೆ, ಉಪ್ಪಿಟ್ಟು, ಚಿತ್ರಾನ್ನಗಳಂತಹ ಸಾಮಾನ್ಯ ತಿಂಡಿಗಳಿಂದ ಮನೆಯವರಿಗೂ ಬೇಸರವಾಗುತ್ತದೆ. ಈ ಕಾರಣದಿಂದಾಗಿ, ಅನೇಕರು ಪ್ರತಿದಿನ ಹೊಸ ತಿಂಡಿಗಳನ್ನು ಪ್ರಯತ್ನಿಸಲು ಬಯಸುತ್ತಾರೆ. ಇನ್ನು ಕೆಲವರು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ಆನ್‌ಲೈನ್ ವೇದಿಕೆಗಳಿಂದ ಹೊಸ ಹೊಸ ರೆಸಿಪಿಗಳನ್ನು ಕಲಿಯುತ್ತಾರೆ. ಇನ್ನೂ ಕೆಲವರು ಕಾಲೋಚಿತ ತರಕಾರಿಗಳನ್ನು ಬಳಸಿಕೊಂಡು ಬೆಳಗ್ಗಿನ ಉಪಾಹಾರವನ್ನು ತಯಾರಿಸುತ್ತಾರೆ. ಹೀಗೆ, ಪ್ರಸ್ತುತ ಕಾಲದಲ್ಲಿ ಲಭ್ಯವಿರುವ ಅವರೆಕಾಯಿಯಿಂದ ರುಚಿಕರವಾದ ತಿನಿಸುಗಳನ್ನು ತಯಾರಿಸಬಹುದು.

ಅವರೆಕಾಳು ದೋಸೆಯನ್ನು ಸಾಮಾನ್ಯವಾಗಿ ಚಟ್ನಿ, ಸಾಂಬಾರ್ ಅಥವಾ ಯಾವುದೇ ಇತರ ಪಲ್ಯದೊಂದಿಗೆ ಸವಿಯಬಹುದು. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ಭಾರತದ ಇತರ ಭಾಗಗಳಲ್ಲೂ ಜನಪ್ರಿಯತೆ ಗಳಿಸುತ್ತಿದೆ. ಇದರ ರುಚಿ, ಸುಲಭವಾಗಿ ಜೀರ್ಣವಾಗುವ ಗುಣ ಮತ್ತು ಆರೋಗ್ಯಕಾರಿ ಅಂಶಗಳಿಂದಾಗಿ, ಇದು ಒಂದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ. ವಿಶೇಷವಾಗಿ ಚಳಿಗಾಲದಲ್ಲಿ, ತಾಜಾ ಅವರೆಕಾಯಿ ಲಭ್ಯವಿರುವ ಸಮಯದಲ್ಲಿ, ಈ ದೋಸೆಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಈ ದೋಸೆಯು ರುಚಿ ಮತ್ತು ಆರೋಗ್ಯದ ಉತ್ತಮ ಸಮ್ಮಿಲನವಾಗಿದೆ. ಅವರೆಕಾಯಿ ದೋಸೆಯನ್ನು (Avarekai Dosa) ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಅವರೆಕಾಳು ದೋಸೆ ಮಾಡಲು ಬೇಕಾಗುವ ಪದಾರ್ಥಗಳು
• ಅವರೆಕಾಯಿ ಅಥವಾ ಅವರೆಕಾಳು (ಬಿಡಿಸಿದ್ದು)
• ದೋಸೆ ಹಿಟ್ಟು,
• ಹಸಿಮೆಣಸು
• ಈರುಳ್ಳಿ
• ಕ್ಯಾರೆಟ್
• ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
• ಎಣ್ಣೆ

ಅವರೆಕಾಳು ದೋಸೆ ಮಾಡುವ ವಿಧಾನ
ಮೊದಲಿಗೆ, 3 ಕಪ್ ಬಿಡಿಸಿದ ಅವರೆಕಾಳನ್ನು ಕುಕ್ಕರ್‌ನಲ್ಲಿ ಹಾಕಿ 4 ಸೀಟಿ (ವಿಜಲ್) ಬರುವವರೆಗೆ ಬೇಯಿಸಿ. ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಚಿಕ್ಕದಾಗಿ ಕತ್ತರಿಸಿದ 4 ರಿಂದ 5 ಹಸಿಮೆಣಸು, ಸಣ್ಣಗೆ ಹೆಚ್ಚಿದ 1 ಈರುಳ್ಳಿ (1 ಕಪ್) ಮತ್ತು ಅರ್ಧ ಕಪ್ ತುರಿದ ಕ್ಯಾರೆಟ್ ಹಾಕಿ 2 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ. ನಂತರ, ಇದನ್ನು ಅರ್ಧ ಕಿಲೋ ದೋಸೆ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಕುಕ್ಕರ್‌ನಲ್ಲಿ ಬೇಯಿಸಿದ ಅವರೆಕಾಳುಗಳನ್ನು ದೋಸೆ ಮಿಶ್ರಣಕ್ಕೆ ಸೇರಿಸಿ. ಅವರೆಕಾಳು ಹೆಚ್ಚಾಗಿ ಮ್ಯಾಶ್ ಆಗದಂತೆ ನೋಡಿಕೊಳ್ಳಿ. ಅವರೆಕಾಳು ಸೇರಿಸಿದ ನಂತರ ಸ್ವಲ್ಪ ಉಪ್ಪು ಹಾಕಿ. ನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ, ಸಾಮಾನ್ಯವಾಗಿ ಉದ್ದಿನ ದೋಸೆ ಮಾಡುವಂತೆ ಹೆಂಚಿನ ಮೇಲೆ ದೋಸೆ ಬಿಡಿ. ದೋಸೆ ಹಾಕಿದ ನಂತರ 4 ರಿಂದ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿದರೆ, ರುಚಿ ರುಚಿಯಾದ ಅವರೆಕಾಳು ದೋಸೆ ಸವಿಯಲು ಸಿದ್ಧ.

ಅವರೆಕಾಳು ದೋಸೆಯನ್ನು ಕಾಯಿ ಚಟ್ನಿ ಅಥವಾ ತುಪ್ಪದೊಂದಿಗೆ ಸವಿಯಬಹುದು. ಅತಿಥಿಗಳು ಮನೆಗೆ ಬಂದಾಗ ಸುಲಭವಾಗಿ ಈ ಅವರೆಕಾಳು ದೋಸೆಯನ್ನು ಬೆಳಗಿನ ಉಪಾಹಾರವಾಗಿ ತಯಾರಿಸಬಹುದು. ಇದು ರುಚಿಯಲ್ಲಿ ಸಾಂಪ್ರದಾಯಿಕ ದೋಸೆಯಂತೆಯೇ ಇದ್ದರೂ, ಅವರೆಕಾಯಿ ಸೇರ್ಪಡೆಯಿಂದ ವಿಶಿಷ್ಟವಾದ ಪರಿಮಳ ಮತ್ತು ಸುವಾಸನೆ ಹೊಂದಿರುತ್ತದೆ. ಇದು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ಉಪಾಹಾರವಾಗಿರುವುದಲ್ಲದೆ, ದೇಹಕ್ಕೆ ಅಗತ್ಯವಾದ ಪ್ರೋಟೀನ್ ಮತ್ತು ಫೈಬರ್ ಅನ್ನು ಸಹ ಒದಗಿಸುತ್ತದೆ.



Click it and Unblock the Notifications