Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಕೃಷ್ಣ ಜನ್ಮಾಷ್ಟಮಿಗೆ ಅವಲಕ್ಕಿ ಪ್ರಸಾದ ಮಾಡಿ..! ಇಲ್ಲಿದೆ ರೆಸಿಪಿ
ಕೃಷ್ಣ ಜನ್ಮಾಷ್ಟಮಿ ಹಬ್ಬ ಹತ್ತಿರವಾಗುತ್ತಿದೆ. ಹೀಗಾಗಿ ಈಗಲೇ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ಕೃಷ್ಣ ಜನ್ಮಾಷ್ಟಮಿಯು ಇದೆ ಆಗಸ್ಟ್ 26 ರಂದು ಆಚರಿಸಲಾಗುತ್ತಿದೆ. ಇತ್ತ ಹಬ್ಬಕ್ಕೆ ಯಾವ ತಿಂಡಿ ಮಾಡಬೇಕು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ನೀಡುವ ಯತ್ನ ಮಾಡಿದ್ದೇವೆ.
ಕೃಷ್ಣ ಜನ್ಮಾಷ್ಟಮಿಯಂದು ನೈವೇಧ್ಯ ಮಾಡಲು ಯಾವ ತಿಂಡಿ ಮಾಡಬೇಕು? ನೈವೇಧ್ಯ ಹಾಗು ಮನೆ ಮಂದಿ ಎಲ್ಲ ಕುಳಿತು ಸವಿಯುವ ತಿಂಡಿ ಅಂದ್ರೆ ಅವಲಕ್ಕಿ ಪ್ರಸಾದ. ಅವಲಕ್ಕಿ ಪ್ರಸಾದ ಹಬ್ಬದಲ್ಲಿ ಮಾಡಿದರೆ ನೈವೇದ್ಯಕ್ಕೂ, ಮನೆಯಲ್ಲಿ ಸವಿಯಲು ಸಹ ನೀಡಬಹುದು. ಹಾಗಾದ್ರೆ ಹಬ್ಬಕ್ಕೆ ಅವಲಕ್ಕಿ ನೈವೇಧ್ಯ ಮಾಡುವುದು ಹೇಗೆ? ಅವಲಕ್ಕಿ ನೈವೇಧ್ಯ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.

ಅವಲಕ್ಕಿ ಪ್ರಸಾದ ಮಾಡಲು ಬೇಕಾಗುವ ಪದಾರ್ಥಗಳು
- ದಪ್ಪ ಅವಲಕ್ಕಿ - 1 ಕಪ್
- ತುಪ್ಪ
- ಎಣ್ಣೆ
- ತೆಂಗಿನ ತುರಿ
- ಏಲಕ್ಕಿ ಪುಡಿ
- ತುರಿದ ಬೆಲ್ಲ
- ಉಪ್ಪು
ಅವಲಕ್ಕಿ ಪ್ರಸಾದ ಮಾಡುವ ವಿಧಾನ
ಮೊದಲು ಒಂದು ಕಪ್ ದಪ್ಪ ಅವಲಕ್ಕಿ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು ಎರಡು ಬಾರಿ ತೊಳೆದುಕೊಂಡರೆ ಉತ್ತಮ. ಇದಾದ ಬಳಿಕ ನೀರನ್ನು ತೆಗೆದು ಅವಲಕ್ಕಿಯನ್ನು ಚೆನ್ನಾಗಿ ಹಿಂಡಿಕೊಳ್ಳಿ. ಬಳಿಕ ಒಂದು ಬೌಲ್ ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕೈ ನಿಂದ ಕಲಸಿಕೊಳ್ಳಿ.
ನಂತರ ಅವಲಕ್ಕಿ ನೆನೆಯಲು 10 ನಿಮಿಷ ಬಿಟ್ಟು ನಂತರ ಹಾಗೆಯೆ ಮುಚ್ಚಿ ಇಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇತ್ತು ಅದಕ್ಕೆ ಎರಡು ಸ್ಪೂನ್ ನೀರು ಹಾಕಿ. ಇದಕ್ಕೆ ಈಗ ಅವಲಕ್ಕಿ ಅಳತೆ ಮಾಡಿದ್ದ ಕಪ್ನಲ್ಲಿ ಅರ್ಧ ಕಪ್ ಅಷ್ಟು ತುರಿದ ಬೆಲ್ಲ ಹಾಕಿಕೊಳ್ಳಿ. ಇದನ್ನು ನೀರಿನೊಂದಿಗೆ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲಸಿಕೊಳ್ಳಿ .
ಬೆಲ್ಲ ಕುದಿ ಬಂದ ಬಳಿಕ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ಹಾಗೂ 2 ಸ್ಪೂನ್ ತೆಂಗಿನಕಾಯಿ ತುರಿಯನ್ನು ಸಹ ಹಾಕಿಕೊಳ್ಳಿ ಈಗ ಒಂದು ನಿಮಿಷದವರೆಗೂ ಇದನ್ನು ಮಿಕ್ಸ್ ಮಾಡುತ್ತಾ ಇರಿ 3 ನಿಮಿಷ ಮಿಕ್ಸ್ ಮಾಡಿದ ಬಳಿಕ ಇದಕ್ಕೆ ನೆನೆಹಾಕಿದ್ದ ಅವಲಕ್ಕಿ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ ಬೇಕಾದ್ರೆ ಚಿಟಿಕೆಯೇಷ್ಟು ಉಪ್ಪು ಸಹ ಹಾಕಿಕೊಳ್ಳಿ.
1 ನಿಮಿಷ ಮಿಕ್ಸ್ ಮಾಡಿದ ಬಳಿಕ ಒಲೆಯನ್ನು ಆಫ್ ಮಾಡಿ ಮುಚ್ಚಳ ಮುಚ್ಚಿ ಹಾಗೆಯೇ ಇಡಿ. 10 ನಿಮಿಷದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ತುಪ್ಪ ಇದ್ದರೆ ಅದಕ್ಕೆ ಹಾಕಿ ಮಿಕ್ಸ್ ಮಾಡಿದರೆ ಅವಲಕ್ಕಿ ಪ್ರಸಾದ ರೆಡಿಯಾಗುತ್ತದೆ. ಇದನ್ನು ಹಬ್ಬದಂದು ನೈವೇಧ್ಯ ಮಾಡಲು ಹಾಗು ಮನೆಯಲ್ಲಿ ಮಕ್ಕಳೊಂದಿಗೆ ಸವಿಯಲು ಮಾಡಬಹುದು. ನೀವು ಸಹ ಹಬ್ಬದ ದಿನ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications