Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅವಲಕ್ಕಿ ಕಡಬು ಮಾಡಿದ್ದೀರಾ..! ಸಖತ್ ರುಚಿ..ಸಿಂಪಲ್ ರೆಸಿಪಿ
ನೀವು ಅವಲಕ್ಕಿಯಲ್ಲಿ ಹಲವು ವಿಧವಾದ ತಿಂಡಿಯನ್ನು ಮಾಡಿರುತ್ತೀರಿ. ಅದರಲ್ಲೂ ಬೆಳಗ್ಗೆಯ ತಿಂಡಿಗೆ ಒಗ್ಗರಣೆ ಅವಲಕ್ಕಿ, ಗೊಜ್ಜು ಅವಲಕ್ಕಿ, ಮಸಾಲೆ ಅವಲಕ್ಕಿ ಹೀಗೆ ಹತ್ತಾರು ಬಗೆಯ ಖಾದ್ಯ ಮಾಡಿ ಸವಿಯಬಹುದು. ಅದೇ ರೀತಿ ಅವಲಕ್ಕಿಯನ್ನು ಇಡ್ಲಿ, ದೋಸೆ ಮಾಡುವಾಗಲು ಹಿಟ್ಟು ಮೃದುವಾಗಿ ಬರಲಿ ಎಂಬ ಕಾರಣಕ್ಕೆ ಬಳಸಲಾಗುತ್ತದೆ. ಹಾಗೆ ಅವಲಕ್ಕಿಯಿಂದ ಮಾಡಿವ ಖಾದ್ಯ ಒಂದಿಷ್ಟು ದಿನಗಳ ಕಾಲ ಸಹ ಇಟ್ಟು ಸವಿಯೋದನ್ನು ನಾವು ನೋಡಿರುತ್ತೇವೆ.
ಆದ್ರೆ ನಾವಿಂದು ಈ ಅವಲಕ್ಕಿಯ ಬಳಸಿ ಮಾಡುವಂತಹ ರುಚಿಕರ ಕಡಬು ತಿಂಡಿ ಕುರಿತು ತಿಳಿಯೋಣ. ನೀವು ಅಕ್ಕಿ ಹಿಟ್ಟಿನಿಂದ ಮಾಡುವಂತಹ ಕಡಬು ಸವಿದಿರಬಹುದು. ಮಲೆನಾಡು, ಕರಾವಳಿ ಸೇರಿ ಹಲವು ಭಾಗದಲ್ಲಿ ಕಡಬು ತುಂಬಾನೆ ಫೇಮಸ್ ಖಾದ್ಯ. ಅಕ್ಕಿ ಹಿಟ್ಟಿನ್ನು ಹದ ಮಾಡಿ ಕೆಲವೆ ನಿಮಿಷದಲ್ಲಿ ಈ ಕಡಬು ಮಾಡಲಾಗುತ್ತೆ.

ಆದ್ರೆ ಅವಲಕ್ಕಿ ಬಳಸಿ ಮೃದುವಾದ ಕಡಬು ಮಾಡಬಹುದು. ಇದು ಎಲ್ಲರು ಸವಿಯಬಹುದಾದ, ಬಾಯಿ ರುಚಿ ಹೆಚ್ಚಿಸುವಂತಹ ಖಾದ್ಯ ವಾಗಿರಲಿದೆ. ಹಾಗಾದ್ರೆ ಈ ಅವಲಕ್ಕಿ ಕಡಬು ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅವಲಕ್ಕಿ ಕಡಬು ಮಾಡಕು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ಇಲ್ಲಿ ತಿಳಿಯೋಣ.
ಅವಲಕ್ಕಿ ಕಡಬು ಮಾಡಕು ಬೇಕಾಗುವ ಪದಾರ್ಥಗಳು
ಅವಲಕ್ಕಿ
ಉದ್ದಿನ ಬೇಳೆ
ಜೀರಿಗೆ
ಸಾಸಿವೆ
ಈರುಳ್ಳಿ
ಕರಿಬೇವು
ಕೊತ್ತಂಬರಿ ಸೊಪ್ಪು
ಹಸಿ ಮೆಣಸು
ಶುಂಠಿ
ತೆಂಗಿನಕಾಯಿ ತುರಿ
ಎಣ್ಣೆ
ಉಪ್ಪು
ಅವಲಕ್ಕಿ ಕಡಬು ಮಾಡುವುದು ಹೇಗೆ?
ಮೊದಲಿಗೆ ದಪ್ಪ ಅವಲಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆದು ಅದಕ್ಕೆ ಮಜ್ಜಿಗೆ ಹಾಕಿ ನೆನೆಸಿಡಬೇಕು. 30 ನಿಮಿಷ ನೆನೆಯಲು ಬಿಟ್ಟರೆ ಸಾಕಾಗುತ್ತದೆ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾದಾಗ ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಉದ್ದಿನ ಬೇಳೆ, ಜೀರಿಗೆ ಹಾಕಿ ಅನಂತರ ಒಂದು ಈರುಳ್ಳಿ ಕೂಡ ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. (ನೀವು ಅವಲಕ್ಕಿ ತೆಗೆದುಕೊಂಡ ಕಪ್ನಲ್ಲೇ ಮಜ್ಜಿಗೆ ಕೂಡ ಅಳತೆ ಮಾಡಿ ತೆಗೆದುಕೊಳ್ಳಿ)
ಅನಂತರ ಸಣ್ಣದಾಗಿ ಹೆಚ್ಚಿರುವ ಶುಂಠಿ, ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಒಟ್ಟು 3 ನಿಮಿಷ ಫ್ರೈ ಮಾಡಿದ್ದರೆ ಸಾಕು. ಈಗ ಮಜ್ಜಿಗೆಯಲ್ಲಿ ನೆನೆಸಿಟ್ಟಿರುವ ಅವಲಕ್ಕಿ ತೆಗೆದುಕೊಳ್ಳಿ. ಅದಕ್ಕೆ ಬಾಣಲೆಯಲ್ಲಿರುವ ಒಗ್ಗರಣೆಯನ್ನು ಕೂಡ ಹಾಕಿ ಹಾಗೆ ತೆಂಗಿನ ತುರಿ ಸ್ವಲ್ಪ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ.
ಇದು ಉಂಡೆ ಕಟ್ಟುವ ಹದಕ್ಕೆ ಬರುವಂತೆ ಹಿಟ್ಟು ರೆಡಿಮಾಡಿಕೊಳ್ಳಿ. ಬಹಳ ತೆಳುವಾಗಿ ಅಥವಾ ಗಟ್ಟಿಯಾಗಿ ಇದು ಇರಬಾರದು, ಹಿಟ್ಟು ಉಂಡೆ ಮಾಡುವಂತಹ ಹದ ಮಾಡಿಕೊಳ್ಳಬೇಕು. ನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಈಗ ಕಡಬು ಮಾಡುವ ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದು ಬಿಸಿಯಾದಾಗ ಕಡಬುಗಳನ್ನು ಇಟ್ಟು ಮುಚ್ಚಳ ಮುಚ್ಚಿ.
ಸುಮಾರು 10 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಇಷ್ಟಾದರೆ ಮನೆ ಮಂದಿ ಎಲ್ಲ ಕುಳಿತು ಸವಿಯಬಹುದಾದ ಅವಲಕ್ಕಿ ಕಡಬು ರೆಡಿಯಾಗುತ್ತದೆ, ನೀವು ಕೂಡ ಬ್ರೇಕ್ ಫಾಸ್ಟ್ಗೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications