Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
1 ಕಪ್ ಅವಲಕ್ಕಿ, ಬೆಲ್ಲ ಇದ್ರೆ ಈ ರುಚಿಯ ಹಲ್ವಾ ರೆಡಿ: ಮಾಡೋದು ಕೂಡ ಬಹಳ ಸುಲಭ!
ಮನೆಯಲ್ಲಿ ಪೂಜೆ, ಶುಭ ಕಾರ್ಯ, ಅತಿಥಿಗಳು ಬಂದಾಗ ಅಥವಾ ಹಬ್ಬವಿದ್ದಾಗ ಎಲ್ಲರು ಸಿಹಿ ತಿಂಡಿಯಂತು ಮಾಡಿಯೇ ಮಾಡುತ್ತಾರೆ. ಸಿಹಿ ತಿಂಡಿಯನ್ನು ಖರೀದಿಸಿ ತರುವುದಕ್ಕಿಂತ ಮನೆಯಲ್ಲೇ ಮಾಡಿ ಸವಿಯೋದು ಬಹಳ ರುಚಿ ಹಾಗೆ ಆರೋಗ್ಯದ ದೃಷ್ಟಿಯಲ್ಲೂ ಇದು ಬಹಳ ಉತ್ತಮ. ಹಾಗೆ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಬಹಳ ಸುಲಭವಾಗಿ ಮಾಡುವಂತಹ ಹಲವು ತಿಂಡಿಗಳಿವೆ. ಅದ್ರಲ್ಲಿ ಈ ಕೇಸರಿಬಾತ್ ಹಾಗೆ ಹಲ್ವಾ ಈ ಎರಡು ತಿಂಡಿಗಳ ಬಹಳಷ್ಟು ಮಂದಿ ಇಷ್ಟಪಡುತ್ತಾರೆ.
ಇದನ್ನು ಮಾಡುವುದು ಕೂಡ ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದಾಗಿದೆ. ಇಂತಹ ರುಚಿಯ ತಿಂಡಿಗಳಲ್ಲಿ ನಾವಿಂದು ಅವಲಕ್ಕಿ ಬಳಸಿ ಮಾಡುವ ಅತ್ಯಂತ ರುಚಿಕರ ಹಲ್ವ ಮಾಡುವ ಕುರಿತು ತಿಳಿಯೋಣ. ಈ ಅವಲಕ್ಕಿ ಬಳಸಿಕೊಂಡು ಹಲವು ಪ್ರಕಾರದ ತಿಂಡಿಗಳ ಮಾಡಿರುತ್ತೀರಿ. ಆದ್ರೆ ಈ ರೀತಿಯಾಗಿ ರುಚಿ ರುಚಿಯ ಹಲ್ವಾ ಎಂದಾದ್ರು ಮಾಡಿದ್ದೀರಾ?

ನಾವಿಂದು ಕೇವಲ 2 ವಸ್ತುಗಳ ಬಳಸಿಕೊಂಡು ಅವಲಕ್ಕಿಯ ಹಲ್ವಾ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಒಮ್ಮೆ ನೀವು ಈ ಸಿಹಿ ತಿಂಡಿ ಮಾಡಿ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುವುದು ಖಚಿತ. ಹಾಗಾದ್ರೆ ನಾವಿಂದು ಅವಲಕ್ಕಿ ಹಲ್ವಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾದ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ಅವಲಕ್ಕಿ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಅವಲಕ್ಕಿ
- ಬೆಲ್ಲ
- ತೆಂಗಿನಕಾಯಿ
- ಏಲಕ್ಕಿ
- ಗೋಡಂಬಿ
- ಬಾದಾಮಿ
- ತುಪ್ಪ
- ಎಣ್ಣೆ
ಅವಲಕ್ಕಿ ಹಲ್ವಾ ಮಾಡುವುದು ಹೇಗೆ?
ಮೊದಲು ಒಂದು ಕಪ್ ದಪ್ಪ ಅವಲಕ್ಕಿ ತೆಗೆದುಕೊಂಡು ಮಿಕ್ಸಿ ಜಾರ್ಗೆ ಜಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ರವೆಯ ರೀತಿ ಇದು ಬರಬೇಕು. ನಂತರ ಅದೇ ಜಾರ್ಗೆ ತೆಂಗಿನಕಾಯಿ ಸಹ ಹಾಕಿ ಬೇರೆ ಬೇರೆಯಾಗಿ ರುಬ್ಬಿಬೇಕು. ತೆಂಗಿನಕಾಯಿಗೆ ಏಲಕ್ಕಿ ಹಾಗೂ ಶೇಂಗಾ ಕಡಲೆ ಹಾಕಿ ರುಬ್ಬಿ ಇಟ್ಟುಕೊಳ್ಳಿ. ಇದು ಪೇಸ್ಟ್ ರೀತಿ ಇರಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ 2 ಸ್ಪೂನ್ ತುಪ್ಪ ಹಾಕಿ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಗೋಡಂಬಿ, ಬಾದಾಮಿ ಹಾಕಿ ಹುರಿದುಕೊಂಡು ನಂತರ ಎಲ್ಲವನ್ನು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ತುಪ್ಪ ಸಹ ತೆಗೆದಿಡಿ. ಈಗ ಅದೇ ಬಾಣಲೆಗೆ ಮುಕ್ಕಾಲು ಕಪ್ ಬೆಲ್ಲ ಹಾಕಿ 1 ಕಪ್ ನೀರು ಹಾಕಿ ಕರಗಲು ಬಿಡಿ.
ಬೆಲ್ಲ ಕರಗಿದ ಬಳಿಕ ಬೆಲ್ಲದ ನೀರನ್ನು ಜರಡಿ ಹಿಡಿದು ಮತ್ತೆ ಅದೇ ಬಾಣಲೆಗೆ ಹಾಕಿ ಬಿಸಿಯಾಗಲು ಬಿಡಿ. ಬೆಲ್ಲದ ನೀರು ಬಿಸಿಯಾದಾಗ ಇದಕ್ಕೆ ಮೊದಲು ರುಬ್ಬಿಕೊಂಡಿದ್ದ ತೆಂಗಿನಕಾಯಿ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ. 1 ನಿಮಿಷ ಬಟ್ಟು ರುಬ್ಬಿಕೊಂಡಿದ್ದ ಅವಲಕ್ಕಿಯ ಪುಡಿಯನ್ನು ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
ಸಣ್ಣ ಉರಿಯಲ್ಲಿ ಮಿಕ್ಸ್ ಮಾಡುತ್ತಾ ಇರಬೇಕು. ಇದು ಗಟ್ಟಿಯಾಗುತ್ತಾ ಬರಲಿದೆ. 2ರಿಂದ 3 ನಿಮಿಷ ಮಿಕ್ಸ್ ಮಾಡುತ್ತಾ ಇರಬೇಕು. ಹಾಗೆ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ ಹಾಗೆ ಮೊದಲು ತೆಗೆದಿಟ್ಟ ತುಪ್ಪವನ್ನು ಸಹ ಇದಕ್ಕೆ ಹಾಕಿಕೊಂಡು 5 ನಿಮಿಷಗಳ ಕಾಲ ಮಿಕ್ಸ್ ಮಾಡುತ್ತಾ ಇರಿ. ಇದಕ್ಕೆ 2 ಹನಿ ಫುಡ್ ಕಲರ್ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಬಾಣಲೆಯಿಂದ ಇದು ಮೇಲೆ ಎದ್ದು ಬರಬೇಕು. ಆ ರೀತಿ ಹದಕ್ಕೆ ಬರಬೇಕು. ಇದು ತುಪ್ಪ ಬಿಡಬೇಕು.
ಇಷ್ಟಾದರೆ ನಿಮ್ಮ ಮುಂದೆ ಅವಲಕ್ಕಿ ಹಲ್ವಾ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ಸ್ವೀಟ್ ಒಮ್ಮೆ ಮಾಡಿ ಸವಿದು ನೋಡಿ.



Click it and Unblock the Notifications
