Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರುಚಿಯ ರುಚಿಯ ಅವಲಕ್ಕಿ ದೋಸೆ ಈರುಳ್ಳಿ ಚಟ್ನಿ ಮಾಡಿ ನೋಡಿ! ರುಚಿಯಂತು ಅದ್ಭುತ
ನೀವು ಬೆಳಗ್ಗೆ ತಿಂಡಿಗೆ ಅದ್ಬುತ ರುಚಿಯಲ್ಲಿ ದೋಸೆ ಮಾಡಿ ಸವಿಯಲು ಮುಂದಾಗೋದು ನೋಡಬಹುದು. ದೋಸೆ ರೆಸಿಪಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬಹುಳಷ್ಟು ಮಂದಿಗೆ ದೋಸೆ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಮಸಾಲೆ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ, ರವೆ ದೋಸೆಗಳು ಅಂದ್ರೆ ಬಾಯಲ್ಲಿ ನೀರು ತರಿಸುತ್ತವೆ.
ಹಾಗೆ ದೋಸೆಯಲ್ಲಿ ವಿಧಗಳ ಪಟ್ಟಿ ಮಾಡಲು ನಿಂತರೆ ನೂರಾರು ದೋಸೆಗಳ ಹೆಸರು ಪಟ್ಟಿ ಮಾಡಬಹುದು. ಹಾಗೆ ಎಲ್ಲರಿಗೂ ಈ ದೋಸೆಗಳ ಸವಿಯುವುದು ಇಷ್ಟವಾಗುತ್ತೆ. ಮಕ್ಕಳಿಗೆ ದೋಸೆಯಲ್ಲಿ ವಿಶಿಷ್ಟ ಶೈಲಿಯ ದೋಸೆ ನೀಡಿದರೆ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ನಾವಿಂದು ಸುಲಭವಾಗಿ ಮಾಡಬಹುದಾದ ಹಾಗೆ ಅದ್ಭುತವಾದ ರುಚಿಯ ಅವಲಕ್ಕಿ ದೋಸೆ ಹಾಗೆ ಈರುಳ್ಳಿ ಕೆಂಪು ಚಟ್ನಿ ಮಾಡುವ ಕುರಿತು ತಿಳಿಯೋಣ.

ಅವಲಕ್ಕಿಯಲ್ಲಿ ಹಲವು ರೀತಿ ಖಾದ್ಯ ಮಾಡಬಹುದು ಅನ್ನೋದು ನಿಮಗೂ ತಿಳಿದಿದೆ. ಹಾಗೆ ದೋಸೆ ಇಡ್ಲಿಯೊಂದಿಗೆ ಅವಲಕ್ಕಿ ಬೆರೆಸಿ ಹಿಟ್ಟು ಮಾಡಿಕೊಳ್ಳುವುದು ಮೃದುವಾಗಿ ಬರಲು ಸಹಕಾರಿಯಾಗಲಿದೆ. ಹೀಗಾಗಿ ಈ ದೋಸೆಗೆ ಅವಲಕ್ಕಿ ಹಾಕಿ ಮಾಡುವುದು ನೋಡೋಣ. ಹಾಗೆ ದೋಸೆ ಸವಿಯಲು ಈರುಳ್ಳಿ ಚಟ್ನಿ ಸಹ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ
ಅವಲಕ್ಕಿ ದೋಸೆ ಹಾಗೂ ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳಿ ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಅವಲಕ್ಕಿ ದೋಸೆ ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವಲಕ್ಕಿ
- ರವಾ
- ಮೊಸರು
- ಈನೋ ಪುಡಿ
- ಈರುಳ್ಳಿ
- ಬೆಳ್ಳುಳ್ಳಿ
- ಬೆಲ್ಲ
- ಹುಣಸೆ ಹುಳಿ
- ಉಪ್ಪು
- ಎಣ್ಣೆ
ಅವಲಕ್ಕಿ ದೋಸೆ ಈರುಳ್ಳಿ ಚಟ್ನಿ ಮಾಡುವುದು ಹೇಗೆ?
ಮೊದಲು ಅವಲಕ್ಕಿಯನ್ನು ಬೌಲ್‌ನಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. 1 ಗ್ಲಾಸ್ ಅವಲಕ್ಕಿಗೆ ಒಂದು ಮೊಸರು ಹಾಕಿ ಮಿಕ್ಸ್ ಮಾಡಿ ಹಾಗೆ ಅರ್ಧ ಗ್ಲಾಸ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಕಲಸಿ ಒಂದು ತಟ್ಟೆ ಮುಚ್ಚಿ ಇಟ್ಟುಕೊಳ್ಳಿ. ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಒಂದೂ ವರೆ ಗ್ಲಾಸ್ ರೆವೆ ಹಾಕಿಕೊಳ್ಳಿ. ನಂತರ ಈ ರವೆ ಮುಳುಗುವಷ್ಟು ನೀರು ಹಾಕಿ 10 ನಿಮಿಷ ಬಿಡಿ.
ಈಗ 10 ನಿಮಿಷದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅವಲಕ್ಕಿ, ರವೆ, ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು. ದೋಸೆ ಹಿಟ್ಟಿನ ಹದದಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಮಿಕ್ಸ್ ಮಾಡಿದ ಬಳಿಕ ಇದಕ್ಕೆ 1 ಸ್ಪೂನ್ ಈನೋ ಪೌಡರ್ ಹಾಕಿಕೊಂಡು ಮತ್ತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಹಿಟ್ಟನ್ನು ಹಾಗೆ ಇಟ್ಟು ಈರುಳ್ಳಿ ಮಾಡುವುದು ಹೇಗೆ ನೋಡೋಣ.
ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ದೊಡ್ಡದಾಗಿ ಕತ್ತರಿಸಿಕೊಂಡ ಈರುಳ್ಳಿ, ಬೆಳ್ಳುಳ್ಳಿ, ಹುಣಸೆ ಹುಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. 4ರಿಂದ 5 ನಿಮಿಷದ ಬಳಿಕ ಇದಕ್ಕೆ ಖಾರದ ಪುಡಿ, ಬೆಲ್ಲ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಕಲಸಿಕೊಳ್ಳಲು ಕಾಲು ಕಪ್ ನೀರು ಹಾಕಿಕೊಳ್ಳಿ. ಹಾಗೆ 2 ನಿಮಿಷ ಬೇಯಿಸಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಈಗ ಮಿಕ್ಸಿ ಜಾರ್‌ಗೆ ಈ ಎಲ್ಲಾ ಪದಾರ್ಥಗಳ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚಟ್ನಿಯನ್ನು ರುಬ್ಬಿಕೊಳ್ಳಿ. ನೀರು ಬೇಕಿದ್ದರೆ ಹಾಕಬಹುದು ಇಲ್ಲದಿದ್ದರೆ ಹಾಗೆಯೇ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಕಾವಲಿ ಇಟ್ಟು ದೋಸೆ ಮಾಡಿಕೊಳ್ಳಿ. ಈ ಎರಡೂ ಖಾದ್ಯಗಳ ಒಟ್ಟಿಗೆ ಬ್ರೇಕ್‌ಫಾಸ್ಟ್‌ಗೆ ಸವಿಯಲು ನೀಡಿದರೆ ರುಚಿ ಅದ್ಭುತವಾಗಿರಲಿದೆ.



Click it and Unblock the Notifications
