Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಾಯಲ್ಲಿ ಇಟ್ಟರೆ ಕರಗುವ ಕಾಶಿ ಹಲ್ವಾ ಸವಿದು ನೋಡಿ! ಮಾಡುವ ವಿಧಾನವಿದು
ನೀವು ಮನೆಯಲ್ಲಿ ಸಿಹಿ ತಿಂಡಿ ರೆಸಿಪಿಗಳು ಅಂದ ತಕ್ಷಣ ಹಲವು ಖಾದ್ಯಗಳು ನೆನೆಪಿಗೆ ಬರಬಹುದು. ಅದ್ರಲ್ಲೂ ನೀವು ಹೆಚ್ಚಾಗಿ ಕೇಸರಿಬಾತ್, ಹಲ್ವಾ, ಪಾಯಸದಂತಹ ಸಿಹಿ ಮಾಡಿ ಸವಿದಿರುತ್ತೀರಿ. ಇನ್ನು ನೀವು ಹಲ್ವಾ ಎಂದರೆ ಬಹಳ ಇಷ್ಟಪಡುವವರಾಗಿರಬಹುದು. ಇನ್ನು ಹಲ್ವಾದಲ್ಲೂ ಹಲವು ರೀತಿಯ ಸಿಹಿ ಮಾಡಿ ಸವಿದಿರುತ್ತೀರಿ. ಅದರಲ್ಲೂ ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಸಿಹಿ ಕುಂಬಳ ಹಲ್ವಾ ಹೀಗೆ ಹತ್ತಾರು ರೀತಿಯ ಹಲ್ವಾ ನೀವು ಸಹ ಮಾಡಿ ಸವಿದಿರಬಹುದು.
ಅದ್ರಲ್ಲೂ ಈ ಕುಂಬಳಕಾಯಿಯಿಂದ ಮಾಡುವ ಹಲ್ವಾ ಸವಿದರೆ ಎಂತವರು ಕೂಡ ಫಿದಾ ಆಗುತ್ತಾರೆ. ಹಾಗೆ ಸಿಹಿ ಕುಂಬಳದಿಂದ ಮಾಡುವಂತಹ ಕಾಶಿ ಹಲ್ವಾ ಬಹಳ ರುಚಿ ನೀಡಲಿದೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ಕಾಶಿ ಹಲ್ವಾ ಅಂದ್ರೆ ಬಹಳ ಇಷ್ಟಪಡುತ್ತಾರೆ. ಹಲ್ವಾ ಮಾಡುವುದು ಕೂಡ ಬಹಳ ಸುಲಭ. ಹಾಗೆ ಈ ಕಾಶಿ ಹಲ್ವಾ ಮಾಡುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ.

ಕಾಶಿ ಹಲ್ವಾ ಅಂದರೆ ಎಲ್ಲರಿಗೂ ಇಷ್ಟವಾಗುವಂತೆ ಮಾಡಬಹುದು. ಅದರಲ್ಲೂ ಮೃದುವಾಗಿ ಬಹಳ ರುಚಿಯಾಗಿ ಮಾಡಬಹುದು. ಈ ಕಾಶಿ ಹಲ್ವಾ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಾಶಿ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಬೂದು ಕುಂಬಳಕಾಯಿ
ಸಕ್ಕರೆ-250 ಗ್ರಾಂ
ತುಪ್ಪ 1/4 ಕಪ್
ಗೋಡಂಬಿ 50 ಗ್ರಾಂ
ಒಣ ದ್ರಾಕ್ಷಿ 25 ಗ್ರಾಂ
ಹಾಲಿನ ಕೆನೆ 1 ಚಮಚ
ಏಲಕ್ಕಿ
ಕಾಶಿ ಹಲ್ವಾ ಮಾಡುವ ವಿಧಾನವೇನು?
ಮೊದಲು ಕುಂಬಳಕಾಯಿಯ ಸಿಪ್ಪೆ, ಬೀಜ ತೆಗೆದು ಕ್ಯಾರೆಟ್ ತುರಿಯಲ್ಲಿ ತುರಿದುಕೊಳ್ಳಬೇಕು. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ. ನಂತರ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಇದೇ ಬಾಣಲೆಗೆ ತುರಿದುಕೊಂಡಿರುವ ಕುಂಬಳಕಾಯಿಯನ್ನು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು.
ಕುಂಬಳಕಾಯಿ ತುರಿಯಲ್ಲಿನ ನೀರಿನ ಅಂಶ ಆವಿಯಾಗಬೇಕು. ಹೀಗಾಗಿ ತಟ್ಟೆ ಮುಚ್ಚಿ ಬೇಯಿಸಿಕೊಳ್ಳಿ. ನೀರು ಆವಿಯಾಗಿ ಗಟ್ಟಿಯಾದ ಅಂಶ ಮಾತ್ರವೇ ಇರಬೇಕು. ಈಗ ಇದಕ್ಕೆ ಸಕ್ಕರೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಸಿಹಿಗೆ ಅಗತ್ಯ ಇರುವಷ್ಟು ನೋಡಿ ಹಾಕಿಕೊಳ್ಳಿ. ಈಗ ಮತ್ತೆ 2 ಸ್ಪೂನ್ ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳುತ್ತಾ ಬೇಯಿಸಿಕೊಳ್ಳಿ.
ಸಕ್ಕರೆ ಕರಗಿ ಪಾಕವಾದ ಬಳಿಕ ಇದಕ್ಕೆ ಹಾಲಿನ ಕೆನೆಯನ್ನು ಸೇರಿಸಬೇಕು. ಹಾಲು ಕುದಿಬಂದಾಗ ಅದರ ಮೇಲೆ ಸಿಗುವ ಕೆನೆ ಸಾಕಾಗುತ್ತದೆ. ಈಗ ಮತ್ತೆ 2 ಸ್ಪೂನ್ ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಕರಿದುಕೊಂಡಿರುವ ಗೋಡಂಬಿ, ದ್ರಾಕ್ಷಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಸಮಯಕ್ಕೆ ಹಲ್ವಾದ ಬಣ್ಣ ಕೂಡ ಬದಲಾಗುತ್ತದೆ.
ಈ ಎಲ್ಲಾ ವಸ್ತುಗಳ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ ನಿಮ್ಮ ಮುಂದೆ ಕಾಶಿ ಹಲ್ವಾ ರೆಡಿಯಾಗುತ್ತದೆ. ನೀವು ಕೂಡ ಈ ರೀತಿಯಾಗಿ ಹಲ್ವಾ ಮಾಡಿ ನೋಡಿ. ಅದರ ರುಚಿಗೆ ಪದೇ ಪದೇ ಮಾಡಿ ಮಾಡಿ ಸವಿಯಲು ಮುಂದಾಗುವುದು ಖಚಿತ.
(ಕುಂಬಳಕಾಯಿ ನೀರು ಹೆಚ್ಚಾಗಿ ಬಿಡುತ್ತದೆ. ಹೀಗಾಗಿ ಮೊದಲು ಹಿಂಡಿಕೊಂಡು ಬಾಣಲೆಗೆ ಹಾಕಿಕೊಳ್ಳಬೇಕು. ಕೆಲವೊಮ್ಮೆ ಹೆಚ್ಚು ಸಮಯ ಬಾಣಲೆಯಲ್ಲಿ ಕುಂಬಳಕಾಯಿ ಬೇಯಿಸಬೇಕಾಗುತ್ತದೆ.)



Click it and Unblock the Notifications
