Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಒಂದೇ ಒಂದು ಸೇಬಿನಲ್ಲಿ ಈ ತಿಂಡಿ ರೆಡಿ ಮಾಡಿ..! ಇಷ್ಟೊಂದು ರುಚಿ ತಿಂಡಿ ಮತ್ತೆ ಮತ್ತೆ ತಿಂತೀರಾ!!
ಮನೆಯಲ್ಲಿ ಗೃಹಿಣಿಯರಿಗೆ ಯಾವಾಗಲು ಕೆಲಸ ಇದ್ದೇ ಇರುತ್ತೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಹೀಗೆ ದಿನನಿತ್ಯದ ಕೆಲಸವದು. ಆದ್ರೆ ಬಿಡುವಿನ ಸಮಯದಲ್ಲಿ ಮನೆ ಮಂದಿಯಲ್ಲಿ ಕುಳಿತು ತಿಂಡಿ ಮಾಡಬೇಕು ಎಂಬ ಆಸೆ ಅವರದ್ದಾಗಿರುತ್ತೆ. ಆದ್ರೆ ಕಡಿಮೆ ವಸ್ತು ಬಳಸಿ ಕಡಿಮೆ ಸಮಯದಲ್ಲಿ ಕೆಲವೇ ಇಲ್ಲದೆ ಯಾವ ತಿಂಡಿ ಮಾಡಬಹುದು ಎಂಬುದು ಅವರಿಗೆ ತಿಳಿದಿರೋದಿಲ್ಲ.
ಮನೆಗೆ ಯಾರಾದರು ಅತಿಥಿ ಬಂದಾಗ ಇಲ್ಲವೆ ಯಾವುದಾದ್ರು ಶುಭ ಸುದ್ದಿ ಕೇಳಿದಾಗ ಇಂತಹ ಸಂದರ್ಭದಲ್ಲಿ ಚಿಕ್ಕದಾಗಿ ಮಾಡಬಹುದಾದ ತಿಂಡಿ ಯಾವುದು ಅನ್ನೋದನ್ನ ನಾವಿಂದು ತಿಳಿದುಕೊಳ್ಳೋಣ. ನೀವು ಬೇಕರಿಯಲ್ಲಿ ಸಿಗುವ ವಿವಿಧ ರೀತಿಯ ಬರ್ಫಿಗಳ ನೋಡಿರುತ್ತೀರಿ, ಇದರ ಜೊತೆ ಒಂದಿಷ್ಟು ಹಲ್ವಾ ಸಹ ನೋಡಿರುತ್ತೀರಿ. ನಾವಿಂದು ಇದೇ ರೀತಿಯ ತಿಂಡಿಯನ್ನ ನಿಮ್ಮ ಮುಂದಿಡುತ್ತಿದ್ದೇವೆ.

ಒಂದೇ ಒಂದು ಸೇಬು ಹಣ್ಣಿನ ಮೂಲಕ ಒಂದು ಹಲ್ವಾ ರೀತಿಯ ತಿಂಡಿ ಮಾಡಬಹುದು. ಡೆಸರ್ಟ್ ರೀತಿಯ ಈ ತಿಂಡಿಯನ್ನ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಸುಲಭವಾಗಿ ಮಾಡಬಹುದು. ಹಾಗಾದ್ರೆ ಈ ತಿಂಡಿ ಮಾಡುವುದು ಹೇಗೆ? ಸೇಬಿನ ಸಿಹಿ ತಿಂಡಿ ಮಾಡಲು ಬೇಕಾಗಿವ ವಸ್ತುಗಳೇನು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ, ಮಾಡುವ ಸರಿಯಾದ ವಿಧಾನವನ್ನು ನಾವು ತಿಳಿಯೋಣ. ಈ ಮೂಲಕ ಮನೆಯಲ್ಲಿ ವಿರಾಮದ ಸಮಯದಲ್ಲಿ ಟ್ರೈ ಮಾಡೋದು ಹೇಗೆ ಎಂಬುದನ್ನು ನೋಡಿ.
ಸೇಬು ಹಣ್ಣಿನ ಸಿಹಿ ತಿಂಡಿ ಮಾಡಲು ಬೇಕಾಗುವ ವಸ್ತುಗಳು
ಸೇಬು ಹಣ್ಣು - 1
ತುಪ್ಪ- 4 ಸ್ಪೂನ್
ಗೋಡಂಬಿ
ಏಲಕ್ಕಿ ಪುಡಿ
ಕಾರ್ನ್ ಫ್ಲೋರ್
ನೀರು
ಸಕ್ಕರೆ
ಸೇಬು ಹಣ್ಣಿನ ಸಿಹಿ ತಿಂಡಿ ಮಾಡುವುದು ಹೇಗೆ?
ಮೊದಲು ಒಂದು ಅಚ್ಚು ಪಾತ್ರೆ (ತಟ್ಟೆ) ತೆಗೆದುಕೊಂಡು ಅದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಅವರಿಕೊಳ್ಳಿ. ಈಗ ಒಂದು ಸೇಬು ಹಣ್ಣು ತೆಗೆದುಕೊಂಡು ಕತ್ತರಿಸಿ ಒಳಗಿರುವ ಬೀಜ ತೆಗೆದು ಸಣ್ಣ ಸಣ್ಣ ಪೀಸ್ ಗಳಾಗಿ ಕತ್ತರಿಸಿಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಿಶ್ರಣ ನುಣ್ಣಗಾದಷ್ಟು ಒಳ್ಳೆಯದು.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಅದಕ್ಕೆ ರುಬ್ಬಿಕೊಂಡಿರುವ ಸೇಬು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸೇಬಿನ ನೀರಿನ ಆಂಶ ಹೋಗಬೇಕು. ಬಳಿಕ ಇದು ಕುದಿಯಲು ಆರಂಭಿಸಿದಾಗ ಸ್ವಲ್ಪವೇ ಸ್ವಲ್ಪ ನೀರು (ಅರ್ಧ ಕಪ್) ಹಾಕಿಕೊಂಡು ಕುದಿಯಲು ಬಿಡಿ. ಒಟ್ಟು 5 ನಿಮಿಷ ಒಲೆ ಮೇಲೆ ಇಟ್ಟು ಕುದಿಸಿ.
ಈಗ ಮತ್ತೊಂದು ಬೌಲ್ನಲ್ಲಿ ಕಾಲು ಕಪ್ ಕಾರ್ನ್ ಫ್ಲೋರ್ಹಾಕಿಕೊಳ್ಳಿ. ಇದಕ್ಕೆ ಮತ್ತೆ ಅರ್ಧ ಕಪ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ ಹಾಲಿನಂತಹ ದ್ರಾವಣ ಸಿದ್ದಪಡಿಸಿಕೊಳ್ಳಿ. ಈಗ ಈ ಮಿಶ್ರಣವನ್ನ ಒಲೆ ಮೇಲಿರುವ ಸೇಬಿನ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ. ನಿರಂತರವಾಗಿ ಮಿಕ್ಸ್ ಮಾಡುತ್ತಲೇ ಇರಿ. ಈ ಮಿಶ್ರಣ ಗಟ್ಟಿಯಾಗಲು ಆರಂಭವಾಗುತ್ತದೆ.
ಈ ವೇಳೆ ಅರ್ಧ ಕಪ್ ಸಕ್ಕರೆ ಹಾಕಿ ಮಿಶ್ರಣ ಮಾಡುತ್ತಿರಿ. ಮಿಶ್ರಣ ಗಟ್ಟಿಯಾಗುವಾಗ 1 ಸ್ಪೂನ್ ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿ ಈಗ ಸಣ್ಣದಾಗಿ ಹೆಚ್ಚಿಕೊಂಡು ಗೋಡಂಬಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ನಿಮಗೆ ಬೇಕಾದಾಗ ಕಲರ್ ಸಹ ಹಾಕಿಕೊಳ್ಳಬಹುದು. ಹೀಗೆ ಮಿಕ್ಸ್ ಮಾಡುವಾಗ ಪಾತ್ರೆಯಿಂದ ಈ ಮಿಶ್ರಣ ಚೆನ್ನಾಗಿ ಬಿಡುತ್ತಿದ್ದರೆ ಚೆನ್ನಾಗಿ ರೆಡಿಯಾಗಿದೆ ಎಂದರ್ಥ. ಇಷ್ಟಾದರೆ ಒಲೆ ಆಫ್ ಮಾಡಿ ತಕ್ಷಣ ಇದನ್ನು ಮೊದಲು ತುಪ್ಪ ಹಚ್ಚಿ ಇಟ್ಟಿದ್ದ ತಟ್ಟೆಗೆ ಸುರಿದುಕೊಂಡು ಚೆನ್ನಾಗಿ ಹರಡಿಕೊಳ್ಳಿ.
ನಂತರ ಇದನ್ನು ತಣ್ಣಗಾಗಲು ಇಟ್ಟು ಒಂದು ಪ್ಲೇಟ್ಗೆ ಹಾಕಿ ಚಾಕುವಿನಿಂದ ನಿಮಗೆ ಎಷ್ಟು ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ಸೇಬು ಹಣ್ಣಿನ ಸಿಹಿ ತಿಂಡಿ ರೆಡಿಯಾಗುತ್ತೆ. ಮನೆಯಲ್ಲಿ ಫ್ರೀ ಇದ್ದಾಗ ಇದನ್ನು ಮಾಡಿ ಸವಿಯಬಹುದು.



Click it and Unblock the Notifications