Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ನೀವು ಸಿಹಿ ತಿಂಡಿಯ ಪ್ರಿಯರಾಗಿದ್ದರೆ, ಮನೆಗೆ ಬೇಕರಿ ಅಂಗಡಿಯಿಂದ ಹಲವು ರೀತಿಯ ಸ್ವೀಟ್ ತಿನಿಸುಗಳ ತಂದಿರುತ್ತೀರಿ. ಅದ್ರಲ್ಲೂ ಬೇಕರಿಯಲ್ಲಿ ಸಿಗುವಂತಹ ರುಚಿ ರುಚಿಯಾದ ಕೇಕ್ಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಂತು ಬೇಕರಿ ತಿನಿಸುಗಳ ಹೆಸರು ಕೇಳಿದ್ರೆ ಸವಿಯುವ ಮನಸ್ಸು ಮಾಡ್ತಾರೆ. ಹಾಗೆ ಈ ಬೇಕರಿ ರುಚಿಯ ಹಲವು ತಿಂಡಿಗಳನ್ನು ನಾವು ಮನೆಯಲ್ಲೂ ಕೂಡ ಮಾಡಿ ಸವಿಯಬಹುದು.
ಹಾಗೆ ಬೇಕರಿಯಲ್ಲಿ ಸಿಗುವಂತಹ ರುಚಿ ರುಚಿಯಾದ ಆಪಲ್ ಕೇಕ್ ಅನ್ನು ನಾವಿಂದು ಮನೆಯಲ್ಲೇ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಆಪಲ್ ಬಳಸಿ ಮಾಡುವಂತಹ ಹಲವು ರುಚಿಕರ ಖಾದ್ಯಗಳ ಪೈಕಿ ಈ ಕೇಕ್ ಕೂಡ ಒಂದು. ಡ್ರೈ ಜಾಮೂನ್ ರೀತಿಯಲ್ಲಿ ಇದನ್ನು ಮಾಡಿ ಸವಿಯಬಹುದು. ಬೇಕರಿಗಳಲ್ಲಿ ನೋಡುವಂತೆ ಈ ಕೇಕ್ ಬಣ್ಣ ಬಣ್ಣದಲ್ಲೂ ಸಿಗುತ್ತದೆ. ಆದ್ರೆ ಜಾಮೂನ್ ರೀತಿಯಾಗಿ ಬಹಳ ಮೃದುವಾದ ಆಪಲ್ ಕೇಕ್ ಮಾಡುವ ಕುರಿತು ತಿಳಿಯೋಣ.
ಸುಲಭವಾಗಿ ಈ ಆಪಲ್ ಕೇಕ್ ಅನ್ನು ಮಾಡಬಹುದು. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಮಾಡಿ ಸವಿಯಬಹುದು. ಆಪಲ್ ಕೇಕ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಆಪಲ್ ಕೇಕ್ ಮಾಡಲು ಬೇಕಾಗುವ ವಸ್ತುಗಳು
- ಬ್ರೆಡ್ ಅಥವಾ ಸ್ಪಾಂಜ್ ಕೇಕ್
- ಸಕ್ಕರೆ
- ತುಪ್ಪ
- ಕೊಬ್ಬರಿ ತುರಿ
- ಹಾಲು
- ಕೋಕೋ ಪೌಡರ್
ಆಪಲ್ ಕೇಕ್ ಮಾಡುವ ಸುಲಭದ ವಿಧಾನವೇನು?
ಮೊದಲು ಬ್ರೆಡ್ ಅಥವಾ ಸ್ಪಾಂಜ್ ಕೇಕ್ ಅನ್ನು ಪುಡಿ ಮಾಡಿ ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಸುಮಾರು 2 ಕಪ್ ಅಳತೆಯಲ್ಲಿ ಈ ಕೇಕ್ ಪುಡಿ ಇರಲಿ. ಈಗ ಒಂದು ಬಾಣಲೆಯಲ್ಲಿ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿಕೊಂಡು ಚೂರು ನೀರು ಹಾಕಿ ಕರಗಲು ಬಿಡಿ. ಈಗ ಕರಗಿದ ಈ ಸಕ್ಕರೆ ನೀರಿಗೆ ಕೋಕೋ ಪೌಡರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಇದಕ್ಕೆ 1 ಸ್ಪೂನ್ ಹಾಲಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಒಂದೂವರೆ ಸ್ಪೂನ್ ತುಪ್ಪ ಹಾಕಿ. ಅನಂತರ ಅರ್ಧ ಕಪ್ ಒಣ ಕೊಬ್ಬರಿ ತುರಿ ಹಾಕಿಕೊಳ್ಳಿ. ಈಗ ಪುಡಿ ಮಾಡಿಕೊಂಡಿರುವ ಬ್ರೆಡ್ ಅಥವಾ ಕೇಕ್ ಪುಡಿಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ 2 ಸ್ಪೂನ್ ಹಾಲು ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಬೇಕು.
ಇದು ಡ್ರೈ ಆಗಲು ಆರಂಭಿಸುತ್ತದೆ. ಸಣ್ಣ ಉರಿಯಲ್ಲಿ ಇದನ್ನು ಮಿಕ್ಸ್ ಮಾಡಿಕೊಳ್ಳಿ. ಇದು ಹೋಳಿಗೆ ಹೂರ್ಣದಂತೆ ಉಂಡೆ ಕಟ್ಟಲು ಬರಬೇಕು. ಆಗ ಒಲೆ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ. ಅನಂತರ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿಕೊಳ್ಳಿ. ಜಾಮೂನ್ ಗಾತ್ರಕ್ಕೆ ಮಾಡಿಕೊಳ್ಳಿ. ಈಗ ಉಂಡೆಯನ್ನು ಕೊಬ್ಬರಿ ಪುಡಿಯಲ್ಲಿ ಹರಡಿಕೊಂಡು ಡ್ರೈ ಜಾಮೂನ್ ಅಂತೆ ಮಾಡಿಕೊಳ್ಳಿ.
ಕೊನೆಯಲ್ಲಿ ಈ ಉಂಡೆಯನ್ನು ಕಪ್ ಕೇಕ್ ಪೇಪರ್ನಲ್ಲಿ ಇಟ್ಟು ಸವಿಯಲು ನೀಡಿ. ಇಷ್ಟಾದರೆ ನಿಮ್ಮ ಮುಂದೆ ಆಪಲ್ ಕೇಕ್ ಸಿದ್ದವಾಗುತ್ತೆ, ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications

