Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ರೀತಿ ಅಂಜಲ್ ಫಿಶ್ ಫ್ರೈ ಮಾಡಿದ್ರೆ ಮೂರು ಹೊತ್ತು ತಿನ್ನೋದು ಪಕ್ಕಾ..!
ಮಾಂಸಹಾರ ಪ್ರಿಯರಿಗೆ ಮೀನು ಮಾಂಸದಿಂದ ಮಾಡಿದ ಎಲ್ಲಾ ಖಾದ್ಯಗಳು ಕೂಡ ಇಷ್ಟವಾಗುತ್ತೆ. ಊಟದ ಜೊತೆಗೆ ಅವರಿಗೆ ಚಿಕನ್ ಅಥವಾ ಮೀನಿನ ಯಾವುದಾದರು ರುಚಿಕರ ರೆಸಿಪಿ ಇದ್ದರೆ ಊಟ ಬೊಂಬಾಟ್ ರುಚಿ ನೀಡುತ್ತದೆ. ಹೀಗಾಗಿ ಮಾಂಸಹಾರಿಗಳಿಗೆ ಮೀನು ಫ್ರೈ ಅಂದ್ರೆ ಪಂಚಪ್ರಾಣ. ಹೋಟೆಲ್‌ನಲ್ಲಿ ಇಲ್ಲವೆ ಮನೆಯಲ್ಲಿ ಮೀನು ಫ್ರೈ ಮಾಡಿ ಸವಿಯುವುದು ಬಹಳ ರುಚಿ ನೀಡಲಿದೆ.
ಇನ್ನು ಮೀನುಗಳಲ್ಲಿ ಹತ್ತು ಹಲವು ವಿಧಗಳಿವೆ. ಎಲ್ಲಾ ಮೀನುಗಳ ಫ್ರೈ ರುಚಿ ನೀಡದೆ ಇರಬಹುದು. ಕೆಲವರಿಗೆ ಅಂಜಲ್ ಫ್ರೈ, ಕಾಟ್ಲಾ, ಕೆರೆ ಮೀನುಗಳ ಫ್ರೈ ಸವಿಯಲು ಇಷ್ಟಪಡುತ್ತಾರೆ. ಇನ್ನು ಮೀನು ಫ್ರೈ ಮಾಡುವುದು ಅಂದರೆ ಕೆಲವರು ಇಷ್ಟಪಡುವುದಿಲ್ಲ ಏಕೆಂದರೆ ಬಹಳ ಸಮಯ ಹಿಡಿಯುತ್ತದೆ, ಹಾಗೆ ತಯಾರಿಯೂ ಬಹಳ ಸಮಯ ಹಿಡಿಯುತ್ತದೆ ಎಂದು ಫ್ರೈ ಮಾಡಲು ಮುಂದಾಗುವುದೇ ಇಲ್ಲ.

ಆದ್ರೆ ನಾವಿಂದು ಸುಲಭವಾಗಿ ಹಾಗೆ ಅತ್ಯಂತ ರುಚಿಕರವಾಗಿ ಅಂಜಲ್ ಫಿಶ್‌ನ ಫ್ರೈ ಅನ್ನು ಮನೆಯಲ್ಲೇ ಮಾಡುವ ಕುರಿತು ತಿಳಿದುಕೊಳ್ಳೋಣ. ಅಂಜಲ್ ಫಿಶ್ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಂಜಲ್ ಫಿಶ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
ಮೀನು
ಕಾರ್ನ್ ಫ್ಲೋರ್ - 1 ಸ್ಪೂನ್
ಅಕ್ಕಿ ಹಿಟ್ಟು
ಅರಿಶಿನ ಪುಡಿ
ಗರಂ ಮಸಾಲಾ
ಮೆಣಸಿನ ಪುಡಿ
ಧನಿಯಾ ಪುಡಿ
ಉಪ್ಪು
ನಿಂಬೆಹಣ್ಣು
ಎಣ್ಣೆ
ಅಂಜಲ್ ಫಿಶ್ ಫ್ರೈ ಮಾಡುವುದು ಹೇಗೆ?
ಮೊದಲು ಮೀನನ್ನು ಸಣ್ಣದಾಗಿ ಕತ್ತರಿಸಿಕೊಂಡಿರಬೇಕು. ತೆಳುವಾಗಿದ್ದರೆ ಬಹುಬೇಗ ಫ್ರೈ ಮಾಡಬಹುದು. ಈ ಮೀನುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಸ್ಪೂನ್ ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಅರಶಿನ, ಗರಂ ಮಸಾಲ, ಕರಿ ಮೆಣಸಿನ ಪುಡಿ, ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಇವೆಲ್ಲವನ್ನು ಹಾಕಿ ಮಿಕ್ಸ್ ಮಾಡಿ.
ಈಗ ಇದಕ್ಕೆ ಒಂದು ನಿಂಬೆ ರಸವನ್ನು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಈ ಮಸಾಲೆಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಒಂದು ಹದ ಬರಬರಬೇಕು. ನೀರು ಹೆಚ್ಚು ಹಾಕಿಕೊಳ್ಳದೆ ತೆಳುವಾದ ಹಿಟ್ಟು ಮಾಡಿಕೊಳ್ಳಬೇಕು. ನಂತರ ಒಂದೊಂದೇ ಮೀನುಗಳನ್ನು ತೆಗೆದುಕೊಂಡು ಚೆನ್ನಾಗಿ ಈ ಹಿಟ್ಟು ಸವರಿಕೊಳ್ಳಬೇಕು.
ಮೀನಿನ ಎಲ್ಲಾ ಕಡೆಗೂ ಈ ಹಿಟ್ಟು ಚೆನ್ನಾಗಿ ಹಿಡಿಯಬೇಕು. ನಂತರ ಮೀನಿಗೆ ಹಿಟ್ಟು ಹಿಡಿಯಲು ಒಂದು ಗಂಟೆ ಹಾಗೆ ಬಿಡಬೇಕು. ನಂತರ ತವವನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಎರಡು ಅಥವಾ ಮೂರು ಮೀನನ್ನು ಒಟ್ಟಿಗೆ ಅದರಲ್ಲಿ ಇಟ್ಟುಕೊಳ್ಳಿ. 3ರಿಂದ 4 ನಿಮಿಷ ಒಂದೇ ಕಡೆ ಫ್ರೈ ಮಾಡಿಕೊಳ್ಳಿ.
ನಂತರ ಇನ್ನೊಂದು ಕಡೆ ತಿರುಗಿಸಿಕೊಂಡು ಫ್ರೈ ಮಾಡಲು ಬಿಡಿ. ನಂತರ ಒಂದೊಂದೇ ಮೀನು ಫ್ರೈ ಆದಾಗ ತೆಗೆದು ಪ್ಲೇಟ್‌ಗೆ ಹಾಕಿಕೊಳ್ಳಿ. ನಂತರ ಎಲ್ಲಾ ಮೀನುಗಳನ್ನು ಈ ರೀತಿ ಹಾಕಿಟ್ಟುಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಅಂಜಲ್ ಮೀನು ಫ್ರೈ ರೆಡಿಯಾಗುತ್ತದೆ. ನೀವು ಕೂಡ ಇದೇ ಮಾಡಿ ನೋಡಿ.



Click it and Unblock the Notifications
