Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆಂಧ್ರದ ಸ್ಪೆಷಲ್ ರಿಚ್ ಉಪ್ಪಿಟ್ಟು..! ಈ ರುಚಿಗೆ ನೀವು ಫಿದಾ ಆಗೋದು ಪಕ್ಕಾ..!
ನೀವು ಬೆಳಗ್ಗೆ ತಿಂಡಿಗೆ ಅದ್ಭುತವಾಗಿ ರುಚಿಯಲ್ಲಿ ಉಪ್ಪಿಟ್ಟು ಮಾಡಿರುತ್ತೀರಿ. ರವೆ ಬಳಸಿ ಮಾಡುವ ಉಪ್ಪಿಟ್ಟು ಅದ್ಭುತ ರುಚಿ ನೀಡಲಿದೆ. ಹೋಟೆಲ್ನಲ್ಲಿ, ಕ್ಯಾಂಟೀನ್ನಲ್ಲೂ ಕೂಡ ನೀವು ಹಲವು ಬಗೆಯ ಉಪ್ಪಿಟ್ಟು ಸವಿದಿರುತ್ತೀರಿ. ಹಲವು ಬಗೆಯ ಉಪ್ಪಿಟ್ಟಗಳ ಸವಿದು ನೀವು ಕೂಡ ಆನಂದಿಸಿರುತ್ತೀರಿ.
ಹಾಗೆ ನಾವು ಬೆಳಗ್ಗೆ ಮನೆಯಲ್ಲಿ ಸವಿಯುವಂತಹ ಅದ್ಭುತ ರುಚಿಯ ಉಪ್ಪಿಟ್ಟು ಮಾಡುವ ಕುರಿತು ತಿಳಿಯೋಣ. ಈ ಉಪ್ಪಿಟ್ಟು ನೀವು ನಿತ್ಯ ಮಾಡುವಂತಹ ಸಾಮಾನ್ಯ ಉಪ್ಪಿಟ್ಟಲ್ಲ ಬದಲಿಗೆ ಸ್ಪೆಷಲ್ ಆಗಿ ಮಾಡುವಂತಹ ವಿಶೇಷವಾದ ಉಪ್ಪಿಟ್ಟಾಗಿದೆ. ಕೆಲವರಿಗೆ ಉಪ್ಪಿಟ್ಟು ಅಂದ್ರೆ ಇಷ್ಟವಾಗುವುದಿಲ್ಲ. ಅದ್ರೆ ಈ ರೀತಿ ರಿಚ್ ಆಗಿ ಮಾಡಿದ್ರೆ ಇಷ್ಟಪಟ್ಟು ಸವಯುತ್ತಾರೆ.

ಆರೋಗ್ಯಯುತವಾಗಿ ಬೆಳಗ್ಗೆ ತಿಂಡಿಗೆ ನೀವು ಉಪ್ಪಿಟ್ಟು ಮಾಡಬೇಕು ಅಂದರೆ ಈ ರೀತಿ ಮಾಡಿ ನೋಡಿ. ಇದಕ್ಕೆ ಹಲವು ವಸ್ತುಗಳ ಹಾಕಿ ವಿಶೇಷವಾಗಿ ಮಾಡಿದರೆ ಮಕ್ಕಳಿಂದ ಹಿಡಿದು ಎಲ್ಲರು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ. ಹಾಗಾದ್ರೆ ನಾವಿಂದು ಆಂಧ್ರ ಸ್ಟೈಲ್ನಲ್ಲಿ ಸ್ಪೆಷಲ್ ಉಪ್ಪಿಟ್ಟು ಮಾಡುವುದು ಹೇಗೆ ಎನ್ನುವ ಕುರಿತು ತಿಳಿಯೋಣ. ಈ ಸ್ಪೆಷಲ್ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಈ ಉಪ್ಪಿಟ್ಟು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಸ್ಟೈಲ್ನ ಸ್ಪೆಷಲ್ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ -1 ಕಪ್
- ಗೋಡಂಬಿ
- ಸಾಸಿವೆ
- ಜೀರಾ
- ಉದ್ದಿನ ಬೇಳೆ
- ಶುಂಠಿ
- ಬಟಾಣಿ
- ಕ್ಯಾರೆಟ್
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಆಂಧ್ರ ಸ್ಟೈಲ್ನ ಸ್ಪೆಷಲ್ ಉಪ್ಪಿಟ್ಟು ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಒಲೆ ಮೇಲಿಟ್ಟು ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ ಹಾಕಿಕೊಳ್ಳಿ, ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಬಳಸಿ. ಅನಂತರ ಗೋಡಂಬಿ, ಶುಂಠಿ, ಹಸಿ ಬಟಾಣಿ, ಸ್ಲೈಸ್ ಮಾಡಿಕೊಂಡ ಕ್ಯಾರೆಟ್ ಹಾಗೂ ಈರುಳ್ಳಿ ಹಾಕಿ ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಅನಂತರ ಇದಕ್ಕೆ ಹಸಿ ಮೆಣಸು ಹಾಗೂ ಕರಿಬೇವು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಆಗಲು ಬಿಡಿ. ನಂತರ ಇದಕ್ಕೆ ಉಪ್ಪು ಹಾಕಿಕೊಂಡು 2 ನಿಮಿಷ ಫ್ರೈ ಆಗಲು ಬಿಡಿ. ಈಗ ಇದಕ್ಕೆ ಅಳತೆ ಕಪ್ನಲ್ಲಿ 1 ಕಪ್ ರವೆಯನ್ನು ನೇರವಾಗಿ ಇದಕ್ಕೆ ಹಾಕಿಕೊಳ್ಳಿ. ಈ ರವೆಯನ್ನು ಹುರಿದುಕೊಳ್ಳುವುದು ಬೇಡ. ಹಾಗೆ 3 ನಿಮಿಷ ಫ್ರೈ ಮಾಡಿಕೊಳ್ಳಿ.
ಇನ್ನು ಈ ರೀತಿ ರವೆ ಪಾತ್ರೆಗೆ ಹಾಕಿದಾಗ ಇನ್ನೊಂದು ಕಡೆ ನೀರನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಲು ಇಟ್ಟುಕೊಳ್ಳಿ. ಆ ನೀರು ಬಿಸಿ ಆದಾಗ 1 ಕಪ್ ರವೆಗೆ 3 ಕಪ್ ಬಿಸಿ ನೀರು ಹಾಕಿಕೊಳ್ಳಬೇಕು. ಈ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಿಮಗೆ ಉಪ್ಪಿಟ್ಟು ಹುಡಿ ಹುಡಿಯಾಗಿ ಬೇಕು ಅನ್ನೋದಾದ್ರೆ 2 ಕಪ್ ನೀರು ಹಾಕಿಕೊಂಡರೆ ಸಾಕು.
ಈಗ ಮುಚ್ಚಳ ಮುಚ್ಚಿ 2 ನಿಮಿಷ ಬೇಯಲು ಬಿಡಿ. ಅನಂತರ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಈ ಸ್ಪೆಷಲ್ ಉಪ್ಪಿಟ್ಟು ರೆಡಿಯಾಗುತ್ತದೆ. ಇದನ್ನು ಹೆಚ್ಚಾಗಿ ಆಂಧ್ರದ ಕಡೆ ಹೆಚ್ಚಾಗಿ ಮಾಡುತ್ತಾರೆ. ಗೋಡಂಬಿ ಬಳಸಿ ಮಾಡೋದ್ರಿಂದ ಇದರ ರುಚಿ ದುಪ್ಪಟ್ಟಾಗಿರುತ್ತೆ.



Click it and Unblock the Notifications
