Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಊಟಕ್ಕೆ ಸಖತ್ ರುಚಿಯ ಆಂಧ್ರ ಶೈಲಿ ಟೊಮೆಟೋ ಬೇಳೆ ಸಾಂಬಾರ್ ಮಾಡಿ..!
ಬೇಳೆ ಸಾಂಬಾರ್ ಅಂದ್ರೆ ಎಲ್ಲರಿಗೂ ಇಷ್ಟವಾಗೋ ಖಾದ್ಯ. ಊಟದ ಜೊತೆಗೆ ಬೇಳೆ ಸಾರು ಸಖತ್ ರುಚಿ ನೀಡುತ್ತೆ. ಹಾಗೆ ಬೇಳೆ ಸಾರನ್ನು ಟೊಮೆಟೋ ಹೆಚ್ಚು ಹಾಕಿ ಮಾಡಿದರೆ ಹೋಟೆಲ್ನಲ್ಲಿ ಬರುವಂತಹ ಘಮ ಘಮಿಸುವ ಸುವಾಸನೆಯುಕ್ತ ಬೇಳೆ ಸಾಂಬಾರ್ ರೆಡಿಯಾಗುತ್ತೆ. ಈ ಸಾಂಬಾರ್ ಎಲ್ಲರಿಗೂ ಇಷ್ಟವಾಗುತ್ತೆ.
ಈ ಬೇಳೆ ಸಾಂಬಾರ್ ಅನ್ನು ವಿಶೇಷವಾಗಿ ಮಾಡಿದ್ರೆ ಮನೆ ಮಂದಿ ಎಲ್ಲ ಕುಳಿತು ಸವಿಯುತ್ತಾರೆ. ಹಾಗೆ ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಾಗಲೂ ಕೂಡ ಈ ಬೇಳೆ ಸಾಂಬಾರ್ ಮಾಡಿ ಸವಿಯುವುದು ನೋಡಬಹುದು. ಊಟಕ್ಕೆ ಮಾತ್ರವಲ್ಲ ನಾವು ಪಾತಿ, ಇಡ್ಲಿ, ದೋಸೆಯನ್ನು ಕೂಡ ಈ ಬೇಳೆ ಸಾಂಬಾರ್ ಜೊತೆಗೆ ಸವಿಯಬಹುದು.

ನಾವಿಂದು ಸ್ಪೆಷಲ್ ಸ್ಟೈಲ್ನಲ್ಲಿ ಈ ಬೇಳೆ ಸಾಂಬಾರ್ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ನೀವು ಆಂಧ್ರ ಶೈಲಿಯ ಟೊಮೆಟೋ ಬೇಳೆ ಸಾರು ಮಾಡಿ ಸವಿದಿದ್ದೀರಾ? ಹೌದು ಆಂಧ್ರ ಶೈಲಿಯಲ್ಲಿ ಮಾಡುವ ಬೇಳೆ ಸಾರು ಎಲ್ಲರಿಗೂ ಇಷ್ಟವಾಗುತ್ತೆ. ಏಕೆಂದರೆ ಇದಕ್ಕೆ ಬಳಸುವ ಮಸಾಲೆಗಳು ಎಲ್ಲಾ ಖಾದ್ಯದೊಂದಿಗೂ ಸವಿಯಬಹುದು. ಹೀಗಾಗಿ ಆಂಧ್ರ ಶೈಲಿ ಟೊಮೆಟೋ ಬೇಳೆ ಸಾರು ಬಹಳ ರುಚಿಕರವಾಗಿರುತ್ತೆ.
ಹಾಗಾದ್ರೆ ನಾವಿಂದು ಆಂಧ್ರ ಶೈಲಿಯ ಟೊಮೆಟೋ ಬೇಳೆ ಸಾರು ಮಾಡಲಿ ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಸಾಂಬಾರ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ಟೊಮೆಟೋ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಟೊಮೆಟೊ - 5 ರಿಂದ 6
- ತೊಗರಿ ಬೇಳೆ
- ಈರುಳ್ಳಿ
- ಹಸಿ ಮೆಣಸು
- ಅರಿಶಿನ ಪುಡಿ
- ಖಾರದ ಪುಡಿ
- ಕೊತ್ತಂಬರಿ ಸೊಪ್ಪು
- ನೀರು
- ಸಾಸಿವೆ
- ಜೀರಿಗೆ
- ಇಂಗು
- ಒಣ ಮೆಣಸು
- ಬೆಳ್ಳುಳ್ಳಿ
- ಕರಿಬೇವು
- ತುಪ್ಪ
- ಉಪ್ಪು
- ಅಡುಗೆ ಎಣ್ಣೆ
ಆಂಧ್ರ ಶೈಲಿಯ ಟೊಮೆಟೋ ಸಾಂಬಾರ್ ಮಾಡುವ ವಿಧಾನವೇನು?
ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೋಳೆದು ನೀರು ಹಾಕಿ ನೆನೆಸಿಟ್ಟುಕೊಳ್ಳಿ. 100 ಗ್ರಾಮ್ ತೆಗೆದುಕೊಂಡರೆ ಸಾಕು. 10 ನಿಮಿಷ ನೆನೆಸಿದ ಬಳಿಕ ಕುಕ್ಕರ್ಗೆ ಹಾಕಿಕೊಂಡು ಅದಕ್ಕೆ ಹಸಿ ಮೆಣಸು, ಈರುಳ್ಳಿ, ಕತ್ತರಿಸಿಕೊಂಡಿರುವ ಟೊಮೆಟೋ, ಅರಶಿಣ, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ನೀರು, ಎಣ್ಣೆ, ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ ಒಲೆ ಮೇಲೆ ಇಟ್ಟು ಮುಚ್ಚಳ ಮುಚ್ಚಿ 4 ಸೀಟಿ ಹೊಡೆಸಿಕೊಳ್ಳಿ.
4 ಸೀಟಿ ಹೊಡೆದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಬೇಳೆ ಬೆಂದಿದೆಯೇ ಎಂಬುದನ್ನು ನೋಡಿ, ಬೇಳೆಯನ್ನು ಸ್ವಲ್ಪ ಮೆತ್ತಗೆ ಮಸೆದುಕೊಳ್ಳಬೇಕು. ನಂತರ ಇದಕ್ಕೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿಕೊಂಡು ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಒಣ ಮೆಣಸು, ಬೆಳ್ಳುಳ್ಳಿ ಹಾಕಿ ಈ ಒಗ್ಗರಣೆಯನ್ನು ಕುಕ್ಕರ್ನಲ್ಲಿರುವ ಬೇಳೆ ಸಾಂಬಾರ್ಗೆ ಹಾಕಿ.
ನಂತರ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ 2 ನಿಮಿಷ ಬಿಡಿ ಹಾಗೆ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಆಂಧ್ರ ಶೈಲಿಯ ಟೊಮೆಟೋ ಬೇಳೆ ಸಾಂಬಾರ್ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಈ ಸುಲಭದ ಬೇಳೆ ಸಾರು ಮಾಡಿ ನೋಡಿ. ಊಟ ಸೇರಿ ಎಲ್ಲಾ ಖಾದ್ಯಗಳಿಗೂ ಈ ಬೇಳೆ ಸಾಂಬಾರ್ ಸಖತ್ ರುಚಿ ನೀಡಲಿದೆ.



Click it and Unblock the Notifications
