Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಂಧ್ರ ಶೈಲಿಯಲ್ಲಿ ಖಾರ ಮೂಲಂಗಿ ಚಟ್ನಿ ಮಾಡಿ ನೋಡಿ..! ಅದ್ಭುತ ರುಚಿ
ನಾವು ಬೆಳಗ್ಗೆ ತಿಂಡಿಯ ಜೊತೆಗೆ ಯಾವುದಾದರು ಚಟ್ನಿ ಮಾಡಿ ಸವಿಯುತ್ತೇವೆ. ಚಪಾತಿ, ಪೂರಿ, ಇಡ್ಲಿ, ದೋಸೆ, ಪಲಾವ್, ಹೀಗೆ ಯಾವುದೇ ಖಾದ್ಯ ಇದ್ದರೂ ಅದಕ್ಕೊಂದು ಚಟ್ನಿ ಇದ್ದರೇನೆ ರುಚಿ ಹೆಚ್ಚಾಗೋದು. ಅದರಲ್ಲೂ ಊಟದ ಜೊತೆಗೆ ಈ ಚಟ್ನಿ ರುಚಿ ನೀಡುವಂತಿದ್ದರೆ ಸ್ವಲ್ಪ ಹೆಚ್ಚಿಗೆ ಮಾಡಿಕೊಂಡು ಮಧ್ಯಾಹ್ನ ಅಥವಾ ರಾತ್ರಿಯೂ ಸವಿಯಲು ಮುಂದಾಗುವುದು ಸಾಮಾನ್ಯ.
ಇಂತಹ ಅದ್ಭುತವಾದ ಹಲವು ಚಟ್ನಿಗಳಲ್ಲಿ ನಾವಿಂದು ಖಾರ ಖಾರವಾಗಿ ಮಾಡುವಂತಹ ಆಂಧ್ರ ಶೈಲಿಯ ಮೂಲಂಗಿ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಮೂಲಂಗಿ ದೇಹಕ್ಕೆ ಎಷ್ಟು ಉತ್ತಮ ತರಕಾರಿ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ಮೂಲಂಗಿ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿ ಆಗಿದೆ. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಂ ಹೆಚ್ಚಾಗಿರುತ್ತದೆ ಇದು ಆರೋಗ್ಯಕ್ಕೆ ಬಹಳ ಉತ್ತಮ ಆಹಾರ ಆಗಿದೆ.

ಹೀಗಾಗಿ ಈ ಆಂಧ್ರ ಶೈಲಿಯ ಮೂಲಂಗಿ ಚಟ್ನಿ ಬಹಳ ಹೆಸರುವಾಸಿಯಾಗಿದೆ. ಖಾರ ಖಾರವಾಗಿ ಮಾಡುವಂತಹ ಈ ಮೂಲಂಗಿ ಚಟ್ನಿ ನಾವಿಂದು ಮಾಡುವ ಮೂಲಕ ಬ್ರೇಕ್‌ಫಾಸ್ಟ್ ಹಾಗೂ ಊಟಕ್ಕೂ ಇದನ್ನು ಸವಿಯಬಹುದು. ನಾವಿಂದು ಈ ಖಾರ ಖಾರದ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ಮೂಲಂಗಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೂಲಂಗಿ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಜೀರಿಗೆ
- ಬೆಳ್ಳುಳ್ಳಿ
- ತೆಂಗಿನ ಕಾಯಿ
- ಒಣ ಮೆಣಸು
- ಹುರಿಗಡಲೆ
- ಹುಣಸೆ ಹಣ್ಣು
- ಹಸಿ ಮೆಣಸು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಆಂಧ್ರ ಶೈಲಿಯ ಮೂಲಂಗಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಮೂಲಂಗಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೆಲ ಸಮಯ ಮೂಲಂಗಿಯನ್ನು ಫ್ರೈ ಮಾಡಿಕೊಳ್ಳಬೇಕು. ಮೂಲಂಗಿ ಬಹಳ ಖಾರವಾಗಿರುತ್ತೆ, ಹೀಗಾಗಿ ಫ್ರೈ ಮಾಡದಿದ್ದರೆ ಖಾರ ಹೆಚ್ಚಾಗಬಹುದು.
5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಹಸಿ ಮೆಣಸು ಹಾಗೂ ಒಣ ಮೆಣಸು ಹಾಕಿ. ಕಡಿಮೆ ಖಾರ ಬಳಸಿಕೊಳ್ಳಿ. ಮೊದಲೇ ಮೂಲಂಗಿ ಖಾರವಾಗಿರುವ ಕಾರಣ ಕಡಿಮೆ ಮೆಣಸು ಬಳಸಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ತೆಂಗಿನಕಾಯಿಯನ್ನು ಕೂಡ ಹಾಕಿಕೊಳ್ಳಿ. ಹಾಗೆ 3 ನಿಮಿಷ ಫ್ರೈ ಮಾಡಿಕೊಂಡು ಒಲೆ ಆಫ್ ಮಾಡಿ ತಕ್ಷಣ ಹುರಿಗಡಲೆ ಹಾಗೂ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಬಿಸಿ ಇರುವ ಈ ಮಸಾಲೆಗಳನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಎಲ್ಲಾ ಮಸಾಲೆಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಚಿಗೆ ಉಪ್ಪು ಸಹ ಹಾಕಿ ಸ್ವಲ್ಪವೇ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ತೆಂಗಿನಕಾಯಿ ಚಟ್ನಿಯಂತೆ ಹದವಾಗಿ ಬಂದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ತಿಂಡಿ, ಊಟಕ್ಕೆ ಈ ಮೂಲಂಗಿ ಚಟ್ನಿ ರೆಡಿಯಾಗುತ್ತೆ. ನೀವು ಕೂಡ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
