Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಾಲಿಗೆ ರುಚಿ ಹೆಚ್ಚಿಸುವ ಆಂಧ್ರ ಶೈಲಿ ರಸಂ..! ಮಾಡೋದು ಸಖತ್ ಸುಲಭ!
ನೀವು ಊಟದ ಜೊತೆಗೆ ರಸಂ ಸವಿಯಲು ಇಷ್ಟ ಪಡಬಹುದು. ಕೆಲವರಿಗೆ ರಸಂ ಇದ್ದರೇನೇ ಊಟ ಮುಗಿದಂತೆ. ಊಟದ ಕೊನೆಯಲ್ಲಿ ರಸಂ ಜೊತೆಗೆ ಒಂದೆರಡು ತುತ್ತು ಊಟ ಸವಿದರೆ ಊಟ ಸಂಪೂರ್ಣ ಆಗಿರುವಂತಹ ಭಾವ ಮೂಡುತ್ತದೆ. ಇನ್ನು ಈ ರಸಂ ಅನ್ನು ಹತ್ತಾರು ಬಗೆಯಲ್ಲಿ, ಹತ್ತಾರು ರುಚಿಯಲ್ಲಿ ಮಾಡುವುದು ನಾವು ನೋಡಿದ್ದೇವೆ.
ವಿಶೇಷವಾಗಿ ಮದುವೆ ಮನೆ, ದೇವಸ್ಥಾನಗಳಲ್ಲಿ ನೀಡುವಂತಹ ರಸಂ ಅಂತು ಅದ್ಭುತ ರುಚಿ ನೀಡುತ್ತೆ. ಇದೇ ಶೈಲಿಯಲ್ಲಿ ನಾವು ಕೂಡ ಮನೆಯಲ್ಲಿ ಮಾಡುವ ಯತ್ನ ಮಾಡಿರುತ್ತೇವೆ. ಹಾಗೆ ನಾವು ಕೂಡ ಸುಲಭವಾಗಿ ಕಡಿಮೆ ಸಮಯದಲ್ಲಿ ಈ ರಸಂ ಮಾಡುವ ಕಲೆಯನ್ನು ಕಲಿತಿರುತ್ತೇವೆ. ರಸಂ ಅನ್ನು ಮಾಡೋದು ಎಷ್ಟು ಮುಖ್ಯವೋ ಎಷ್ಟು ಪ್ರಮಾಣದಲ್ಲಿ ಯಾವ ವಸ್ತು ಹಾಕಿದರೆ ಘಮ ಘಮಿಸುವ ರಸಂ ರೆಡಿಯಾಗುತ್ತದೆ ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ.

ನಾವಿಂದು ಆಂಧ್ರ ಶೈಲಿಯ ಬೊಂಬಾಟ್ ರಸಂ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಆಂಧ್ರ ಶೈಲಿಯ ಪ್ರತಿಯೊಂದು ಖಾದ್ಯಗಳು ಕೂಡ ಅದ್ಭುತ ರುಚಿ ನೀಡುತ್ತವೆ. ಹಾಗೆ ನಾವಿಂದು ಈ ಆಂಧ್ರ ಶೈಲಿಯಲ್ಲಿ ರಸಂ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಆಂಧ್ರ ಶೈಲಿ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ತೊಗರಿ ಬೇಳೆ - 100 ಗ್ರಾಂ
- ಹುಣಸೆಹಣ್ಣು - 30 ಗ್ರಾಂ
- ಟೊಮೆಟೊ - 1
- ಒಣ ಮೆಣಸಿನಕಾಯಿ - 4
- ಅರಿಶಿನ ಪುಡಿ - 1/2 ಟೀಸ್ಪೂನ್
- ಸಾಸಿವೆ - 1/2 ಟೀಸ್ಪೂನ್
- ಇಂಗು 1/4 ಟೀಸ್ಪೂನ್
- ಕರಿಬೇವಿನ ಎಲೆಗಳು - 1/4 ಕಪ್
- ಕೊತ್ತಂಬರಿ ಸೊಪ್ಪು - 1/4 ಕಪ್
- ಬೆಳ್ಳುಳ್ಳಿ
- ಕಾಳು ಮೆಣಸು
- ಹಸಿರು ಮೆಣಸಿನಕಾಯಿ - 4
- ಜೀರಿಗೆ
- ಎಣ್ಣೆ
- ರುಚಿಗೆ ಉಪ್ಪು
ಆಂಧ್ರ ಶೈಲಿ ರಸಂ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್‌ಗೆ ತೊಗರಿ ವೇಳೆ ಹಾಕಿ ಸ್ವಲ್ಪ ನೀರು ಹಾಕಿ ಮೂರು ಸೀಟಿ ಹೊಡೆಸಿಕೊಳ್ಳಬೇಕು. ಅನಂತರ ಅದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಸ್ವಲ್ಪ ಜಾಸ್ತಿ ಬಳಸಿ. ಬಳಿಕ ಇದಕ್ಕೆ ಸಾಸಿವೆ, ಒಣ ಮೆಣಸು, ಟೊಮಟೋ, ಅರಶಿಣ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಇಂಗು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ಬೇಯಿಸಿರುವ ತೊಗರಿ ಬೇಳೆಯನ್ನು ಇದಕ್ಕೆ ಹಾಕಿಕೊಳ್ಳಿ.
ಇದಕ್ಕೆ ಹುಣಸೆ ಹುಳಿ ನೆನೆಹಾಕಿ ಅದರ ನೀರು ತೆಗೆದು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಹಾಗೆ ಉಪ್ಪು ಹಾಕಿಕೊಂಡು ನಿಮಗೆ ಎಷ್ಟು ತೆಳುವಾಗಿ ಬೇಕೋ ಅಷ್ಟು ನೀರು ಹಾಕಿ ಕುದಿಯಲು ಬಿಡಿ.
ಈಗ ಇನ್ನೊಂದು ಕಡೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಕಾಳು ಮೆಣಸು, ಹಸಿ ಮೆಣಸು, ಜೀರಿಗೆ, ಹಾಕಿಕೊಂಡು ನೀರು ಹಾಕದೆ ಒಂದು ಸುತ್ತು ರುಬ್ಬಿಕೊಳ್ಳಿ. ಇದು ತರಿತರಿಯಾದರೆ ಸಾಕು. ಈಗ ಒಲೆ ಮೇಲೆ ಕುದಿಯುತ್ತಿರುವ ರಸಂಗೆ ಈ ಮಸಾಲೆಯನ್ನು ಹಾಕಿ ತಿರುಗಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಹಾಕಿಕೊಂಡು 4 ನಿಮಿಷ ಕುದಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಆಂಧ್ರ ಶೈಲಿ ರಸಂ ರೆಡಿಯಾಗುತ್ತದೆ. ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
