Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಂಧ್ರ ಶೈಲಿಯ ಹಸಿ ಮೆಣಸಿನಕಾಯಿ ಚಟ್ನಿ... ಮಳೆಗಾಲಕ್ಕೆ ಬೆಸ್ಟ್ ಟೇಸ್ಟ್!!
ಊಟ, ತಿಂಡಿಯ ಜೊತೆಗೆ ಯಾವುದಾದರು ಚಟ್ನಿ ಸವಿಯಲು ಇದ್ದರೆ ಆ ಊಟ, ತಿಂಡಿಯ ರುಚಿ ಬಹಳ ಟೇಸ್ಟಿಯಾಗಿರುತ್ತೆ. ಹಾಗೆ ನೀವು ಚಟ್ನಿಯನ್ನು ಹಲವು ಬಗೆಯಲ್ಲಿ ಮಾಡುವುದು ನೋಡಬಹುದು. ಅದ್ರಲ್ಲು ಹಸಿ ಮೆಣಸಿನ ಚಟ್ನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಬಹಳಷ್ಟು ಹಸಿ ಮೆಣಸಿನ ಚಟ್ನಿಯು ತಿಂಡಿಯ ಜೊತೆಗೆ ರುಚಿ ರುಚಿಯಾಗಿರುತ್ತೆ.
ಇನ್ನು ಮಳೆ ಬರುವ ಸಮಯದಲ್ಲಿ ಬಾಯಿ ರುಚಿ ಹೆಚ್ಚಿಸಬೇಕಾದರೆ ಈ ಹಸಿ ಮೆಣಸಿನ ಚಟ್ನಿಯು ಬಹಳ ರುಚಿಯಾಗಿರಲಿದೆ. ಮಳೆಗಾಲದಲ್ಲಿ ನೀವು ಈ ಚಟ್ನಿಯನ್ನು ಬಿಸಿ ಅನ್ನದೊಂದಿಗೆ ಸ್ವಲ್ಪ ತುಪ್ಪ ಬೆರೆಸಿಕೊಂಡು ಸವಿಯುತ್ತಿದ್ದರೆ ಆ ರುಚಿ ಹೇಳತೀರದು. ಹಸಿ ಮೆಣಸಿನಕಾಯಿ ಚಟ್ನಿ ಅದ್ಭುತ ರುಚಿಯನ್ನು ಹೊಂದಿರುತ್ತದೆ ಮತ್ತು ಅದರ ತಯಾರಿಕೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಚಟ್ನಿಯನ್ನು ಮಾಡಬಹುದು. ಹಾಗಾದ್ರೆ ಮಳೆಗಾಲದ ಸ್ಪೆಷಲ್ ಆಗಿ, ಬಿಸಿ ಬಿಸಿ ಊಟಕ್ಕೆ ಈ ಹಸಿ ಮೆಣಸಿನ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದ್ರಲ್ಲೂ ಆಂಧ್ರ ಸ್ಟೈಲ್‌ನಲ್ಲಿ ಮಾಡುವಂತಹ ಈ ಚಟ್ನಿ ಕುರಿತು ನಾವು ತಿಳಿಯೋಣ.
ಹಸಿ ಮೆಣಸಿನ ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಹಸಿ ಮೆಣಸಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಹಸಿ ಮೆಣಸು
- ಎಣ್ಣೆ
- ಹುಣಸೆ ಹುಳಿ
- ಟೊಮೆಟೋ
- ಅರಶಿಣ
- ಒಣ ಮೆಣಸು
- ಸಾಸಿವೆ
- ಬೆಳ್ಳುಳ್ಳಿ
- ಕರಿಬೇವು
ಹಸಿ ಮೆಣಸಿನ ಚಟ್ನಿ ಮಾಡುವ ವಿಧಾನವೇನು?
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 4ರಿಂದ 5 ಚಮಚ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ 1 ಚಮಚ ಹೆಸರುಕಾಳು, 1 ಬೆಳ್ಳುಳ್ಳಿ, 2 ಚಮಚ ಮೆಂತ್ಯ ಸೇರಿಸಿಕೊಂಡು ಹುರಿದುಕೊಳ್ಳಿ. ನಂತರ ಕತ್ತರಿಸಿಕೊಂಡಿರುವ ಹಸಿ ಮೆಣಸನ್ನು ಸಹ ಇದಕ್ಕೆ ಹಾಕಿ ಚೆನ್ನಾಗಿ ಕಾಯಲು ಬಿಡಿ.
ಮೆಣಸು ಚೆನ್ನಾಗಿ ಫ್ರೈ ಆಗುವಾಗ ಇದಕ್ಕೆ ಟೊಮೆಟೋ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ಸ್ವಲ್ಪ ಅರಶಿಣ, ಹುಣಸೆ ಹುಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಟೊಮೆಟೋ ಮೃದುವಾಗವರೆಗೂ ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಳ್ಳಿ. ಈಗ ಹುರಿದುಕೊಂಡಿರುವ ಎಲ್ಲಾ ಪದಾರ್ಥಗಳನ್ನು ನೀವು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ತಣ್ಣಗಾದ ಬಳಿಕ ನೀರು ಹಾಕದೆ ಹಾಗೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಬೇಕು. ಈಗ ರುಬ್ಬಿಕೊಂಡಿದ್ದ ಚಟ್ನಿಗೆ ಈ ಒಗ್ಗರಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಸಹ ಇದಕ್ಕೆ ಹಾಕಿ ಮಿಶ್ರಣ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹಸಿ ಮೆಣಸಿನ ಚಟ್ನಿ ರೆಡಿಯಾಗುತ್ತದೆ.
ನೀವು ಸಹ ಊಟದ ಜೊತೆಗೆ ಇಲ್ಲವೆ ತಿಂಡಿಯೊಂದಿಗೆ ಸವಿಯಲು ಈ ರುಚಿ ರುಚಿಯ ಹಸಿ ಮೆಣಸಿನ ಚಟ್ನಿಯನ್ನು ಮಾಡಿ ಸವಿದು ನೋಡಿ. ನಿಮ್ಮ ಊಟದ ರುಚಿ ಮತ್ತಷ್ಟು ಹೆಚ್ಚಾಗೋದು ಖಚಿತ.



Click it and Unblock the Notifications
