Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಯಾವ ತಿಂಡಿಯೇ ಇರಲಿ ಆಂಧ್ರ ಖಾರ ಚಟ್ನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನೀವು ಬೆಳಿಗ್ಗೆ ಮನೆಯಲ್ಲಿ ಇಡ್ಲಿ ಅಥವಾ ದೋಸೆ ಮಾಡಲು ಹೋಗುತ್ತೀರಾ? ಆದ್ರೆ ಈ ತಿಂಡಿ ಸವಿಯಲು ಯಾವ ಸೈಡ್ ಡಿಶ್ ಮಾಡಬೇಕು? ಯಾವ ಚಟ್ನಿ ಮಾಡಿದರೆ ಇಡ್ಲಿ ಅಥವಾ ದೋಸೆ ರುಚಿ ಹೆಚ್ಚಾಗುತ್ತೆ? ಅಥವಾ ಯಾವ ಚಟ್ನಿ ಇದಕ್ಕೆ ಚೆನ್ನಾಗಿ ಸೂಟ್ ಆಗುತ್ತೆ? ಈ ರೀತಿಯ ಪ್ರಶ್ನೆಗಳು ನಿಮಗೂ ಬಂದಿರಬಹುದು.
ಆದ್ರೆ ಇಡ್ಲಿ ಮತ್ತು ದೋಸೆಗೆ ಮಸಾಲೆಯುಕ್ತ ಖಾರ ಖಾರವಾದ ಚಟ್ನಿಯನ್ನ ಮಾಡಲು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲೊಂದು ವಿಶೇಷ ಚಟ್ನಿ ರೆಸಿಪಿ ಇದೆ. ಅದ್ರಲ್ಲೂ ಖಾರ ಚಟ್ನಿ ಅಂದ್ರೆ ಆಂಧ್ರ ಶೈಲಿಯ ಚಟ್ನಿ ನೆನಪಾಗುತ್ತೆ. ಯಾಕಂದ್ರೆ ಆಂಧ್ರದಲ್ಲಿ ಖಾರ ಹಾಕಿ ಮಾಡುವ ಖಾದ್ಯಕ್ಕೆ ಹೆಚ್ಚು ಬೇಡಿಕೆ ಅಲ್ಲಿನ ಒಂದೊಂದು ಖಾದ್ಯವೂ ಖಾರದಿಂದಲೇ ಫೇಮಸ್ ಆಗೋದು.

ನೀವು ಮಸಾಲೆಯುಕ್ತ ಚಟ್ನಿಯನ್ನು ಸೈಡ್ ಡಿಶ್ ಆಗಿ ಮಾಡಲು ಯೋಜಿಸುತ್ತಿದ್ದರ ಈ ರೀತಿ ಆಂಧ್ರ ಶೈಲಿಯ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ. ಈ ಚಟ್ನಿ ಮಾಡೋದು ತುಂಬಾನೆ ಸುಲಭ. ಏಕೆಂದರೆ ಈ ಚಟ್ನಿಗೆ ಕೆಲವೇ ವಸ್ತು ಹಾಕಿದರೆ ಸಾಕಾಗುತ್ತದೆ. ಜೊತೆಗೆ ಇದರ ರುಚಿ ಕೂಡ ಸಿಕ್ಕಾಪಟ್ಟೆ ಜಾಸ್ತಿ. ಹಾಗಾದ್ರೆ ಆಂಧ್ರ ಶೈಲಿಯಈ ಖಾರ ಚಟ್ನಿ ಮಾಡೋದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಖಾರ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಎಣ್ಣೆ - 4 ಟೀಸ್ಪೂನ್
- ಉದ್ದು - 1 tbsp
- ಕಡಲೆ - 1 tbsp
- ಕೊತ್ತಂಬರಿ ಸೊಪ್ಪು - 1 tbsp
- ಒಣ ಮೆಣಸಿನಕಾಯಿ - 5-6
- ಈರುಳ್ಳಿ - 2
- ಬೆಳ್ಳುಳ್ಳಿ - 15 ಲವಂಗ
- ಕರಿಬೇವು
- ಹುಣಸೆಹಣ್ಣು
- ಉಪ್ಪು
- ಸಾಸಿವೆ - 1/2 ಟೀಸ್ಪೂನ್
ಆಂಧ್ರ ಖಾರ ಚಟ್ನಿ ಮಾಡುವ ಪಾಕವಿಧಾನ:
ಮೊದಲು ಹುಣಸೆ ಹಣ್ಣನ್ನು ಸ್ವಲ್ಪ ನೀರಿನಲ್ಲಿ 10 ನಿಮಿಷ ನೆನೆಸಿಡಬೇಕು. ನಂತರ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಬೇಳೆ, ಉದ್ದಿನಬೇಳೆ, ಕೊತ್ತಂಬರಿ ಸೊಪ್ಪು ಹಾಕಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ನಂತರ ಒಣ ಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಸಮಯ ಹುರಿದು, ಹುರಿದ ವಸ್ತುಗಳನ್ನು ತೆಗೆದು ಬದಿಗಿಟ್ಟು ತಣ್ಣಗಾಗಲು ಬಿಡಿ.
ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಅದಕ್ಕೆ ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಸಣ್ಣ ಮಿಕ್ಸಿ ಜಾರ್ ತೆಗೆದುಕೊಂಡು ಹುರಿದುಕೊಂಡಿರುವ ಬೇಳೆ, ಜೀರಿಗೆ ಪದಾರ್ಥಗಳ ಹಾಕಿಕೊಂಡು ರುಬ್ಬಿಕೊಳ್ಳಿ.
ನಂತರ ಫ್ರೈ ಮಾಡಿಕೊಂಡಿರುವ ಈರುಳ್ಳಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೆನೆಸಿದ ಹುಣಸೆಹಣ್ಣಿನ ತುಂಡುಗಳನ್ನು ಹಾಕಿ ಸ್ವಲ್ಪ ನೀರು ಹಾಕ ಮತ್ತು ರುಬ್ಬಿಕೊಳ್ಳಿ. ನಂತರ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ನಂತರ ಈ ಚಟ್ನಿಗೆ ಕೊನೆಯದಾಗಿ ಒಗ್ಗರಣೆ ಮಾಡಿ, ಇಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆಯನ್ನು ಚಟ್ನಿಯೊಂದಿಗೆ ಕಲಕಿದರೆ ರುಚಿಯಾದ ಆಂಧ್ರ ಮಸಾಲೆ ಚಟ್ನಿ ರೆಡಿಯಾಗುತ್ತದೆ. ಈ ಚಟ್ನಿ ಬೆಳಗ್ಗಿನ ಯಾವುದೇ ತಿಂಡಿಯ ಜೊತೆ ಹಾಗೂ ಊಟಕ್ಕೂ ಅತ್ಯಂತ ರುಚಿ ನೀಡಲಿದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications