Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಬಾಯಲ್ಲಿ ನೀರು ತರಿಸುವ ಅನಾನಸ್ ಗೊಜ್ಜು; ಮನೆಯಲ್ಲಿ ಮಾಡೋದು ಹೇಗೆ?
ನೀವು ತಿಂಡಿಯೊಂದಿಗೆ ಹಾಗೂ ಊಟದೊಂದಿಗೆ ಸವಿಯಲು ಹಲವು ರೀತಿಯ ಖಾದ್ಯಗಳ ಮಾಡುತ್ತೀರಿ. ಅದ್ರಲ್ಲೂ ಚಟ್ನಿ, ಗ್ರೇವಿ, ಗೊಜ್ಜು ಇಂತಹ ರುಚಿಯ ಖಾದ್ಯಗಳ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ವಿಶೇಷವಾಗಿ ಸವಿಯಬಹುದಾದ ಯಾವುದಾದರು ಖಾದ್ಯ ಇದ್ರಂತು ಎಲ್ಲರ ಬಾಯಲ್ಲೂ ನೀರು ಬರೋದು ಖಚಿತ.
ಇಂತಹ ರುಚಿಕರ ಖಾದ್ಯಗಳ ಪೈಕಿ ನಾವಿಂದು ಸುಲಭವಾಗಿ ಮಾಡಬಹುದಾದ ಅನಾನಸ್ ಗೊಜ್ಜು ಕುರಿತಾಗಿ ತಿಳಿದುಕೊಳ್ಳೋಣ. ಅನಾನಸ್ ಹಣ್ಣು ಹಲವು ಖಾದ್ಯಗಳಿಗೆ ಬಳಸಲಾಗುತ್ತದೆ. ಅನಾನಸ್‌ನಿಂದ ಮಾಡುವ ಕೇಸರಿ ಬಾತ್ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಅನಾನಸ್‌ನ ಉಪ್ಪಿನಕಾಯಿ ಕೂಡ ಬಾಯಲ್ಲಿ ನೀರು ತರಿಸಲಿದೆ.

ಆದ್ರೆ ನೀವು ಎಂದಾದರು ಈ ಅನಾನಸ್ ಹಣ್ಣಿನಿಂದ ಮಾಡುವ ರುಚಿ ರುಚಿಯ ಗೊಜ್ಜು ಸವಿದಿದ್ದೀರಾ? ಊಟದೊಂದಿಗೆ ಹಾಗೆ ಯಾವುದೇ ತಿಂಡಿಯೊಂದಿಗೆ ಸವಿಯಲು ಈ ಗೊಜ್ಜು ಬಹಳ ರುಚಿ ನೀಡಲಿದೆ. ಹೀಗಾಗಿ ಎಲ್ಲರೂ ಈ ಗೊಜ್ಜನ್ನು ಮಾಡಿ ಸವಿಯಲು ಮುಂದಾಗುತ್ತಾರೆ. ನಾವಿಂದು ಮನೆಯಲ್ಲಿ ಸುಲಭವಾಗಿ ಮಾಡಿ ಮುಗಿಸಬಹುದಾದ, ಬಾಯಲ್ಲಿ ನೀರು ತರಿಸುವ ರುಚಿಯ ಅನಾನಸ್ ಗೊಜ್ಜು ಮಾಡುವ ಕುರಿತು ತಿಳಿಯೋಣ.
ಅನಾನಸ್ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಮಾಡುವ ವಿಧಾನವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅನಾನಸ್ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಅನಾನಸ್ ಹಣ್ಣು
- ಹಸಿ ಮೆಣಸು
- ಅರಶಿಣ
- ಉಪ್ಪು
- ಬೆಲ್ಲ
- ದನಿಯಾ ಕಾಳು
- ಮೆಂತ್ಯ
- ಉದ್ದಿನ ಬೇಳೆ
- ತೆಂಗಿನಕಾಯಿ ತುರಿ
- ಎಳ್ಳು
- ಒಣ ಮೆಣಸು
- ಸಾಸಿವೆ
- ಜೀರಿಗೆ
- ಕರಿಬೇವು
ಅನಾನಸ್ ಗೊಜ್ಜು ಮಾಡುವ ವಿಧಾನವೇನು?
ಮೊದಲು ಅನಾನಸ್ ಚೆನ್ನಾಗಿ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕತ್ತರಿಸಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಅದಕ್ಕೆ ಒಂದು ಹಸಿ ಮೆಣಸು ಹೆಚ್ಚಿ ಹಾಕಿ, ಅರಶಿಣ, 2 ಸ್ಪೂನ್ ಬೆಲ್ಲದ ಪುಡಿ, ಉಪ್ಪು, ನೀರು ಹಾಕಿ ಬೇಯಲು ಬಿಡಿ. 15 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಳ್ಳು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಒಣ ಮೆಣಸು, ದನಿಯಾ ಕಾಳು, ಮೆಂತ್ಯ ಕಾಳು, ಉದ್ದಿನ ಬೇಳೆ, 1 ಸ್ಪೂನ್ ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ತಣ್ಣಗಾದ ಈ ಎಲ್ಲಾ ಪದಾರ್ಥಗಳ ಜಾರ್‌ಗೆ ಹಾಕಿ, ನಂತರ ತೆಂಗಿನ ತುರಿ, ಹುರಿದ ಎಳ್ಳು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿದ ಮಸಾಲೆಯನ್ನು ಒಲೆ ಮೇಲಿನ ಅನಾನಸ್ 15 ನಿಮಿಷ ಬೆಂದ ಬಳಿಕ ಅದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು
ಕುದಿಯಲು ಆರಂಭಿಸಿದಾಗ ಹುಳಿ ಇರುವುದರಿಂದ ಸ್ವಲ್ಪ ಬೆಲ್ಲದ ಪುಡಿ, ಉಪ್ಪು ಹಾಕಿಕೊಂಡು ಗಟ್ಟಿ ಇದ್ದರೆ ನೀರು ಹಾಕಿಕೊಂಡು ಮತ್ತೆ 3 ನಿಮಿಷ ಕುದಿಬರಲು ಬಿಡಿ. ಈಗ ಒಣ ಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಂದು ಒಗ್ಗರಣೆ ಮಾಡಿಕೊಂಡು ಇದಕ್ಕೆ ಹಾಕಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಅನಾನಸ್ ಗೊಜ್ಜು ಸಿದ್ದವಾಗುತ್ತೆ. ಎಲ್ಲರ ಬಾಯಲ್ಲಿ ನೀರು ತರಿಸುವ ಈ ರುಚಿಯೂ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇಷ್ಟಪಟ್ಟು ಸವಿಯುತ್ತಾರೆ. ತಿಂಡಿಯೊಂದಿಗೆ ಮಾತ್ರವಲ್ಲ ಊಟಕ್ಕೂ ಇದು ಬೆಸ್ಟ್.



Click it and Unblock the Notifications