Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯಾವುದೇ ಖಾದ್ಯ ಇರಲಿ ಈ ನೆಲ್ಲಿಕಾಯಿ ಚಟ್ನಿ ಮಾಡಿ..! ಹೇಗೆ ಮಾಡೋದು?
ನಾವು ಎಷ್ಟೆಷ್ಟು ಬಗೆಯ ಚಟ್ನಿ ಸವಿದಿರುತ್ತೇವೆ. ತಿಂಡಿಗೆ, ಊಟಕ್ಕೆ, ಸ್ನ್ಯಾಕ್ಸ್ ಆಗಿ ಹೀಗೆ ಉಪ್ಪಿನಕಾಯಿ ಜೊತೆಗೆ ಚಟ್ನಿ ಸವಿದಿರುತ್ತೇವೆ. ಅದ್ರಲ್ಲು ನಾನ್ವೆಜ್ ವೆಜ್ ಚಟ್ನಿ ಸಹ ಸವಿದಿರುತ್ತೇವೆ. ಕೆಲವು ತರಕಾರಿಯ ಚಟ್ನಿಯನ್ನಂತು ನಾವು ನಿತ್ಯವು ಸವಿಯಲು ಇಷ್ಟಪಡುತ್ತೇವೆ. ಅದ್ರಲ್ಲೂ ಮೂಲಂಗಿ ಚಟ್ನಿ, ಬದನೆಕಾಯಿ ಚಟ್ನಿ, ಟೊಮೆಟೋ ಚಟ್ನಿ, ಈರುಳ್ಳಿ ಚಟ್ನಿ ಹೀಗೆ ಒಂದಲ್ಲಾ ಒಂದು ರುಚಿಕರ ಚಟ್ನಿ ಇದ್ದೇ ಇರುತ್ತೆ.
ನೀವು ಎಂದಾದ್ರು ನೆಲ್ಲಿಕಾಯಿ ಚಟ್ನಿ ಮಾಡಿ ಸವಿದಿದ್ದೀರಾ? ಕೆಲವೊಂದು ಹೋಟೆಲ್ನಲ್ಲಿ ಈ ನೆಲ್ಲಿಕಾಯಿ ಚಟ್ನಿ ನೀಡುತ್ತಾರೆ. ಅದರ ರುಚಿ ಸವಿದರಿಗೆ ಮಾತ್ರ ಗೊತ್ತಿರುತ್ತೆ. ಊಟದ ಜೊತೆಗೆ ಹಾಗೂ ಯವುದಾದರು ತಿಂಡಿಯ ಜೊತೆ ನೆಲ್ಲಿಕಾಯಿ ಚಟ್ನಿ ಸವಿಯಲು ಇದ್ದರೆ ರುಚಿ ದುಪ್ಪಟ್ಟಾಗುತ್ತೆ. ಆಧ್ರೆ ಈ ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ?

ಮನೆಯಲ್ಲಿ ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ? ಈ ಚಟ್ನಿ ಮಾಡಲು ಬೇಕಾಗುವ ಪದಾರ್ಥವೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನೆಲ್ಲಿಕಾಯಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ನೆಲ್ಲಿಕಾಯಿ - 5
- ಒಣ ಮೆಣಸು - 5
- ಹಸಿಮೆಣಸಿನಕಾಯಿ - 5
- ಕೊತ್ತಂಬರಿ ಸೊಪ್ಪು 1 ಹಿಡಿ
- ಜೀರಿಗೆ
- ಕಡ್ಲೆಬೇಳೆ
- ಉದ್ದಿನಬೇಳೆ
- ಬೆಲ್ಲ
- ಅರಿಶಿನದ ಪುಡಿ
- ಕರಿಬೇವಿನ ಸೊಪ್ಪು
- ಎಣ್ಣೆ
- ಸಾಸಿವೆ
- ಮೆಂತ್ಯ
- ಇಂಗು
- ಉಪ್ಪು
ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ, ಸಾಸಿವೆ, ಇಂಗು, ಜೀರಿಗೆ, ಮೆಂತ್ಯ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ. ಉರಿ ಸಣ್ಣದಾಗಿ ಇಟ್ಟುಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು, ಹಸಿ ಮೆಣಸು, ಕರಿಬೇವು ಹಾಕಿಕೊಂಡು ಮತ್ತೊಂದು ನಿಮಿಷ ಫ್ರೈ ಮಾಡಿ.
ನಂತರ 6 ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಂಡು ಒಂದು ನೆಲ್ಲಿಕಾಯಿಯಲ್ಲಿ 4 ರಿಂದ 5 ಭಾಗ ಆಗುವಂತೆ ಕತ್ತರಿಸಿಕೊಂಡಿರುವುದನ್ನು ಈ ಪಾತ್ರೆಗೆ ಹಾಕಿಕೊಳ್ಳಿ. ಬೀಜ ಬಳಸಬೇಡಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಪ್ರೈ ಮಾಡಿದ ಬಳಿಕ 10 ನಿಮಿಷ ಪಾತ್ರೆ ಮುಚ್ಚಿ ಬೇಯಿಸಿಕೊಳ್ಳಿ. ಆಗಾಗ ತಳ ಹಿಡಿಯದಂತೆ ಕೈ ಆಡಿಸಿ.
ಈಗ ಬೆಂದಿರುವ ಎಲ್ಲಾ ವಸ್ತುಗಳಿಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಒಲೆ ಆಫ್ ಮಾಡಿಕೊಳ್ಳಿ. ನಂತರ ಇದೆಲ್ಲವೂ ತಣ್ಣಗಾಗಲು ಬಿಡಿ. ಇಷ್ಟಾದ ಮೇಲೆ ಎಲ್ಲ ವಸಚ್ತುವನ್ನ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ತರಿತರಿಯಾಗಿ ರುಬ್ಬಿಕೊಂಡರೆ ನೆಲ್ಲಿಕಾಯಿ ಚಟ್ನಿ ರೆಡಿಯಾಗಿರುತ್ತೆ. ಇದನ್ನು ಯಾವುದೇ ಖಾದ್ಯದ ಜೊತೆ ಸವಿಯಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
