Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೇಸಿಗೆ ದಿನ ಊಟ ಸೇರುತ್ತಿಲ್ವಾ..!? ನೆಲ್ಲಿಕಾಯಿ ಚಟ್ನಿ ಇದ್ರೆ ಬೇರೇನು ಬೇಡ..!
ನೆಲ್ಲಿಕಾಯಿಯ ಬಳಸಿ ನೀವು ಹಲವು ಟೇಸ್ಟಿ ಖಾದ್ಯ ಮಾಡಿರುತ್ತೀರಿ. ಅದರಲ್ಲೂ ನೆಲ್ಲಿಕಾಯಿಯ ಉಪ್ಪಿನಕಾಯಿ ನೆನೆದರೆ ಹಲವರ ಬಾಯಲ್ಲಿ ನೀರು ಬರುತ್ತೆ. ಈ ರುಚಿಯಲ್ಲಿ ಬೇರೆ ಉಪ್ಪಿನಕಾಯಿ ಸವಿಯಲು ಸಾಧ್ಯವಿಲ್ಲ. ಬೆಟ್ಟದ ನೆಲ್ಲಿಕಾಯಿಯ ಉಪ್ಪಿನಕಾಯಿ ಮಾಡಿದರೆ ಊಟದ ಜೊತೆಗೆ ಅದ್ಭುತ ರುಚಿ ನೀಡುತ್ತೆ. ಹಾಗೆ ಈ ನೆಲ್ಲಿಕಾಯಿಯ ಆರೋಗ್ಯಕರ ಅಂಶಗಳನ್ನು ನೀವು ತಿಳಿದರೆ ಮನೆಯಲ್ಲಿ ಪದೇ ಪದೇ ಮಾಡಿ ಸವಿಯುತ್ತೀರಿ.
ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡಂಟ್ ಗುಣಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿಯು ಹಲವು ಆಯುರ್ವೇದ ಔಷಧಿಗಳಲ್ಲು ಬಳಕೆಯಲ್ಲಿದೆ. ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆ, ಕೂದಲು ಆರೋಗ್ಯ, ಹಾಗೆ ಚರ್ಮದ ಆರೋಗ್ಯಕ್ಕೂ ಕೂಡ ಇದು ಬಹಳ ಉತ್ತಮ ಆಹಾರವಾಗಿದೆ. ನೆಲ್ಲಿಕಾಯಿಯ ಜ್ಯೂಸ್ ಸೇವನೆಯು ನಿಮಗೆ ಬಹಳಷ್ಟು ಉಪಯೋಗ ನೀಡಲಿದೆ.
ಆದ್ರೆ ನಾವಿಂದು ಈ ನೆಲ್ಲಿಕಾಯಿಯಿಂದ ಮಾಡುವ ಹುಳಿ ಹುಳಿಯಾದ ಚಟ್ನಿಯ ಕುರಿತು ತಿಳಿದುಕೊಳ್ಳೋಣ. ನೆಲ್ಲಿಕಾಯಿಯ ಈ ಚಟ್ನಿ ಯಾವುದೇ ಖಾದ್ಯದ ಜೊತೆಗೂ ಸವಿಯಬಹುದು. ಊಟದ ಜೊತೆಗಂತು ಬಹಳ ರುಚಿ ನೀಡಲಿದೆ. ಹಾಗೆ ಮಾಡುವುದು ಕೂಡ ಬಹಳ ಸುಲಭ. ಮೊದಲೇ ಹೇಳಿದಂತೆ ಇದು ಆರೋಗ್ಯಕ್ಕೆ ಉತ್ತಮ. ಹಾಗಾದ್ರೆ ಈ ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ನೆಲ್ಲಿಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ನೆಲ್ಲಿಕಾಯಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ನೆಲ್ಲಿಕಾಯಿ - ಕಾಲು ಕೆಜಿ
- ಒಣ ಮೆಣಸಿನಕಾಯಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ಜೀರಿಗೆ
- ಕಡ್ಲೆಬೇಳೆ
- ಉದ್ದಿನಬೇಳೆ
- ಬೆಲ್ಲ
- ಅರಿಶಿನದ ಪುಡಿ
- ಮೆಂತ್ಯ ಕಾಲು
- ಇಂಗು
- ಉಪ್ಪು
- ಎಣ್ಣೆ
ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಇದಕ್ಕೆ ಸಾಸಿವೆ, ಇಂಗು, ಜೀರಿಗೆ, ಮೆಂತ್ಯ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು, ಹಸಿ ಮೆಣಸು, ಕರಿಬೇವು, ಹಾಕಿ 1 ನಿಮಿಷ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ಹಸಿ ಮೆಣಸು ಭಾಗ ಮಾಡಿಕೊಂಡು ಇದಕ್ಕೆ ಹಾಕಿ. ಈಗ ನೆಲ್ಲಿಕಾಯಿಯನ್ನು ಸೀಳಿಕೊಳ್ಳಬೇಕು. ಅದರ ಬೀಜ ತೆಗೆದು ಸಣ್ಣಗಾಗಿ ಹೆಚ್ಚಿ ಇದಕ್ಕೆ ಹಾಕಿಕೊಳ್ಳಿ.
ಈಗ ನೆಲ್ಲಿಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಫ್ರೈ ಮಾಡುವಾಗ ಇದಕ್ಕೆ ಅರಶಿಣ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ. 2 ನಿಮಿಷದ ಬಳಿಕ ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಬೇಕು. ಆಗಾಗ ಮಿಕ್ಸ್ ಮಾಡಿಕೊಳ್ಳುತ್ತಾ ಇರಬೇಕು. ಈಗ ಸಣ್ಣದಾಗಿ ಹೆಜ್ಜಿಕೊಂಡಿರುವ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಕೊತ್ತಂಬರಿ ಹೆಚ್ಚು ಬಳಸಿಕೊಂಡರೆ ಚಟ್ನಿ ರುಚಿ ಅದ್ಭುತವಾಗಿರುತ್ತೆ.
ಈಗ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ನೆಲ್ಲಿಕಾಯಿಗಳ ಹಾಕಿಕೊಂಡು, ಬಳಿಕ ಇದಕ್ಕೆ ಉಪ್ಪು, ಸ್ವಲ್ಪ ಬೆಲ್ಲ, ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ. ನೀರು ಸೇರಿಸಿಕೊಳ್ಳದೆ ತರಿ ತರಿಯಾಗಿ ರುಬ್ಬಿ. ಇಷ್ಟಾದರೆ ನಿಮ್ಮ ಮುಂದೆ ನೆಲ್ಲಿಕಾಯಿ ಚಟ್ನಿ ರೆಡಿಯಾಗುತ್ತೆ. ಇದಕ್ಕೆ ಹುಳಿ, ಟೊಮೆಟೋ ಹಾಕದೆ ಮಾಡಿಕೊಳ್ಳಬೇಕು. ಇದು ಅನ್ನಕ್ಕೆ ಬಹಳ ರುಚಿ ನೀಡಲಿದೆ.



Click it and Unblock the Notifications
