Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನೀವು ಬಿರಿಯಾನಿ ಪ್ರಿಯರಾಗಿದ್ದರೆ, ಮನೆಯಲ್ಲಿ ಅಥವಾ ಹೋಟೆಲ್ನಲ್ಲಿ ಬಿರಿಯಾನಿ ಸವಿಯಲು ಇಚ್ಚಿಸುತ್ತೀರಿ. ಇನ್ನು ಬಿರಿಯಾನಿಯಲ್ಲಿ ಹತ್ತಾರು ವಿಧಗಳಿವೆ. ಹೈದರಾಬಾದ್ ಬಿರಿಯಾನಿ, ಅಂಬೂರ್ ಬಿರಿಯಾನಿಯಂತೆ ಈಗ ಅವರದ್ದೇ ಹೋಟೆಲ್ನ ಸ್ಪೇಷಲ್ ಡಿಶ್ ಬಿರಿಯಾನಿಗಳು ಸಹ ಲಭ್ಯವಿದೆ.
ಒಂದೊಂದು ಹೋಟೆಲ್ನಲ್ಲಿ ಒಂದೊಂದು ರೆಸಿಪಿಯ, ಒಂದೊಂದು ಶೈಲಿಯ ಬಿರಿಯಾನಿ ನಾವು ಸವಿಯಬಹುದು. ಅದರಲ್ಲೂ ಈ ಅಂಬೂರ್ ಬಿರಿಯಾನಿ ಈಗ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಇದರಲ್ಲಿ ಮಸಾಲೆ ಕಡಿಮೆಯಾಗಿ ಹೆಚ್ಚು ರುಚಿ ನೀಡುವ ಅಂಶ ಸೇರಿರುವ ಕಾರಣ ಎಲ್ಲರಿಗೂ ತುಂಬಾನೆ ಇಷ್ಟವಾಗುವ ಬಿರಿಯಾನಿ ಇದಾಗಿದೆ.

ಆದ್ರೆ ಬಿರಿಯಾನಿಯನ್ನು ಪ್ರತಿ ಬಾರಿಯೂ ಹೋಟೆಲ್ನಲ್ಲಿ ಸವಿಯುತ್ತಿದ್ದರೆ ಜೇಬಿಗೆ ಕತ್ತರಿ ಬೀಳೋದು ಖಚಿತ. ಯಾಕಂದ್ರೆ ಈಗಂತು ಹೋಟೆಲ್ ಊಟ, ತಿಂಡಿ ಬೆಲೆ ಗಗನಕ್ಕೇರಿದೆ. ಹೀಗಾಗಿ ನಾವಿಂದು ಮನೆಯಲ್ಲೇ ಅಂಬೂರು ಬಿರಿಯಾನಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಅಂಬೂರ್ ಬಿರಿಯಾನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಈ ಬಿರಿಯಾನಿ ಮಾಡುವ ಸರಿಯಾದ ವಿಧಾನವೇನು? ಎಷ್ಟು ಸಮಯ ಬೇಕಾಗಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಅಂಬೂರ್ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು
- ಚಿಕನ್ - 500 ಗ್ರಾಂ
- ಬಿರಿಯಾನಿ ರೈಸ್ ಅಥವಾ ಜೀರಾ ರೈಸ್ - 500 ಗ್ರಾಂ
- ಒಣ ಮೆಣಸಿನಕಾಯಿ - 10
- ಲವಂಗ - 5
- ಏಲಕ್ಕಿ - 5
- ಚಕ್ರಮೊಗ್ಗು-1
- ದಾಲ್ಚಿನ್ನಿ - 5
- ಈರುಳ್ಳಿ (ಕತ್ತರಿಸಿದ) - 2
- ಟೊಮೇಟೊ - 2
- ಪುದೀನ
- ಕೊತ್ತಂಬರಿ ಸೊಪ್ಪು
- ಹಸಿರು ಮೆಣಸಿನಕಾಯಿ - 4
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
- ತುಪ್ಪ
ಅಂಬೂರ್ ಬಿರಿಯಾನಿ ಮಾಡುವುದು ಹೇಗೆ?
ಮೊದಲು ಕಕ್ಕುರ್ಗೆ ತುಪ್ಪ ಹಾಕಿಕೊಳ್ಳಿ, ತುಪ್ಪ ಕಾದ ಬಳಿಕ ಜೀರಿಗೆ, ಚಕ್ರಮೊಗ್ಗು ಲವಂಗ, ಚೆಕ್ಕೆ ಏಲಕ್ಕಿ ಹಾಕಿಕೊಳ್ಳಿ, ಜೊತೆಗೆ ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇನ್ನೊಂದು ಬೌಲ್ನಲ್ಲಿ ಅಕ್ಕಿಯನ್ನು ಅಳತೆಯ ಪ್ರಕಾರ ತೆಗೆದುಕೊಂಡು ನೀರಿನಲ್ಲಿ ನೆನೆಸಿಡಿ, ಸುಮಾರು 20 ನಿಮಿಷ ನೆನೆದರೆ ಸಾಕು. ಇದರ ಜೊತೆ ಇನ್ನೊಂದು ಬೌಲ್ನಲ್ಲಿ ಕೆಂಪು ಮೆಣಸು ಸಹ ನೆನೆಸಿಟ್ಟುಕೊಳ್ಳಿ. 15 ನಿಮಿಷ ನೆನೆಸಿ ಅದನ್ನು ಮಿಕ್ಸರ್ ಜಾರ್ಗೆ ಹಾಕಿಕೊಳ್ಳಿ. ಬಳಿಕ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ.
ಈ ರುಬ್ಬಿದ ಮೆಣಸಿನ ಪೇಸ್ಟ್ ಅನ್ನು ಒಲೆ ಮೇಲಿರುವ ಫ್ರೈಗೆ ಹಾಕಿಕೊಳ್ಳಿ. ಬಳಿಕ ಹಸಿ ಮೆಣಸು, ಟೊಮೆಟೋ, ಪುದಿನ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಫ್ರೈ ಗೊಜ್ಜಿನ ರೀತಿ ಮಾಡಿಕೊಳ್ಳಿ. 3 ನಿಮಿಷಗಳ ಕಾಲ ಫ್ರೈ ಮಾಡಿದರೆ ಸಾಕು.
ಈಗ ಇದಕ್ಕೆ 500 ಗ್ರಾಂ ಚಿಕನ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಮೊಸರು, ಉಪ್ಪು ಹಾಕಿ ಮಿಕ್ಸ್ ಮಾಡಿ. 3 ನಿಮಿಷ ಫ್ರೈ ಮಾಡಿದರೆ ಸಾಕು. ಇಷ್ಟಾದ ಅದಕ್ಕೆ ಎರಡರಷ್ಟು ನೀರು ಹಾಕಿ ನೀರು ಹಾಕಿದ ಬಳಿಕ ಒಂದು ಕುದಿಬರುವವರೆಗೂ ಬಿಡಿ. ನೀರು ಕುದಿಬರುವಾಗ ತೊಳೆದಿಟ್ಟುಕೊಂಡ ನೀರನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ ಕುಕ್ಕರ್ ಮುಚ್ಚಳ ಮುಚ್ಚಿ 3 ನಿಮಿಷ ಬೇಯಿಸಿಕೊಳ್ಳಿ, ಈ ವೇಳೆ 1 ಸೀಟಿ ಹೊಡೆಯಲು ಬಿಡಿ. ಇದಕ್ಕೆ ನೀರು ಹಾಕುವಾಗ ಸ್ವಲ್ಪ ಅಳತೆ ಮೇಲೆ ಗಮನವಿಡಿ. ಬಳಿಕ ಉರಿ ಸಿಮ್ನಲ್ಲಿ ಇಟ್ಟು 3 ನಿಮಿಷ ಬೇಯಿಸಿ ಆದರೆ ಸೀಟಿ ಹೊಡೆಯುವ ಮುನ್ನ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಅಂಬೂರ್ ಬಿರಿಯಾನಿ ರೆಡಿಯಾಗಿರುತ್ತೆ. ಮೊಸರು ಬಜ್ಜಿ ಜೊತೆ ಸವಿಯಲು ಈ ಬರಿಯಾನಿ ಸವಿಯಲು ಬಹಳ ರುಚಿ ನೀಡುತ್ತದೆ.



Click it and Unblock the Notifications
