Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಬಲು ರುಚಿ ರುಚಿಯ ದಂಟು ಸೊಪ್ಪಿನ ಪಲ್ಯ.! ಆರೋಗ್ಯಕ್ಕೂ ಬೆಸ್ಟ್ ಇದು..!
ಸೊಪ್ಪಿನ ಪಲ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಸೊಪ್ಪಿನ ಪಲ್ಯ ಇದ್ದರೆ ಊಟ್ಕಕೆ ರುಚಿ ಬರುತ್ತೆ. ಎಲ್ಲಾ ಸೊಪ್ಪಿನಲ್ಲೂ ಆರೋಗ್ಯಕ್ಕೆ ಬೇಕಾದ ಅಂಶಗಳು ಇರುತ್ತವೆ. ಸೊಪ್ಪಿನಲ್ಲಿ ಹೆಚ್ಚಾಗಿ ಐರನ್ ಅಂಶ ಇರುವುದರಿಂದ ಹಿರಿಯರು ಸೊಪ್ಪು ತರಕಾರಿ ಹೆಚ್ಚು ಸೇವಿಸುವಂತೆ ಹೇಳುತ್ತಿರುತ್ತಾರೆ. ಹಾಗೆ ನಮ್ಮಲ್ಲಿ ಕಬ್ಬಿಣಾಂಶ ಹೆಚ್ಚಾದಾಗ ಸೊಪ್ಪಿನ ಬಳಕೆ ಹೆಚ್ಚಿಸಲು ವೈದ್ಯರು ಕೂಡ ಹೇಳುತ್ತಾರೆ.
ಇನ್ನು ಸೊಪ್ಪಿನಿಂದ ಮಾಡುವಂತಹ ಖಾದ್ಯಗಳ ವಿಚಾರಕ್ಕೆ ಬಂದರೆ ಪನೀರ್, ಬಸಳೆ ಸೊಪ್ಪು, ಪುದಿನ, ದಂಟು ಸೊಪ್ಪು, ಹೀಗೆ ಹತ್ತಾರು ಬಗೆಯ ಖಾದ್ಯ ಮಾಡಲು ಒಂದೊಂದು ಸೊಪ್ಪುಗಳ ನಾವು ನೋಡಬಹುದು. ಅದರಲ್ಲೂ ನೀವು ಉಪ್ಪು ಸೊಪ್ಪಿನ ಪಲ್ಯವನ್ನ ಒಮ್ಮೆ ಸವಿದು ನೋಡಿದರೆ ಮತ್ತೆ ಮತ್ತೆ ಸವಿಯುವ ಮನಸ್ಸಾಗುತ್ತೆ. ಈ ಸೊಪ್ಪುಗಳಲ್ಲಿ ವಿಶೇಷವಾದ ರುಚಿಯ ಗುಣ ಇದ್ದು ನೀವು ಯಾವುದೇ ಖಾದ್ಯ ಮಾಡಿದ್ರೂ ಕೂಡ ರುಚಿ ನೀಡುತ್ತೆ.

ಹೀಗಾಗಿ ನಾವಿಂದು ಸೊಪ್ಪಿನಿಂದ ಮಾಡುವಂತಹ ದಂಟು ಸೊಪ್ಪಿನ ಪಲ್ಯವನ್ನು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ದಂಟು ಸೊಪ್ಪಿನ ಪಲ್ಯ ಎಷ್ಟು ರುಚಿಕರ ಆಗಿರುತ್ತೆ ಅಂದ್ರೆ ಒಮ್ಮೆ ನೀವು ಸವಿದರೆ ಸಾಕು ಈ ರುಚಿಯ ಹಿಂದೆ ಬಿದ್ದು ಯಾವಾಗಲು ಮಾಡುತ್ತಿರುತ್ತೀರಿ. ಮಕ್ಕಳಿಗೂ ಕೂಡ ಇದು ಬಹಳ ಇಷ್ಟವಾಗುವ ಖಾದ್ಯ. ದಂಟು ಸೊಪ್ಪನ್ನು ಒಂದೊಂದು ಕಡೆ ಒಂದೊಂದು ರೀತಿ ಹೆಸರಿನಲ್ಲಿ ಕರೆಯಲಾಗುತ್ತೆ. ಇದನ್ನು ಹರಿವೆ ಸೊಪ್ಪು, ರಾಜಗಿರಿ ಸೊಪ್ಪು ಎಂದು ಕೂಡ ಕರೆಯಲಾಗುತ್ತದೆ. ಈ ಸೊಪ್ಪಿನಲ್ಲಿ ಮೂರು ರೀತಿಯ ಬಣ್ಣ ನೋಡಬಹುದು.
ಹಾಗಾದ್ರೆ ಈ ದಂಟು ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಸೊಪ್ಪನ್ನು ಹೇಘೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದಂಟು ಸೊಪ್ಪಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
ದಂಟು ಸೊಪ್ಪು
ಈರುಳ್ಳಿ
ಉದ್ದಿನ ಬೇಳೆ
ಕಡಲೆ ಬೇಳೆ
ಬೆಳ್ಳುಳ್ಳಿ
ಹಸಿ ಮೆಣಸು
ಉಪ್ಪು
ಎಣ್ಣೆ
ತೆಂಗಿನ ತುರಿ
ದಂಟು ಸೊಪ್ಪಿನ ಪಲ್ಯ ಮಾಡುವುದು ಹೇಗೆ?
ಮೊದಲು ದಂಟು ಸೊಪ್ಪನ್ನು ಚೆನ್ನಾಗಿ ತೊಳೆದು ಬಿಸಿಡಿಕೊಂಡು ಸಣ್ಣ ಸಣ್ಣದಾಗಿ ಅದರ ಎಲೆಯನ್ನು ಹಾಗು ದಂಟನ್ನು ಕತ್ತರಿಸಿಕೊಳ್ಳಬೇಕು. ನಂತರ ಒಂದು ನೀರಿನಲ್ಲಿ ಹಾಕಿಡಬೇಕು. ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕಡಲೆ ಬೇಳೆ, ಉದ್ದಿನ ಬೇಳೆ, ಬೆಳ್ಳುಳ್ಳಿ ಹಾಕಿಕೊಂಡು 1 ನಿಮಿಷ ಫ್ರೈ ಮಾಸಡಿ.
ನಂತರ ಇದಕ್ಕೆ ಹಸಿ ಮೆಣಸು, ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ಬಳಿಕ ಇದಕ್ಕೆ ತೊಳೆದು ಇಟ್ಟಿರುವ ಸೊಪ್ಪನ್ನು ನೀರು ಹಿಂಡಿಕೊಂಡು ಈ ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಫ್ರೈ ಆದ ಬಳಿಕ ಕಡಿಮೆ ಎನಿಸುತ್ತದೆ. ಹೀಗಾಗಿ ಹೆಚ್ಚನ ಪ್ರಮಾನದಲ್ಲಿ ಸೊಪ್ಪು ತೆಗೆದುಕೊಳ್ಳಿ.
5 ನಿಮಿಷ ಫ್ರೈ ಆದ ಬಳಿಕ ನಿಮಗೆ ಸ್ವಲ್ಪ ನೀರು ಬೇಕಾದರೆ ನೀರು ಹಾಕಿ ಪತ್ತೆ ಫ್ರೈ ಮಾಡಬಹುದು. ಬೇಡವೆಂದರೂ ನಡೆಯುತ್ತದೆ. ಬಳಿಕ ಇದಕ್ಕೆ ಕೊನೆಯದಾಗಿ ತೆಂಗಿನ ಕಾಯಿ ತುರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ದಂಟು ಸೊಪ್ಪಿನ ಪಲ್ಯ ರೆಡಿಯಾಗುತ್ತದೆ. ಒಮ್ಮೆ ನೀವು ಕೂಡ ಮನೆಯಲ್ಲಿ ಈ ರೀತಿ ಸೊಪ್ಪಿನ ಪಲ್ಯ ಟ್ರೈ ಮಾಡಿ ನೋಡಿ.
ನಿಮ್ಮ ಊಟಕ್ಕೆ, ತಿಂಡಿಗೆ ಯಾವುದೇ ರೀತಿಯ ಖಾದ್ಯಕ್ಕೂ ಈ ಸೊಪ್ಪಿನ ಪಲ್ಯ ಬೊಂಬಾಟ್ ರುಚಿ ನೀಡುತ್ತೆ. ಅದರಲ್ಲೂ ಚಪಾತಿ, ಇಡ್ಲಿ, ದೋಸೆಗೆ ಹೇಳಿ ಮಾಡಿಸಿದ ಖಾದ್ಯ ಇದು.



Click it and Unblock the Notifications