Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಪಲಾವ್ ಸವಿದು ಬೇಸರ ಆಗಿದ್ಯಾ? 1 ಆಲೂಗಡ್ಡೆಯಲ್ಲಿ ಮಾಡಿ ಆಲೂ ರೈಸ್ ಬಾತ್!
ಬ್ರೇಕ್ಫಾಸ್ಟ್ಗೆ ನೀವು ಹಲವು ರೀತಿಯ ಖಾದ್ಯಗಳ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಅದ್ರಲ್ಲೂ ರೈಸ್ನಿಂದ ಮಾಡುವಂತಹ ಎಲ್ಲಾ ಖಾದ್ಯಗಳು ಕೂಡ ಇಷ್ಟವಾಗಬಹುದು. ನೀವು ಬೆಳಗ್ಗೆ ತಿಂಡಿಗೆ ಸವಿದು ಮಕ್ಕಳಿಗೆ, ಪತಿಗೆ ಇಲ್ಲವೆ ನೀವೇ ಮಧ್ಯಾಹ್ನದ ಬಾಕ್ಸ್ಗೂ ಬಳಸುವಂತಹ ರೈಸ್ ರೆಸಿಪಿಯನ್ನು ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಪಲಾವ್, ಚಿತ್ರಾನ್ನ, ರೈಸ್ ಬಾತ್, ಟೊಮೆಟೋ ಬಾತ್, ಪುಳಿಯೋಗರೆ ಹೀಗೆ ಹತ್ತಾರು ರೀತಿ ಖಾದ್ಯಗಳ ಮಾಡಿ ಸವಿದಿರಬಹುದು.
ಇನ್ನು ಹಲವರಿಗೆ ಪಲಾವ್ ಸವಿಯುವುದು ಅಂದರೆ ಬೇಸರ ತರಿಸಲಿದೆ. ನಿತ್ಯ ಒಂದೇ ರೀತಿಯ ಪಲಾವ್ ನಿಮ್ಮ ನಾಲಿಗೆ ರುಚಿ ಕೆಡಿಸಿರಬಹುದು. ಹೀಗಾಗಿ ರೈಸ್ನಿಂದ ಮಾಡುವ ರೆಸಿಪಿಯಲ್ಲಿ ಹಲವರು ಪಲಾವ್ ಅನ್ನು ಇಷ್ಟಪಡೋದಿಲ್ಲ. ಅಂತಹ ಮಂದಿಗಾಗಿ ನಾವಿಂದು ಆಲೂ ರೈಸ್ ಬಾತ್ ಮಾಡುವ ಕುರಿತು ತಿಳಿದುಕೊಳ್ಳೋಣ.

ಈ ಆಲೂ ರೈಸ್ ಎಲ್ಲರಿಗೂ ಇಷ್ಟವಾಗುತ್ತೆ, ಹಾಗೆ ಪಲಾವ್ಗಿಂತಲೂ ಇದರ ರುಚಿ ದುಪ್ಪಟ್ಟಾಗಿರಲಿದೆ. ಅದು ಸಹ ಒಂದೇ ಒಂದು ಆಲೂಗಡ್ಡೆ ಇದ್ದರೂ ಸಾಕು ಈ ತಿಂಡಿ ಮಾಡಿ ಸವಿಯಬಹುದು. ಹಾಗಾದ್ರೆ ಈ ರುಚಿ ರುಚಿಯ ಆಲೂ ರೈಸ್ ಬಾತ್ ಮಾಡುವ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂ ರೈಸ್ ಬಾಯ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಆಲೂ ರೈಸ್ ಬಾತ್ಗೆ ಬೇಕಾಗುವ ವಸ್ತುಗಳು
- ಆಲೂಗಡ್ಡೆ
- ಅಕ್ಕಿ
- ಜೀರಿಗೆ
- ಕರಿಬೇವು
- ಖಾರದ ಪುಡಿ - ಅರ್ಧ ಚಮಚ
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೆಂಪು ಮೆಣಸಿನಕಾಯಿ - 2
- ಹಸಿ ಮೆಣಸಿನಕಾಯಿ - 3
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಈರುಳ್ಳಿ - 1
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಆಲೂ ರೈಸ್ ಬಾತ್ಗೆ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಇದಕ್ಕೆ ಜೀರಿಗೆ, ಸಣ್ಣದಾಗಿ ಕತ್ತರಿಸಿಕೊಂಡ ಆಲೂಗಡ್ಡೆಯನ್ನು ಇದಕ್ಕೆ ಹಾಕಿ 1 ನಿಮಿಷ ಫ್ರೈ ಮಾಡಿ. ಹಾಗೆ ಚಿಕ್ಕದಾಗಿ ಕತ್ತರಿಸಿರುವ 1 ಈರುಳ್ಳಿಯನ್ನು ಸಹ ಹಾಕಿಕೊಂಡು, ಉಪ್ಪು ಹಾಕಿ 5 ನಿಮಿಷ ಪ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಹಸಿ ಮೆಣಸು ಹಾಗೂ ಒಣ ಮೆಣಸು ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಖಾರದ ಪುಡಿ, ಕರಿಬೇವು ಸಹ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಗರಂ ಮಸಾಲ ಕೂಡ ಹಾಕಿಕೊಳ್ಳಬಹುದು. ಹೀಗೆ 1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಈಗ ಹುಡಿ ಹುಡಿಯಾದ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
ಅನ್ನಕ್ಕೆ ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಆಲೂ ರೈಸ್ ಬಾಯ್ ರೆಡಿಯಾಗುತ್ತೆ. ಬಹಳ ಸುಲಭವಾಗಿ ಹಾಗೆ ಕಡಿಮೆ ವಸ್ತುಗಳ ಬಳಸಿ ಮಾಡುವಂತಹ ರೆಸಿಪಿ ಇದು. ಯಾವಾಗಲು ಪಲಾವ್ ತಿಂದು ಬೇಸರ ಆಗಿದ್ದರೆ ಇದನ್ನು ಥಟ್ ಎಂದು ಮಾಡಿ ಸವಿಯಬಹುದು.



Click it and Unblock the Notifications