Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಖತ್ ರುಚಿಯ ಆಲೂ ಪೂರಿ ಮಾಡಿ ನೋಡಿ...!
ಬೆಳಗಿನ ಬ್ರೇಕ್‌ಫಾಸ್ಟ್ ರೆಸಿಪಿ ಅಂದ್ರೆ ಅಲ್ಲಿ ಹತ್ತಾರು ಖಾದ್ಯಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಅದರಲ್ಲಿ ಪೂರಿಯೂ ಒಂದು ಈ ಪೂರಿಯಲ್ಲೂ ಹತ್ತಾರು ವಿಧಗಳಿವೆ. ಜೊತೆಗೆ ಪೂರಿ ಎಲ್ಲರಿಗೂ ಇಷ್ಟವಾಗುವಂತಹ ರೆಸಿಪಿಯಾಗಿದೆ. ಯಾಕಂದ್ರೆ ನೀವು ಬೆಳಗ್ಗೆ ಯಾವುದೇ ಹೋಟೆಲ್‌ಗೆ ಕಾಲಿಟ್ಟಲು ಅಲ್ಲಿ ಪೂರಿ ಅಂತು ಕಡ್ಡಾಯವಾಗಿ ಇದ್ದೇ ಇರುತ್ತೆ.
ಈ ಪೂರಿಯನ್ನು ಇಷ್ಟ ಪಡದವರೇ ಇಲ್ಲ. ಸುಲಭವಾಗಿ ಹಿಟ್ಟು ಕಲಸಿ ಮಾಡಬಹುದಾದ ಈ ರೆಸಿಪಿಯನ್ನು ಎಲ್ಲರು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಆದರೆ ಈ ಪೂರಿಯ ಹತ್ತಾರು ವಿಧಗಳಲ್ಲಿ ನಾವು ಕೆಲವೇ ಕೆಲವು ವಿಧದ ರುಚಿ ನೋಡಿರುತ್ತೇವೆ. ಹಾಗಾದ್ರೆ ಇಂದು ನಾವು ಆಲೂಗಡ್ಡೆಯ ಪೂರಿ ಕುರಿತು ತಿಳಿದುಕೊಳ್ಳೋಣ.

ಆಲೂ ಪೂರಿ ಮೃದುವಾಗಿ ತಿನ್ನಲು ಸಾಮಾನ್ಯ ಪೂರಿಗಿಂತಲೂ ಹೆಚ್ಚು ರುಚಿಕರವಾಗಿರುತ್ತೆ. ಮಾಡಲು ತುಂಬ ಸುಲಭದ ತಿಂಡಿ ಇದಾಗಿದೆ. ಈ ಪೂರಿ ಜೊತೆ ತೆಂಗಿನಕಾಯಿ ಚಟ್ನಿ ಇದ್ದರಂತೂ ಅದರ ರುಚಿ ದುಪ್ಪಟ್ಟಾಗುತ್ತದೆ. ಹಾಗಾದ್ರೆ ಈ ಆಲೂ ಮಾಡುವುದು ಹೇಗೆ? ಆಲೂ ಪೂರಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನ ಏನು? ಎಷ್ಟು ಸಮಯ ಬೇಕು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಆಲೂ ಪೂರಿ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು - 200 ಗ್ರಾಮ್
- ಆಲೂಗಡ್ಡೆ - 2
- ಗೋಧಿ ಹಿಟ್ಟು
- ಖಾರದ ಪುಡಿ
- ಅರಶಿನ ಪುಡಿ
- ಕೊತ್ತಂಬರಿ
- ಉಪ್ಪು
- ಎಣ್ಣೆ
ಆಲೂ ಪೂರಿ ಮಾಡುವುದು ಹೇಗೆ?
ಮೊದಲು ಆಲುಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ಆಲೂ ಗಡ್ಡೆ ಒಡೆದರೆ ಪುಡಿಯಾಗುವಷ್ಟು ಮೆತ್ತಗೆ ಬೇಯಿಸಿಕೊಳ್ಳಬೇಕು. ಬಳಿಕ ಸಿಪ್ಪೆಯನ್ನು ತೆಗೆದು ಪುಡಿ ಮಾಡಿಕೊಳ್ಳಿ. ಕುಕ್ಕರ್‌ನಲ್ಲಿ ಒಂದು ಸೀಟಿ ಹೊಡೆಸಿದರೆ ಆಲೂಗಡ್ಡೆ ಹದವಾಗುತ್ತದೆ.
ಈ ರೀತಿ ಪುಡಿ ಮಾಡಿಕೊಂಡ ಆಲೂಗಡ್ಡೆಗೆ ಮೈದಾ ಹಿಟ್ಟು ಮಿಕ್ಸ್ ಮಾಡಿ. ಬಳಿಕ ಇದಕ್ಕೆ ಕೊತ್ತಂಬರಿ, ಉಪ್ಪು ಖಾರದ ಪುಡಿ ಅರಶಿಣ ಪುಡಿ, ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆ ಹಾಕಿರುವುದು ಕೈಗೆ ಸಿಗಬಾರದು. ಅಂದರೆ ಚಪಾತಿ ಹಿಟ್ಟಿನಂತೆ ನುಣುಪಾಗುವಷ್ಟು ಕಲಸಿಕೊಳ್ಳಿ.
ಇದಾದ ಬಳಿಕ 5 ರಿಂದ 10 ನಿಮಿಷ ಬಿಡಬೇಕು. ಈ ಹಿಟ್ಟು ಬದಿಗಿಟ್ಟು ಒಲೆ ಮೇಲೆ ಪಾತ್ರೆಯಿಟ್ಟು ಎಣ್ಣೆ ಹಾಕಿಕೊಳ್ಳಿ, ಬಳಿಕ ಹಿಟ್ಟು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿಕೊಂಡು ಲಟ್ಟಿಸಿಕೊಳ್ಳಿ. ತೀರ ದಪ್ಪ ಇಲ್ಲವೆ ತೆಳುವಾಗಿ ಲಟ್ಟಿಸದೆ ಮಧ್ಯಮವಾಗಿ ಲಟ್ಟಿಸಿಕೊಳ್ಳಿ.
ಈ ಲಟ್ಟಿಸಿಕೊಂಡ ಪೂರಿಯನ್ನು ಎಣ್ಣೆಯಲ್ಲಿ ಬಿಡಿ. ಉರಿ ಸಣ್ಣಗೆ ಇಟ್ಟುಕೊಳ್ಳಿ. ಈ ಪೂರಿಯನ್ನು ಎರಡೂ ಕಡೆ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪೂರಿ ಸಿದ್ಧವಾಗುತ್ತದೆ. ಇದನ್ನು ಸಾಗು, ಚಟ್ನಿ ಹೀಗೆ ಯಾವುದಾದರು ಸೈಡ್ಸ್ ಜೊತೆ ಸವಿಯಲು ನೀಡಿದರೆ ರುಚಿ ದುಪ್ಪಟ್ಟಾಗುತ್ತದೆ.
ಕಾಯಿ ಚಟ್ನಿ ಹೀಗೆ ಮಾಡಿ ನೋಡಿ
ಕಾಯಿ ಚಟ್ನಿ ಮಾಡೋದು ಸಹ ತುಂಬಾನೆ ಸುಲಭ. ಮೊದಲು ಕಾಯಿಯನ್ನು ತುರಿದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ, ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾವಿಗೆ, ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ ಕರಿದುಕೊಳ್ಳಿ, ಇದಕ್ಕೆ ಬೇಕಾದರೆ ಒಣ ಮೆಣಸು, ಒಂದು ಚಿಟಿಕೆ ಇಂಗು, ಹಾಕಿ ಈ ಒಗ್ಗರಣೆಯನ್ನು ರುಬ್ಬಿಕೊಂಡಿರುವ ಕಾಯಿ ಜೊತೆಗೆ ಮಿಕ್ಸ್ ಮಾಡಿಕೊಳ್ಳಿ, ಇದಕ್ಕೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ಸುಲಭದ ಕಾಯಿ ಚಟ್ನಿ ರೆಡಿಯಾಗುತ್ತದೆ. ಇದು ಈರುಳ್ಳಿ ಬಳಸದೆ ಮಾಡುವ ಚಟ್ನಿಯಾಗಿದೆ.



Click it and Unblock the Notifications
