Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಟೀ-ಕಾಫಿ ಜೊತೆ ಬಿಸಿ ಬಿಸಿ ಆಲೂ ಬಜ್ಜಿ..! ಮಾಡೋದು ತುಂಬಾನೆ ಸುಲಭ!
ಊಟ ಆಗಿ ಸಂಜೆ ವೇಳೆ ಟೀ ಜೊತೆ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಟೀ-ಕಾಫಿ ರುಚಿ ಮತ್ತಷ್ಟು ಹೆಚ್ಚಾಗೋದು ಪಕ್ಕಾ. ಅದ್ರೆ ಟೀ ಜೊತೆ ಸವಿಯಲು ಮಾಡೋದು ಏನು? ಹೆಚ್ಚಾಗಿ ಟೀ ಜೊತೆಗೆ ಬಿಸ್ಕೇಟ್, ಖಾರಾ ಸೇವ್, ಬಜ್ಜಿ ಇರುವುದು ಸಾಮಾನ್ಯ. ಬಜ್ಜಿಯಲ್ಲಿ ಹತ್ತಾರು ವಿಧ ಇದೆ. ಹೀಗಾಗಿ ಟೀ ಕಾಫಿ ಜೊತೆಗೆ ಹಲವರು ಮೆಣಸಿನ ಕಾಯಿ ಬಜ್ಜಿ ಅಥವಾ ಆಲೂ ಬಜ್ಜಿ ಮಾಡಲು ಮತ್ತು ಸವಿಯಲು ಇಷ್ಟಪಡುತ್ತಾರೆ. ಆದ್ರೆ ಆಲೂ ಬಜ್ಜಿ ಟೀ ಜೊತೆಗಿದ್ದರೆ ಅದರ ರುಚಿಯೇ ಬೇರೆ.
ರಸ್ತೆ ಬದಿಗಳಲ್ಲಿ ನೀವು ಸಹ ನೋಡಿದರಬಹುದು ಆಲೂ ಬಜ್ಜಿಗೆ ಯಾವಾಗಲಿ ಡಿಮ್ಯಾಂಡ್ ಹೆಚ್ಚಾಗಿಯೇ ಇರುತ್ತೆ. ಇನ್ನು ಮಳೆಗಾಲ, ಚಳಿಗಾಲ ಇದ್ದರಂತು ಸಂಜೆ ವೇಳೆಯಲ್ಲಿ ಟೀ ಜೊತೆ ಬಿಸಿ ಬಿಸಿ ಬಜ್ಜಿ ಬಾಯಲ್ಲಿ ಮತ್ತಷ್ಟು ನೀರು ತರಿಸುತ್ತೆ. ದೊಡ್ಡಡವರಿಂದ ಹಿಡಿದು ಮಕ್ಕಳವರೆಗೆ ಆಲೂ ಗಡ್ಡೆಯ ಬಜ್ಜಿ ಸವಿಯಲು ಇಷ್ಟಪಡುತ್ತಾರೆ. ಅದ್ರಲ್ಲೂ ಮನೆಯಲ್ಲೇ ಮಾಡಿರುವ ಬಜ್ಜಿ ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಕೆಚಪ್ ಜೊತೆಯೂ ಸವಿಯಬಹುದು. ಕಡಿಮೆ ಸಮಯದಲ್ಲಿ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಸ್ನ್ಯಾಕ್ಸ್ ಇದಾಗಿದೆ. ಆದ್ರೆ ಆಲೂ ಬಜ್ಜಿ ಮಾಡಲು ಹೊರಟಾಗ ಏನಾದರು ಯಡವಟ್ಟು ಆಗಿರುತ್ತದೆ. ಕೆಲವೊಮ್ಮೆ ಹಿಟ್ಟು ರೆಡಿ ಸರಿಯಾಗದೆ ಇರುವುದು, ಎಣ್ಣೆಗೆ ಹಾಕಿದಾಗ ಹಿಟ್ಟು ಬಿಟ್ಟುಕೊಳ್ಳುವುದು ಹೀಗೆ ಏನಾದರು ಒಂದು ಸಮಸ್ಯೆ ಕಾಡುತ್ತೆ.
ಆದ್ರೆ ನಾವಿಂದು ಸರಳ ವಿಧಾನದ ಮೂಲಕ ಆಲೂಗಡ್ಡೆ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಈ ಆಲೂಗಡ್ಡೆ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?, ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಆಲೂಗಡ್ಡೆ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು
- ಆಲೂ ಗಡ್ಡೆ - 4
- ಅಕ್ಕಿ ಹಿಟ್ಟು - ಅರ್ಧ ಕಪ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ
- ಅರಶಿಣ
- ಖಾರದ ಪುಡಿ
- ಜೀರಿಗೆ ಪುಡಿ
- ಉಪ್ಪು
- ಅಡುಗೆ ಸೋಡಾ
- ಎಣ್ಣೆ
ಆಲೂಗಡ್ಡೆ ಬಜ್ಜಿ ಮಾಡುವ ವಿಧಾನ ಏನು?
ಮೊದಲು ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ತೆಳುವಾಗಿ ಸ್ಲೈಸ್ ಮಾಡಿ ನೀರಿನಲ್ಲಿ ಹಾಕಿಡಬೇಕು. ನಿಮಗೆ ಎಷ್ಟು ಬೇಕೋ ಅಷ್ಟು ಆಲೂಗಡ್ಡೆ ತೆಗೆದುಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ತೆಳುವಾಗಿ ಸ್ಲೈಸ್ ಮಾಡಿಕೊಂಡು ನೀರಿನಲ್ಲಿ ಹಾಕಿಡಿ. ಈಗ ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಹಾಕಿಕೊಂಡು ಇದಕ್ಕೆ ಅಕ್ಕಿ ಹಿಟ್ಟು, ಅರಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಜೀರಿಗೆ ಪುಡಿ, ಸೋಡಾ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳುತ್ತಾ ಹಿಟ್ಟು ರೆಡಿ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಲಿ, ತೆಳುವಾದರೆ ಚೆನ್ನಾಗಿ ಆಲೂಗಡ್ಡೆಗೆ ಹಿಡಿಯುವುದಿಲ್ಲ. ಕೈಗೆ ಅಂಟಿಕೊಳ್ಳುವಷ್ಟು ದಪ್ಪವಿರಲಿ. ಈಗ ಆಲೂಗಡ್ಡೆಯನ್ನು ನೀರಿನಿಂದ ತೆಗೆದು ಹೊರಗಿಟ್ಟುಕೊಳ್ಳಿ. ಬಳಿಕ ಈ ಆಲೂಗಡ್ಡೆಯನ್ನು ಹಿಟ್ಟಿನೊಳಗೆ ಹಾಕಿ ಎಲ್ಲಾ ಆಲೂಗಡ್ಡೆಗೂ ಹಿಟ್ಟು ಹಿಡಿಯುವಂತೆ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಉರಿ ಸಣ್ಣದಾಗಿ ಇಟ್ಟುಕೊಂಡು ಒಂದೊಂದಾಗಿ ಆಲೂ ಬಜ್ಜಿಯನ್ನ ಎಣ್ಣೆಗೆ ಬಿಟ್ಟುಕೊಳ್ಳಿ. ಸುಮಾರು 5 ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಿದರೆ ಆಲೂ ಗಡ್ಡೆ ಬಜ್ಜಿ ಸವಿಯಲು ಸಿದ್ದವಾಗಿತ್ತದೆ. ಇಷ್ಟಾದರೆ ನಿಮ್ಮ ಮುಂದೆ ಆಲೂ ಗಡ್ಡೆ ಬಜ್ಜಿ ರೆಡಿಯಾಗಿರುತ್ತದೆ. ಇದನ್ನು ಚಟ್ನಿ ಜೊತೆ ಅಥವಾ ಟೀ ಜೊತೆಯಲ್ಲಿ ಸವಿಯಬಹುದು.



Click it and Unblock the Notifications
