Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
2 ಆಲೂಗಡ್ಡೆಯಲ್ಲಿ ಮಾಡಿ ಸಖತ್ ರುಚಿಯ ಮಸಾಲೆ ರೋಸ್ಟ್..! ಮಾಡೋದು ಹೇಗೆ ಗೊತ್ತಾ?
ಮನೆಯಲ್ಲಿ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಮಾಡಿ ಸವಿಯುವುದು ಸಾಮಾನ್ಯ. ಎಲ್ಲರು ಟೀ ಕಾಫಿಯ ಸಮಯದಲ್ಲಿ ಬಿಸ್ಕೇಟ್, ಬೋಂಡಾ, ಬಜ್ಜಿ ಹೀಗೆ ಒಂದಲ್ಲಾ ಒಂದು ಕರಿದ ತಿಂಡಿಯನ್ನು ಸವಿಯೋಕೆ ನಿಮಗೂ ಇಷ್ಟವಾಗಬಹುದು. ಹೀಗಾಗಿ ಸಂಜೆ ಸಮಯದಲ್ಲಿ ಸವಿಯಲೆಂದೇ ಅಂಗಡಿಯಿಂದ ಬೇಕರಿಯಿಂದ ನೀವು ಮೊದಲೇ ಕೆಲವು ತಿಂಡಿಯನ್ನು ತಂದು ಇಟ್ಟಿರುತ್ತೀರಿ.
ಇನ್ನು ರಸ್ತೆ ಬದಿಯಲ್ಲಿ ಸಿಗುವಂತಹ ಪಾನಿಪೂರಿ ಹಾಗೂ ಗೋಬಿ ಸೇರಿ ಕರಿದ ತಿಂಡಿಯ ಅಂಗಡಿಗಳು ಜನರಿಂದ ತುಂಬಿರುರುತ್ತವೆ. ಹಾಗೆ ಮನೆಯಲ್ಲೂ ಕೂಡ ನಾವು ಹಲವು ರೀತಿ ಸ್ನ್ಯಾಕ್ಸ್ ಮಾಡಿ ಸವಿಯುತ್ತೇವೆ, ಹೀಗಾಗಿ ನಾವಿಂದು ಸಂಜೆ ಸಮಯದಲ್ಲಿ ಸವಿಯಲೆಂದು ಆಲೂಗಡ್ಡೆ ರೋಸ್ಟ್ ಮಾಡುವ ಕುರಿತು ತಿಳಿದುಕೊಳ್ಳೋಣ. ಆಲಗಡ್ಡೆಯ ಈ ಮಸಾಲೆ ರೋಸ್ಟ್ ಬಾಯಿಗೆ ಮತ್ತಷ್ಟು ರುಚಿ ನೀಡಲಿದೆ.

ಸಂಜೆ ಟೀ ಕಾಫಿಯ ಸಮಯದಲ್ಲಿ ಆಲೂಗಡ್ಡೆಯ ಮಸಾಲ ರೋಸ್ಟ್ ನಿಮ್ಮ ಬಾಯಿ ರುಚಿ ಹೆಚ್ಚಿಸೋದು ಪಕ್ಕ ಹಾಗೆ ನೀವು ಊಟದ ಜೊತೆಗೂ ಕೂಡ ಇದನ್ನು ಸವಿಯಬಹುದು. ಕಡಿಮೆ ಮಸಾಲೆಗಳ ಬಳಸಿಕೊಂಡು ಸುಲಭವಾಗಿ 5 ನಿಮಿಷದಲ್ಲಿ ಇದನ್ನು ಮಾಡಬಹುದು. ಹಾಗಾದ್ರೆ ಈ ಆಲೂಗಡ್ಡೆಯ ರೋಸ್ಟ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂಗಡ್ಡೆ ಮಸಾಲೆ ರೋಸ್ಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಆಲೂಗಡ್ಡೆ-2
- ಕರಿಬೇವು
- ಕರಿಮೆಣಸು ಪುಡಿ
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ಚಿಲ್ಲಿ ಫ್ಲೇಕ್ಸ್
- ಸಾಸಿವೆ
- ಜೀರಿಗೆ
- ಟೊಮೆಟೊ ಸಾಸ್
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಆಲೂಗಡ್ಡೆ ಮಸಾಲೆ ರೋಸ್ಟ್ ಮಾಡುವ ವಿಧಾನವೇನು?
ಮೊದಲು ಎರಡು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ನಂತರ ತೆಳುವಾಗಿ ಕತ್ತರಿಸಿಕೊಳ್ಳಬೇಕು. ಇದನ್ನು ನೀರಿನಲ್ಲಿ ಹಾಕಿಟ್ಟುಕೊಂಡು ನಂತರ ಕತ್ತರಿಸಿಕೊಳ್ಳಿ. ಬಜ್ಜಿ ಮಾಡಲು ಇರುವಷ್ಟು ದಪ್ಪವಾಗಿರಲಿದೆ. ತೀರ ತೆಳುವಾಗಿ ಕತ್ತರಿಸಿಕೊಳ್ಳಬೇಡಿ. ಹೀಗೆ ಆಲೂಗಡ್ಡೆ ಕತ್ತರಿಸಿಕೊಂಡು ನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಕಾಯಲು ಬಿಡಿ.
ಎಣ್ಣೆ ಕಾದ ಬಳಿಕ ಅದಕ್ಕೆ ಹೆಚ್ಚಿಕೊಂಡಿರುವ ಆಲೂಗಡ್ಡೆಯನ್ನು ಹಾಕಿಕೊಂಡು ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಆಲೂಗಡ್ಡೆ ಎರಡೂ ಕಡೆಗಳಲ್ಲೂ ಚೆನ್ನಾಗಿ ಕರಿದುಕೊಳ್ಳಬೇಕು. ಅನಂತರ ಕರಿದ ಎಲ್ಲಾ ಆಲೂಗಡ್ಡೆಯನ್ನು ಎಣ್ಣೆಯಿಂದ ತೆಗೆದು ಜರಡಿಯಲ್ಲಿ ಹಿಡಿದು ಎಣ್ಣೆ ಇಳಿದ ಬಳಿಕ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಇಟ್ಟು ಅದಕ್ಕೆ ಒಂದೆರಡು ಸ್ಫೂನ್ ಎಣ್ಣೆ ಹಾಕಿಕೊಂಡು ಇದಕ್ಕೆ ಸಾಸಿವೆ, ಜೀರಿಗೆ, ಕರಿಬೇವು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಖಾದ ಪುಡಿ, ಚಿಲ್ಲಿ ಫ್ಲೇಕ್ಸ್ ಹಾಕಿಕೊಂಡು ಬಳಿಕ ಇದಕ್ಕೆ ರೋಸ್ಟ್ ಮಾಡಿ ಇಟ್ಟಿರುವ ಆಲೂಗಡ್ಡೆಗಳನ್ನು ಕೂಡ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿ. 1 ನಿಮಿಷದ ಬಳಿಕ ಕರಿಮೆಣಸಿನ ಪುಡಿಯನ್ನು ಕೂಡ ಹಾಕಿಕೊಳ್ಳಬಹುದು. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಆಲೂಗಡ್ಡೆ ಮಸಾಲೆ ರೋಸ್ಟ್ ಸವಿಯಲು ಸಿದ್ದವಾಗುತ್ತೆ. ನೀವು ಕೂಡ ಈ ರೋಸ್ಟ್ ಮನೆಯಲ್ಲೇ ಮಾಡಿ ನೋಡಿ.



Click it and Unblock the Notifications
