Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
2 ಆಲೂಗಡ್ಡೆ ಇದ್ರೆ ಗರಿಗರಿಯ ಕಟ್ಲೇಟ್ ಮಾಡಿ ನೋಡಿ..! ಬಾಯಲ್ಲಿ ನೀರು ಬರೋದು ಪಕ್ಕಾ..!
ನೀವು ಮನೆಯಲ್ಲಿ ಫ್ರೀ ಆಗಿರುವ ಸಮಯದಲ್ಲಿ ಅಥವಾ ಹಬ್ಬದ ಸಮಯದಲ್ಲಿ ಮನೆ ಮಂದಿಯಲ್ಲ ಕುಳಿತು ಸವಿಯುವಂತಹ ತಿಂಡಿ ಮಾಡಲು ಮುಂದಾಗಿರುತ್ತೀರಿ. ಅದರಲ್ಲೂ ಯಾವುದಾದರು ಶುಭ ಕಾರ್ಯಗಳು ನಡೆಯುವಾಗ ಅಥವಾ ಅತಿಥಿಗಳು, ಸಂಬಂಧಿಗಳು ಆಗಮಿಸುವ ಮುನ್ಸೂಚನೆ ಇದ್ದರೆ ನೀವು ಯಾವುದಾದರು ತಿಂಡಿ ಮಾಡಲು ಮುಂದಾಗುವುದು ಸಾಮಾನ್ಯ.
ಹಾಗೆ ಈ ದಿನ ನಾವು ಗರಿ ಗರಿಯಾದ ನಾಲಿಗೆ ರುಚಿ ಹೆಚ್ಚಿಸುವಂತಹ ಸುಲಭದ ತಿಂಡಿಯನ್ನು ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ನಾವು ಆಲೂಗಡ್ಡೆಯಿಂದ ಸುಲಭವಾಗಿ ಮಾಡುವಂತಹ ಟಿಕ್ಕಿ ಅಥವಾ ಕಟ್ಲೆಟ್ ಮಾಡುವುದನ್ನು ತಿಳಿದುಕೊಳ್ಳೋಣ. ಆಲೂಗಡ್ಡೆಯ ಈ ಕಟ್ಲೆಟ್ ಮಾಡೋದು ಬಹಳ ಸುಲಭ. ಹಾಗೆ ಎಲ್ಲರಿಗೂ ಇಷ್ಟವಾಗುತ್ತೆ.

ಆಲೂಗಟ್ಟೆಯ ಈ ಟಿಕ್ಕಿ ಗರಿಯಾಗಿ ಸವಿಯಲು ಬಹಳ ರುಚಿ ಇರುತ್ತೆ. ಟೀ ಕಾಫಿಯ ಸಮಯದಲ್ಲಿ ಕೈಯಲ್ಲಿ ಒಂದು ಕಟ್ಲೆಟ್ ಇದ್ದರೆ ರುಚಿ ಡಬಲ್ ಆಗುತ್ತೆ. ಹಾಗಾದ್ರೆ ಈ ಆಲೂಗಟ್ಟೆಯ ಕಟ್ಲೇಟ್ ಮಾಡೋದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಆಲೂಗಡ್ಡೆಯ ಈ ಕಟ್ಲೆಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಆಲೂಗಡ್ಡೆಯ ಈ ಕಟ್ಲೆಟ್ ಮಾಡುವುದು ಹೇಗೆ? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಆಲೂಗಡ್ಡೆಯ ಈ ಕಟ್ಲೆಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಆಲೂಗಡ್ಡೆ-3
- ಕೊತಂಬರಿ ಸೊಪ್ಪು
- ಈರುಳ್ಳಿ
- ಚಾಟ್ ಮಸಾಲೆ
- ಜೀರಿಗೆ ಪುಡಿ
- ಹಸಿ ಮೆಣಸು
- ಬ್ರೆಡ್
- ಅಕ್ಕಿ ಹಿಟ್ಟಿ
- ಗರಂ ಮಸಾಲೆ
- ಅರಶಿಣ
- ಖಾರದ ಪುಡಿ
- ಉಪ್ಪು
- ಎಣ್ಣೆ
ಆಲೂಗಡ್ಡೆಯ ಈ ಕಟ್ಲೆಟ್ ಮಾಡುವುದು ಹೇಗೆ?
ಮೊದಲು ಕುಕ್ಕರ್ನಲ್ಲಿ ಆಲೂಗಡ್ಡೆ ಹಾಕಿ 2ರಿಂದ 3 ಸೀಟಿ ಹೊಡೆಸಿಕೊಂಡು ನಂತರ ತಣ್ಣಗಾದ ಬಳಿಕ ಸಿಪ್ಪೆ ತೆಗೆದು ಅದನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಒಂದು ಸುತ್ತು ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ ಖಾರದ ಪುಡಿ, ಗರಂ ಮಸಾಲೆ, ಅರಶಿಣ, ಚಾಟ್ ಮಸಾಲೆ ಕೂಡ ಹಾಕಿ ಮಿಕ್ಸ್ ಮಾಡಿ.
ಮಿಕ್ಸ್ ಮಾಡಿದ ಬಳಿಕ 2 ಸ್ಪೂನ್ ಅಕ್ಕಿ ಹಿಟ್ಟು ಎರಡು ಸ್ಪೂನ್ ಬ್ರೆಡ್ ಪುಡಿ ಹಾಕಿ. ಬ್ರೆಡ್ ಪುಡಿ ಬೇಕಾದರೆ ಎರಡು ಬ್ರೆಡ್ ಅನ್ನು ಒಲೆ ಮೇಲೆ ಕಾವಲಿ ಇಟ್ಟು ಅದನ್ನು ಎರಡು ಕಡೆ ರೋಸ್ಟ್ ಮಾಡಿ ಒಂದು ಮಿಕ್ಸಿ ಜಾರ್ನಲ್ಲಿ ಪುಡಿ ಮಾಡಕೊಂಡರೆ ಆಯಿತು. ಇದನ್ನು ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಗಟ್ಟಿಯಾದ ಉಂಡೆಯಾಗಬೇಕು.
ಈಗ ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಉಂಡೆ ಕಟ್ಟಿಕೊಳ್ಳಿ. ಈ ಹಿಟ್ಟು ಮಾಡುವಾಗ ಎಲ್ಲಿಯೂ ನೀರು ಬಳಸಬೇಡಿ. ಕೈಯಲ್ಲಿ ಇದನ್ನು ವಡೆಯಂತೆ ತಟ್ಟಿಕೊಳ್ಳಿ. ದಪ್ಪವಾಗಿ ತಟ್ಟಿಕೊಂಡು ಎಲ್ಲವನ್ನು ಪ್ಲೇಟ್ನಲ್ಲಿ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ತವ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಕಟ್ಲೇಟ್ ಹಾಕಿ ಎಣ್ಣೆಯಲ್ಲಿ ಕಟ್ಲೇಟ್ ಅರ್ಧ ಮುಚ್ಚಿರಬೇಕು. ಹಾಗೆ ಒಂದು ಕಡೆ ಕರಿದುಕೊಂಡು ಮತ್ತೊಂದು ಕಡೆ ತಿರುಗಿಸಿಕೊಳ್ಳಿ. ತೀರಾ ಕಪ್ಪಗಾಗುವಂತೆ ಕರಿಯುವುದು ಬೇಡ. ನಂತರ ಎಣ್ಣೆಯಿಂದ ತೆಗೆದು ಜರಡಿಯಲ್ಲಿ ಹಾಕಿ.
ಇಷ್ಟಾದರೆ ಗರಿ ಗರಿ ಎನ್ನುವ ಆಲೂ ಕಟ್ಲೇಟ್ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
