Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮೂರು ಆಲೂಗಡ್ಡೆ ಇದ್ದರೆ ಚಿಪ್ಸ್ ಮಾಡಬಹುದು..! ತುಂಬಾನೆ ಸುಲಭದ ತಿಂಡಿ
ಅಂಗಡಿಯಲ್ಲಿ ಸಿಗುವ ತಿಂಡಿಗಳನ್ನ ಮನೆಯಲ್ಲೇ ಮಾಡಿ ಸವಿಯೋಕೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಎಲ್ಲರು ಒಮ್ಮೆ ಒಂದಲ್ಲಾ ಒಂದಿ ಸಿಹಿ ತಿಂಡಿಯನ್ನು ಮಾಡಿ ಸವಿಯುತ್ತಾರೆ. ಅದರಲ್ಲೂ ಚಿಪ್ಸ್‌ನಂತಹ ತಿಂಡಿಗಳು ಸಂಜೆಯ ವೇಳೆ ಟೀ-ಕಾಫಿಯ ಜೊತೆಗಿದ್ದರೆ ಅದರ ರುಚಿಯೆ ಬೇರೆ.
ಚಿಪ್ಸ್ ಅಂದ ಕೂಡಲೆ ನಮಗೆ ಬಾಳೆಹಣ್ಣಿನ, ಆಲೂಗಡ್ಡೆಯ ಬೇಕರಿ ಚಿಪ್ಸ್‌ಗಳು ನೆನಪಿಗೆ ಬರುತ್ತದೆ. ಈಗ ಹಾಟ್ ಚಿಪ್ಸ್ ಹೆಸರಲ್ಲಿ ಅಲ್ಲಿಯೇ ತಯಾರು ಮಾಡಿ ಕೊಡುತ್ತಾರೆ. ಇವುಗಳ ರುಚಿ ಏನೋ ಚೆನ್ನಾಗಿಯೇ ಇರುತ್ತದೆ. ಆದ್ರೆ ಅದನ್ನು ಯಾವ ರೀತಿ ಮಾಡುತ್ತಾರೆ ಅನ್ನೋದೆ ದೊಡ್ಡ ಪ್ರಶ್ನೆ, ಹೀಗಾಗಿ ರಸ್ತೆ ಬದಿ ಕರಿದ ತಿಂಡಿಗಳಿಂದ ದೂರವಿರಲು ಮನಸ್ಸು ಯಾವಾಗಲು ಹೇಳುತ್ತಿರುತ್ತೆ.

ಆದ್ರೆ ಈ ತಿಂಡಿಗಳನ್ನು ಮನೆಯಲ್ಲೇ ಮಾಡಿ ಸವಿಯಲು ಎಲ್ಲರಿಗೂ ಇಷ್ಟವಿರುತ್ತದೆ. ಆದರೆ ಮಾಡುವುದು ಹೇಗೆ ಎಂಬುದೇ ಹಲವರ ಪ್ರಶ್ನೆಯಾಗಿರುತ್ತೆ. ನಾವಿಂದು ಮೂರು ಆಲೂಗಡ್ಡೆ ಬಳಸಿ ಕಡ್ಡಿ ಆಕೃತಿಯ ಚಿಪ್ಸ್ ಮಾಡುವುದನ್ನು ನೋಡೋಣ. ಈ ಚಿಪ್ಸ್ ಅಂಗಡಿಗಳಲ್ಲಿ ಸಿಗುತ್ತದೆ. ಬಾಯಿಗೆ ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಸ್ವಲ್ಪ ಖಾರವಿದ್ದರೂ ಮಕ್ಕಳಿಗೂ ಇದು ಇಷ್ಟವಾಗುತ್ತದೆ.
ಹಾಗಾದ್ರೆ ಈ ಆಲೂಗಡ್ಡೆಯ ಚಿಪ್ಸ್ ಮಾಡುವುದು ಹೇಗೆ? ಇದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಪಾಕವಿಧಾನ ಸೇರಿದಂತೆ ಈ ಕುರಿತ ಎಲ್ಲಾ ಮಾಹಿತಿಯನ್ನ ನೋಡಿ.
ಆಲೂಗಡ್ಡೆ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ - 3
- ಕಾರ್ನ್ ಫ್ಲೋರ್
- ಅರಶಿಣ
- ಇಂಗು
- ಖಾರದ ಪುಡಿ
- ಉಪ್ಪು
- ಎಣ್ಣೆ
- ಕರಿಬೇವು
ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆ
ಮೊದಲು ಆಲುಗಡ್ಡೆಯ ಸಿಪ್ಪೆ ತೆಗದುಕೊಂಡು ನೀರಿನಲ್ಲಿ ಹಾಕಿಡಿ. ಬಳಿಕ ಸಣ್ಣ ಸಣ್ಣ ಕಡ್ಡಿಗಳಾಗಿ ತುರಿದುಕೊಳ್ಳಿ. ತುರಿದುಕೊಳ್ಳಲು ಕಟರ್ ಇಲ್ಲದಿದ್ದರೆ ಚಾಕುವಿನಿಂದ ಸಣ್ಣದಾಗಿ ಕತ್ತರಿಸಿಕೊಳ್ಳಿ. ಈರುಳ್ಳಿಯಂತೆ ತೆಳುವಾಗ ಸಣ್ಣದಾಗಿ ಉದ್ದುದ್ದ ಕತ್ತರಿಸಿಕೊಳ್ಳಿ.
ಕತ್ತರಿಸಿಕೊಂಡ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಯಲು ಬಿಡಿ. ಬಳಿಕ ಚೆನ್ನಾಗಿ ಈ ಆಲೂಗಡ್ಡೆಯನ್ನು ತೊಳೆದುಕೊಳ್ಳಿ, ಮೂರು ಬಾರಿ ಹೊಸ ನೀರು ಹಾಕಿ ತೊಳೆದುಕೊಳ್ಳಿ. ನಂತರ ಅದನ್ನು ಬಟ್ಟೆ ಮೇಲೆ ಹರಡಿಕೊಂಡು ಚೆನ್ನಾಗಿ ಒಣಗಲು ಬಿಡಿ. ಆಲೂಗಡ್ಡೆಯಲ್ಲಿರುವ ನೀರಿನ ಅಂಶ ಹೋಗುವಷ್ಟು ಒಣಗಿಸಬೇಕು.
ಬಳಿಕ ಈ ಆಲೂಗಡ್ಡೆ ತೆಗೆದುಕೊಂಡು ಅದಕ್ಕೆ ಉಪ್ಪು, ಇಂಗು, ಅರಶಿಣ, ಖಾರದ ಪುಡಿ ಹಾಕಿಕೊಂಡಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆ ಎಷ್ಟು ಒಣಗಿರುತ್ತದೆಯೋ ಅಷ್ಟು ಕ್ರಿಸ್ಪಿಯಾಗಿ ಚಿಪ್ಸ್ ಬರುತ್ತದೆ.
ಇಷ್ಟಾದ ಬಳಿಕ ನೀವು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಕತ್ತರಿಸಿಕೊಂಡ ಆಲೂಗಡ್ಡೆಯನ್ನು ಹಾಕಿಕೊಳ್ಳಿ. ಆಲೂಗಡ್ಡೆ ಬ್ರೌನ್ ಕಲರ್‌ಗೆ ಬರುವವರೆಗೂ ಚೆನ್ನಾಗಿ ಕಾಯಿಸಿಕೊಳ್ಳಿ. ಇದಕ್ಕೆ ಕೊನೆಯದಾಗಿ ಕರಿಬೇವು ಹಾಕಿಕೊಂಡಿ ಎಣ್ಣೆಯಿಂದ ಎತ್ತಿಟ್ಟುಕೊಳ್ಳಿ. ಎಣ್ಣೆ ಇಳಿಯುವವರೆಗೂ ಹೊರಗಡೆ ಇಟ್ಟು ಬಳಿಕ ಸವಿಯಲು ನೀಡಬಹುದು.
ಈ ಚಿಪ್ಸ್ ಅನ್ನು ಸ್ಟೀಲ್ ಡಬ್ಬದಲ್ಲಿ ಹಾಕಿ ಇಟ್ಟರೆ ತಿಂಗಳುಗಳ ಕಾಲ ಇಟ್ಟು ಸವಿಯಬಹುದು.



Click it and Unblock the Notifications
