Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬ್ರೇಕ್ಫಾಸ್ಟ್ಗೆ ಅವಲಕ್ಕಿ ವಡೆ..! ಈ ರುಚಿ ನೀವು ಸವಿದಿರೋದಿಲ್ಲ..!
ವಡೆ ಹೆಸರು ಕೇಳಿದ್ರೆ ಸಾಕು ಹಲವರ ಬಾಯಲ್ಲಿ ನೀರು ಬರುವುದು ಕಾಮನ್. ರುಚಿ ರುಚಿಯ ವಡೆ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಬ್ರೇಕ್ಫಾಸ್ಟ್ನಿಂದ ಹಿಡಿದು, ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್ಸ್ ಹಾಗೆ ರಾತ್ರಿ ಊಟದ ಜೊತೆಗೂ ವಡೆ ಸವಿಯುವವರನ್ನು ನೋಡಿದ್ದೇವೆ. ಹಾಗೆ ಹೋಟೆಲ್ನ ಉದ್ದಿನ ವಡೆ ಎಲ್ಲರ ಮೆಚ್ಚಿನ ತಿಂಡಿ ಆಗಿರುತ್ತೆ. ಅದರಲ್ಲೂ ಹಲವರು ತೂತು ವಡೆ ಅಂದ್ರೆ ಸವಿಯಲು ಮುಂದಾಗುತ್ತಾರೆ. ಇದು ಬಹಳ ರುಚಿ ನೀಡುವ ಖಾದ್ಯ.
ಹಾಗೆ ಮನೆಯಲ್ಲೂ ಹಲವರು ಈ ವಡೆ ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ಉದ್ದಿನ ವಡೆ ಬೆಳಗ್ಗೆ ತಿಂಡಿಯ ಜೊತೆಗೆ ಅದರಲ್ಲೂ ಇಡ್ಲಿಯ ಜೊತೆಗೆ ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುತ್ತೆ. ಹಾಗೆ ಈ ಉದ್ದಿನ ವಡೆಯನ್ನು ಮನೆಯಲ್ಲೂ ಸಹ ಮಾಡೋದು ಸಹಜ. ಆದ್ರೆ ಎಂದಾದ್ರು ನೀವು ಅವಲಕ್ಕಿಯಲ್ಲಿ ಗರಿ ಗರಿಯಾದ ವಡೆ ಮಾಡಿ ಸವಿದಿದ್ದೀರಾ?

ಅವಲಕ್ಕಿಯನ್ನು ನೆನೆಸಿ ಹಿಟ್ಟು ರೆಡಿ ಮಾಡಿಕೊಂಡು ಮಾಡುವಂತಹ ಅದ್ಭುತ ರುಚಿಯ ವಡೆಯು ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ. ಈ ವಡೆಯಂತು ಬ್ರೇಕ್ಫಾಸ್ಟ್ ಜೊತೆಗೆ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಉದ್ದಿನ ವಡೆ ಮಾಡುವುದಕ್ಕಿಂತಲೂ ಈ ವಡೆ ಮಾಡುವುದು ಬಹಳ ಸುಲಭ. ಹಾಗಾದ್ರೆ ನಾವಿಂದು ಈ ಅವಲಕ್ಕಿ ವಡೆಯನ್ನು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವಲಕ್ಕಿ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅವಲಕ್ಕಿ - 2 ಕಪ್
- ಈರುಳ್ಳಿ - 1
- ಅಕ್ಕಿ ಹಿಟ್ಟು - 3 ಚಮಚ
- ಮೊಸರು - 3/4 ಕಪ್
- ಅಡುಗೆ ಸೋಡಾ - 3 ಚಿಟಿಕೆ
- ಇಂಗು - 1/4 ಚಮಚ
- ಜೀರಿಗೆ - 1 ಚಮಚ
- ಶುಂಠಿ - 1 ಚಮಚ
- ಹಸಿರು ಮೆಣಸಿನಕಾಯಿ - 2
- ಕಾಳು ಮೆಣಸಿನ ಪುಡಿ - 1/2 ಚಮಚ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಅವಲಕ್ಕಿ ವಡೆ ಮಾಡುವ ವಿಧಾನ
ಎರಡು ಕಪ್ನಲ್ಲಿ ತೆಳು ಅವಲಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆದು ನೀರಿನಿಂದ ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಈ ಅವಲಕ್ಕಿಯನ್ನು ಕೈಯಿಂದಲೇ ಪುಡಿ ಪುಡಿ ಮಾಡಿಕೊಳ್ಳಿ. ಗಟ್ಟಿಯಾಗಿಯೇ ಪುಡಿ ಮಾಡಿ. ಅದು ಅಕ್ಕಿ ಹಿಟ್ಟಿನಂತೆ ಮೃದುವಾಗಿ ಬರುವವರೆಗೂ ಹದ ಮಾಡಿಕೊಳ್ಳಿ. ನಂತರ ಈ ಬೌಲ್ಗೆ ಈರುಳ್ಳಿ, ಅಡುಗೆ ಸೋಡಾ, ಇಂದು, ಜೀರಿಗೆ, ಕಾಳು ಮೆಣಸಿನ ಪುಡಿ, ಕರಿಬೇವು, ಹಸಿ ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಗಟ್ಟಿಯಾದ ಹಿಟ್ಟು ರೆಡಿಯಾಗುವಂತೆ ಮಿಕ್ಸ್ ಮಾಡಿ, ಮಿಕ್ಸ್ ಮಾಡುವಾಗ ಇದಕ್ಕೆ ಮೂರು ಸ್ಪೂನ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಮೊಸರು ಕೂಡ ಇದಕ್ಕೆ ಹಾಕಿಕೊಂಡು ಸ್ವಲ್ಪವೇ ನೀರು ಹಾಕಿ ಹಿಟ್ಟು ಹದ ಮಾಡಿಕೊಳ್ಳಿ. ಈ ಹಿಟ್ಟು ಉಂಡೆ ಕಟ್ಟಲು ಬರುವಂತೆ ಹದಕ್ಕೆ ಬರಬೇಕಾಗುತ್ತದೆ. ನಂತರ ಕೈಗೆ ಎಣ್ಣೆ ಹಚ್ಚಿಕೊಂಡು ಈ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿ ನಂತರ ತಟ್ಟಿಕೊಳ್ಳಿ ಹಾಗೆ ಮಧ್ಯದಲ್ಲಿ ತೂತು ಮಾಡಿಕೊಳ್ಳಿ. ಮಧ್ಯದಲ್ಲಿ ತೂತು ಮಾಡದಿದ್ದರೆ ಮಧ್ಯದಲ್ಲಿ ಬೇಯುವುದಿಲ್ಲ.
ಹೀಗೆ ಎಲ್ಲಾ ಹಿಟ್ಟನ್ನು ವಡೆ ಮಾಡಿ ಇಟ್ಟುಕೊಂಡು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಮೂರರಿಂದ ನಾಲ್ಕು ವಡೆಯನ್ನು ಒಂದೇ ಬಾರಿಗೆ ಹಾಕಿ ಕರಿದುಕೊಳ್ಳಬಹುದು. ಎರಡು ಕಡೆಗೂ ಬ್ರೌನ್ ಕಲರ್ಗೆ ಬರುವವರೆಗೂ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಅವಲಕ್ಕಿ ವಡೆ ಸಿದ್ದವಾಗುತ್ತದೆ, ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಮಾಡೋದು ತುಂಬಾನೆ ಸುಲಭ.



Click it and Unblock the Notifications
