Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಪಿತೃಪಕ್ಷಕ್ಕೆ 5 ಬಗೆ ಸೊಪ್ಪಿನ ಸಪ್ಪೆ ಪಲ್ಯ ಮಾಡಿ..! ಇಲ್ಲಿದೆ ರೆಸಿಪಿ
ಪಿತೃ ಪಕ್ಷ ಆರಂಭಗೊಂಡು ಹಲವರು ಪೂರ್ವಜನರಿಗೆ ಅನ್ನ ಆಹಾರ ನೀಡುವುದು ಪಿಂಡ ಪ್ರದಾನ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಮಾನ್ಯವಾಗಿ ಪಿತೃ ಪಕ್ಷದ ಕೊನೆಯ ದಿನ ಅಂದರೆ ಮಹಾಲಯ ಅಮಾವಾಸ್ಯೆಯಂದು ಬಹುತೇಕರ ಮನೆಯಲ್ಲಿ ಪೂರ್ವಜರಿಗೆ ಆಹಾರ ನೀಡುವುದು, ಹಾಗೆ ತಮ್ಮ ಸಂಪ್ರದಾಯವನ್ನು ನೆರವೇರಿಸುವುದು ನೋಡಬಹುದು.
ಇನ್ನು ಈ ಹಬ್ಬದಂದು ಪೂರ್ವಜರಿಗೆ ಇಷ್ಟವಾಗುವಂತಹ ಖಾದ್ಯಗಳ ಮಾಡಿ ಊಟ ಬಡಿಸುವುದು ವಾಡಿಕೆ. ಅವರ ಆತ್ಮಕ್ಕೆ ಸನ್ಮಾರ್ಗ ಸಿಗಲಿ ಎಂಬ ಕಾರಣಕ್ಕೆ ಅವರ ಇಷ್ಟದ ಖಾದ್ಯ ಮಾಡುವುದು ನೋಡಬಹುದು. ಹಾಗಾದ್ರೆ ಈ ದಿನ ವಿಶೇಷವಾಗಿ ಯಾವೆಲ್ಲಾ ಖಾದ್ಯ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಿರಲಿದೆ.

ಹಾಗೆ ಪೂರ್ವಜರ ಇಷ್ಟದ ಖಾದ್ಯದ ಜೊತೆಗೆ ಒಂದಿಷ್ಟು ಖಾದ್ಯಗಳ ಮಾಡಿಯೇ ಮಾಡುತ್ತಾರೆ. ಆದ್ರೆ ನಾವಿಂದು 5 ಸೊಪ್ಪುಗಳ ಬಳಸಿಕೊಂಡು ಮಾಡುವಂತಹ ಸಪ್ಪೆ ಪಲ್ಯವನ್ನು ಮಾಡುವುದು ನೋಡೋಣ. ಈ ಪಲ್ಯವನ್ನು ಬಹುತೇಕ ಮಂದಿ ಮಾಡುತ್ತಾರೆ. ಇದನ್ನು ರುಚಿಯ ಬದಲಾಗಿ ಸಂಪ್ರದಾಯವಾಗಿ ಮಾಡಲಾಗುತ್ತದೆ.
ಹಾಗಾದ್ರೆ ಪಿತೃಪಕ್ಷದ ಸಲುವಾಗಿ ಮಾಡುವಂತಹ 5 ಸೊಪ್ಪುಗಳ ಪಲ್ಯವನ್ನು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಯಾವ 5 ಸೊಪ್ಪು ಬಳಸಬೇಕು ಎಂಬುದನ್ನು ನಾವಿಲ್ಲಿ ತಿಳಿಯೋಣ.
5 ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸಬ್ಬಸಿಗೆ ಸೊಪ್ಪು
- ಬೆಳ್ಳುಳ್ಳಿ
- ಹಸಿ ಮೆಣಸು
- ಮೆಂತ್ಯ ಸೊಪ್ಪು
- ಪಾಲಕ್ ಸೊಪ್ಪು
- ಕೆಂಪು ಹರುವೆ ಸೊಪ್ಪು
- ನುಗ್ಗೆ ಸೊಪ್ಪು
- ಉಪ್ಪು
- ಎಣ್ಣೆ
5 ಸೊಪ್ಪಿನ ಪಲ್ಯ ಮಾಡುವುದು ಹೇಗೆ?
ಮೊದಲು ಈ 5 ಸೊಪ್ಪುಗಳ ಸಪ್ಪೆ ಪಲ್ಯ ಮಾಡಲು ಸಬ್ಬಸಿಗೆ ಸೊಪ್ಪು, ಮೆಂತ್ಯ ಸೊಪ್ಪು, ಪಾಲಕ್ ಸೊಪ್ಪು, ಕೆಂಪು ಹರುವೆ ಸೊಪ್ಪು, ನುಗ್ಗೆ ಸೊಪ್ಪು ತೆಗೆದುಕೊಳ್ಳಬೇಕು. ಎಲ್ಲಾ ಸೊಪ್ಪುಗಳನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಚೆನ್ನಾಗಿ ತೊಳೆದು ನಂತರ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ.
ಎಣ್ಣೆ ಬಿಸಿಯಾದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಬೆಳ್ಳುಳ್ಳಿ ಹಾಕಿಕೊಳ್ಳಿ. ಹಾಗೆ ಹಸಿ ಮೆಣಸು, ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಸೊಪ್ಪುಗಳನ್ನು ಕೂಡ ಹಾಕಿಕೊಂಡು ಮಿಶ್ರಣ ಮಾಡಿ. ಹಾಗೆ ಮಿಶ್ರಣ ಮಾಡಿ ಬಳಿಕ ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ತಳ ಹಿಡಿಯುವ ಸಂಭವ ಹಿನ್ನೆಲೆ ನೀರು ಹಾಕಿಕೊಳ್ಳುವುದು ಉತ್ತಮ.
ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಹಾಗೆ ನೀರು ಇಂಗುವವರೆಗೂ ಸೊಪ್ಪು ಬೇಯುವ ವರೆಗೂ ಬಿಡಿ. ನಂತರ ಒಲೆ ಆಫ್ ಮಾಡಿಕೊಳ್ಳಿ. ಇದು ಸಪ್ಪೆ ಪಲ್ಯ ಆಗಿರುವುದರಿಂದ ಇದಕ್ಕೆ ಯಾವುದೇ ಮಸಾಲೆ ಹಾಕುವುದಿಲ್ಲ. ಕೇವಲ ಸಂಪದ್ರದಾಯದ ಕಾರಣದಿಂದಾಗಿ ಮಾತ್ರವೇ ಮಾಡಲಾಗುತ್ತದೆ.
ನೀವು ಕೂಡ ಈ ಪಿತೃಪಕ್ಷದಲ್ಲಿ ಈ ರೀತಿಯಾಗಿ ಸೊಪ್ಪುಗಳ ಪಲ್ಯ ಮಾಡಿ ನೋಡಿ. ಇದು ರುಚಿ ಇಲ್ಲದಿದ್ದರೂ ಸವಿಯುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಇದನ್ನು ಮಾಡೋದು ಕೂಡ ಬಹಳ ಸುಲಭ. ಹೀಗಾಗಿ ಇದನ್ನು ಎಲ್ಲರು ಮಾಡಿ ಹಿರಿಯರಿಗೆ ಊಟ ಹಾಕುವ ಸಮುದಲ್ಲಿ ಇದನ್ನು ಕೂಡ ಸಂಪ್ರದಾಯವಾಗಿ 1 ಚಮಚದಷ್ಟು ಬಡಿಸುತ್ತಾರೆ.
ಪಿತೃಪಕ್ಷದಲ್ಲಿ ಹಲವರು ಸಿಹಿ ಊಟ ಹಾಗೂ ಮಾಂಸಾಹಾರಿ ಊಟವನ್ನೂ ಸಹ ಮಾಡುತ್ತಾರೆ. ಇನ್ನು ಊಟದ ಜೊತೆಗೆ ಪೂರ್ವಜರಿಗೆ ಇಷ್ಟವಾದ ಹಲವು ವಸ್ತು ಇಡುತ್ತಾರೆ.



Click it and Unblock the Notifications
