Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಕೊತ್ತಂಬರಿ ಸೊಪ್ಪು ಹೀಗೆ ಇಟ್ಟರೆ ಒಂದರಿಂದ ಒಂದೂವರೆ ತಿಂಗಳಾದರೂ ಸೊಪ್ಪು ಫ್ರೆಷ್ ಆಗಿರುತ್ತದೆ
ಕೊತ್ತಂಬರಿಸೊಪ್ಪಿನ ರೇಟ್ ಈ ವಾರ ಇದ್ದಂತೆ ಮುಂದಿನ ವಾರ ಇರಲ್ಲ, ವಾರದಿಂದ ವಾರಕ್ಕೆ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ 10 ರುಪಾಯಿಗೆ ಒಂದು ಕಟ್ಟು ಸಿಕ್ಕರೆ, ಇನ್ನು ಕೆಲವೊಮ್ಮೆ ಒಂದು ಕಟ್ಟು ಸೊಪ್ಪು 30-40 ರುಪಾಯಿಗೆ ಮಾರಾಟ ಮಾಡಲಾಗುವುದು. ಸೊಪ್ಪಿಗೆ ಬೆಲೆ ಕಡಿಮೆ ಇರುವಾಗ ಸಂಗ್ರಹಿಸಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು. ಇಲ್ಲಿ ಕೆಲವೊಂದು ಟಿಪ್ಸ್ ನೀಡಿದ್ದೇವೆ, ಇವುಗಳು ಕೊತ್ತಂಬರಿ ಸೊಪ್ಪನ್ನು ತುಂಬಾ ಕಾಲ ಫ್ರೆಷ್ ಆಗಿ ಇಡುತ್ತದೆ.

ತುಪ್ಪದಲ್ಲಿ ಸ್ವಲ್ಪ ಬಿಸಿ ಮಾಡಿ ಇಡುವುದು
ನೀವು ಒಂದು ಕಟ್ಟು ಕೊತ್ತಂಬರಿ ಸೊಪ್ಪು ತಂದು ಅದನ್ನು ಶುಚಿಗೊಳಿಸಿ, ನಂತರ
ಅದನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಒಂದು ಬಟ್ಟೆ ಹರಡಿ ಅದರ ಮೇಲೆ
ಕೊತ್ತಂಬರಿಸೊಪ್ಪು ಸ್ವಲ್ಪ ಹೊತ್ತು ಹರಡಿ ಇಡಿ. ನಂತರ ಬಾಣಲೆ ತೆಗೆದು ಬಿಸಿ
ಮಾಡಿ, ಅದಕ್ಕೆ ಒಂದು ಚಮಚ ತುಪ್ಪ ಹಾಕಿ, ಆ ಪಾತ್ರೆಯಲ್ಲಿ ತುಪ್ಪ ಹರಡುವಂತೆ
ಅಲುಗಾಡಿಸಿ, ಬಳಿಕ ಕೊತ್ತಂಬರಿ ಸೊಪ್ಪು ಒಂದು ರೌಂಡ್ ಮಿಕ್ಸ್ ಮಾಡಿ ಸ್ಟೌವ್ ಆಫ್
ಮಾಡಿ. ನಂತರ ಅದನ್ನು ಸ್ಟೀಲ್ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಟ್ಟರೆ ಒಂದೂವರೆ
ತಿಂಗಳಿಗೂ ಹೆಚ್ಚು ಸಮಯ ಸಮಯ ಬಳಸಬಹುದು.
ವಿಧಾನ 2
ನೀವು ಕೊತ್ತಂಬರಿಸೊಪ್ಪು ಕ್ಲೀನ್ ಮಾಡಿ ನೀರಿನಲ್ಲಿ ತೊಳೆದು ನೀರು
ಸಂಪೂರ್ಣವಾಗುವಂತೆ ಜರಡಿಯಂಥ ಪಾತ್ರೆಯಲ್ಲಿ ಸೊಪ್ಪು ಹಾಕಿ, ನೀರಿನಂಶ ಹೋದ ಬಳಿಕ
ಅದನ್ನು ಪೇಪರ್ನಲ್ಲಿ ಹಾಕಿ ಅದನ್ನು ಒಂದು ಸ್ಟೀಲ್ ಅಥವಾ ಪ್ಲಾಸ್ಟಿಕ್
ಡಬ್ಬದಲ್ಲಿ ಹಾಕಿಟ್ಟರೆ ತಿಂಗಳವರೆಗೆ ಫ್ರೆಷ್ ಆಗಿರುತ್ತದೆ.
ವಿಧಾನ 3
ನೀವು ಮರು ಬಳಕೆ ಮಾಡಬಹುದಾದ ಜಿಪ್ ಇರುವ ಪ್ಲಾಸ್ಟಿಕ್ ಬ್ಯಾಗ್ನಲ್ಲಿ
ಹಾಕಿಟ್ಟರೆ ಎರಡು ವಾರದವವರೆಗೆ ಕೊತ್ತಂಬರಿ ಸೊಪ್ಪು ಫ್ರೆಷ್ ಆಗಿರುತ್ತದೆ.
ವಿಧಾನ 4
ಅದರ ಬುಡ ಸ್ವಚ್ಛ ಮಾಡಿ, ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ನಂತರ ಅದನ್ನು ಸ್ಟೀಲ್
ಡಬ್ಬದಲ್ಲಿ ಹಾಕಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು.
ವಿಧಾನ 4
ಒಂದು ಬೌಲ್ನಲ್ಲಿ ಸ್ವಲ್ಪ ನೀರು ಹಾಕಿಅದರ ಬುಡ ಅದರಲ್ಲಿ ಇರುವಂತೆ
ಫ್ರಿಡ್ಜ್ನಲ್ಲಿಟ್ಟರೆ ಕೂಡ ಕೊತ್ತಂಬರಿ ಸೊಪ್ಪು ತುಂಬಾ ಸಮಯ ತಾಜಾದಿಂದ
ಕೂಡಿರುತ್ತದೆ.
ವಿಧಾನ 5
ನೀವು ಕೊತ್ತಂಬರಿ ಸೊಪ್ಪಿನ ಬುಡ ಕತ್ತರಿಸಿ ಅದನ್ನು ಪೇಪರ್ ಅಥವಾ
ಬಟ್ಟೆಯಲ್ಲಿಸುತ್ತಿ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಟ್ಟರೆ ಕೂಡ ತುಂಬಾ ಸಮಯ
ಸೊಪ್ಪು ಫ್ರೆಷ್ ಆಗಿರುತ್ತದೆ, ಈ ರೀತಿ ನೀವು 20-25 ದಿನದವರೆಗೆ ಇಡಬಹುದು.
ಡೀಪ್ ಫ್ರೀಝರ್ನಲ್ಲಿ ಇಡಬಹುದೇ?
ಕೊತ್ತಂಬರಿ ಸೊಪ್ಪು ಡೀಪ್ ಫ್ರೀಝರ್ನಲ್ಲಿಯೂ ಇಡಬಹುದು,ಕೊತ್ತಂಬರಿ ಸೊಪ್ಪನ್ನು
ಪೇಪರ್ನಿಂದ ಸುತ್ತಿ, ಅದರ ಮೇಲೆ ಬಟ್ಟೆಯನ್ನು ಸುತ್ತಿ, ಪ್ಲಾಸ್ಟಿಕ್
ಡಬ್ಬದಲ್ಲಿ ಹಾಕಿ ಮುಚ್ಚಿ ಪ್ರೀಝರ್ನಲ್ಲಿ ಇಡಬಹುದು. ನಿಮಗೆ ಬೇಕಾದಾಗ
ಫ್ರೀಝರ್ನಿಂದ ತೆಗೆದು ಸ್ವಲ್ಪ ಹೊತ್ತು ಹೊರಗಡೆ ಇಟ್ಟು ನಂತರ ಬಳಸಬಹುದು.
ಇದು ಬರಿ ಕೊತ್ತಂಬರಿ ಸೊಪ್ಪು ಮಾತ್ರವಲ್ಲ ಪುದೀನಾವನ್ನು ಕೂಡ ಇದೇ ರೀತಿ ಸಂಗ್ರಹಿಸಿಟ್ಟು ತಿಂಗಳವರೆಗೆ ಇಡಬಹುದು.



Click it and Unblock the Notifications