Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಾಳೆಹಣ್ಣು ಕಪ್ಪಾಗಬಾರದು, ತುಂಬಾ ದಿನಗಳವರೆಗೆ ಫ್ರೆಶ್ ಆಗಿರಬೇಕೇ? ಇಲ್ಲಿದೆ 4 ಹ್ಯಾಕ್
ಕೆಜಿಗೆ 80 ರುಪಾಯಿ 100 ರುಪಾಯಿ ಅಂಣತ ಬಾಳೆಹಣ್ಣು ತುಂಬಾನೇ ಹಣ್ಣಾದಾಗ ಅಯ್ಯೋ ದುಡ್ಡು ವ್ಯರ್ಥವಾಯ್ತಲ್ಲ ಅಂತ ಬೇಸರವಾಗುತ್ತದೆ. ದಿನಾ ಎರಡು-ಮೂರು ಬಾಳೆಹಣ್ಣು ತರುವುದಕ್ಕಿಂತ 1/2 ಕೆಜಿ ಅಥವಾ ಒಂದು ಕೆಜಿ ಬಾಳೆಹಣ್ಣು ತಂದು ಬಿಡ್ತೀವಿ, ಆದರೆ ಈ ಬಾಳೆಹಣ್ಣು ಬೇಗನೆ ಕಪ್ಪಾಗಲಾರಂಭಿಸಿದಾಗ ಕಸದ ಬುಟ್ಟಿಗೆ ಹಾಕಬೇಕಾಗುತ್ತದೆ. ಇಲ್ಲಿ ಕೆಲವೊಂದು ಹ್ಯಾಕ್ ನೀಡಿದ್ದೇವೆ, ಇದನ್ನು ಬಳಸಿದರೆ ಬಾಳೆಹಣ್ಣು ಇನ್ನೂ ಹೆಚ್ಚಿನ ಸಮಯ ಫ್ರೆಷ್ ಆಗಿರುತ್ತದೆ, ಬಾಳೆಹಣ್ಣು ಬಿಸಾಡುವುದು ತಪ್ಪುತ್ತೆ.

ಟಿಪ್ಸ್ ನಂಬರ್ 1: ಬಾಳೆಹಣ್ಣಿನ ತೊಟ್ಟು ನೀರಿನಲ್ಲಿ ಮುಳುಗಿದಂತೆ
ಇಡುವುದು
ಇದೊಂದು ಪರಿಣಾಮಕಾರಿಯಾದ ಟಿಪ್ಸ್ ಆಗಿದೆ, ಬಾಳೆಹಣ್ಣಿನ ತೊಟ್ಟು ಮಾತ್ರ
ನೀರಿನಲ್ಲಿ ಮುಳುಗಿದಂತೆ ಬೌಲ್ನಲ್ಲಿ ಹಾಕಿಡಿ, ಬಾಳೆಹಣ್ಣಿಗೆ ನೀರು ತಾಗಬಾ ರದು,
ಈ ರೀತಿ ಇಟ್ಟಾಗ ಬಾಳೆಹಣ್ಣು ಕಪ್ಪಾಗುವುದಿಲ್ಲ, ನೀವು ವಾರದವರೆಗೆ ಇಟ್ಟು
ಬಳಸಬಹುದು. ಬಾಳೆಹಣ್ಣಿನ ಹಳದಿ ಭಾಗ ಅದೇ ರೀತಿ ರುತ್ತದೆ, ಈ ಹ್ಯಾಕ್ ಟ್ರೈ ಮಾಡಿ,
ಸಕತ್ ಪರಿಣಾಮಕಾರಿ ಎಂದನಿಸುವುದು.
ಇತರ ಟಿಪ್ಸ್
ನೇತು ಹಾಕಿ
ಹೌದು ಅಂಗಡಿಗಳಲ್ಲಿ ನೀವು ನೋಡಿರಬಹುದು, ಬಾಳೆಹಣ್ಣು ನೇತು ಹಾಕಿರುತ್ತಾರೆ, ಹೀಗೆ
ನೇತು ಹಾಕುವುದರಿಂದ ಬಾಳೆಹಣ್ಣು ಬೇಗನೆ ಕಪ್ಪಾಗುವುದನ್ನು ತಡೆಗಟ್ಟಬಹುದು.
ಅಲ್ಯುಮಿನಿಯಂ ಫಾಯಿಲ್ನಲ್ಲಿ ಸುತ್ತಿಡಿ
ನಾವು ಬಾಳೆ ಹಣ್ಣನ್ನು ಟ್ರಾವೆಲ್ ಮಾಡುವಾಗ ಕೊಂಡೊಯ್ಯುವಾಗ ಈ ಟ್ರಿಕ್ಸ್ ಬಳಸಿದರೆ
ಹಣ್ಣಾಗಿ ಬಾಳೆಹಣ್ಣು ಅಪ್ಪಚ್ಚಿಯಾಗುವುದನ್ನು ತಡೆಗಟ್ಟಬಹುದು. ಈ ಟ್ರಿಕ್ಸ್
ಬಳಸಿದರೆ ಬಾಳೆಹಣ್ಣು ಹಳದಿ ಬಣ್ಣದಲ್ಲಿ ಹಾಗೆಯೇ ಇರುತ್ತದೆ, ಒಂದೆರಡು ದಿನಕ್ಕೆ
ಯಾವುದೇ ತೊಂದರೆಯಿಲ್ಲ.
ಫ್ರಿಡ್ಜ್ನಲ್ಲಿಡುವುದು
ಬಾಳೆಹಣ್ಣು ಫ್ರಿಡ್ಜ್ನಲ್ಲಿಡುವುದು ಅಷ್ಟೊಂದು ಸೂಕ್ತವಲ್ಲ, ಅಲ್ಲದೆ
ಫ್ರಿಡ್ಜ್ನಲ್ಲಿಟ್ಟು ನೀವು ಬಳಸಿದಾಗ ಅದರ ಟೇಸ್ಟ್ ಕೂಡ ಚೆನ್ನಾಗಿರಲ್ಲ, ಆದರೆ
ತುಂಬಾ ಬಾಳೆಹಣ್ಣಿದೆ, ಅದನ್ನು ಹಾಗೆಯೇ ಹೊರಗಡೆ ಇಟ್ಟರೆ ಹಾಳಾಗುವುದು ಏನು
ಮಾಡುವುದು ಎಂದಾಗ ಬಾಳೆಹಣ್ಣನ್ನು ಒಂದು ಕವರ್ನಲ್ಲಿ ಹಾಕಿ ಫ್ರೀಝ್ ಮಾಡಿ
ಇಡಬಹುದು, ನಂತರ ಬಳಸುವ ಅರ್ಧ ಗಂಟೆ ಮೊದಲು ತೆಗೆದು ಹೊರಗಡೆ ಇಟ್ಟು ಬಳಸಿದರೆ
ಬಾಳೆಹಣ್ಣು ಫ್ರೆಷ್ ಆಗಿರುತ್ತದೆ.



Click it and Unblock the Notifications
