Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಹೆಸರುಕಾಳಿನ ಚಪಾತಿ ಮಾಡಿ ನೋಡಿ ಸೂಪರ್ ರುಚಿಯಾಗಿರುತ್ತೆ: ಪ್ರೊಟೀನ್ಯುಕ್ತ ಬ್ರೇಕ್ಫಾಸ್ಟ್ ರೆಸಿಪಿ
ನಾವು ಚಪಾತಿ ಮಾಡುತ್ತೇವೆ,ಆದರೆ ಈ ಚಪಾತಿಯನ್ನು ಸ್ವಲ್ಪ ವೆರೈಟಿಯಾಗಿ ಮಾಡಿದರೆ ಹೇಗೆ ಎಂದು ಯೋಚಿಸಿದ್ದೀರಾ? ಇಲ್ಲಿ ಹೆಸರುಕಾಳಿನ ಚಪಾತಿ ರೆಸಿಪಿ ನೀಡಿದ್ದೇವೆ. ಇದನ್ನು ಟ್ರೈ ಮಾಡಿ ನೋಡಿ ತುಂಬಾ ಚೆನ್ನಾಗಿರುತ್ತದೆ. ಈ ಚಪಾತಿ ಪ್ರೊಟೀನ್ಯುಕ್ತ ರೆಸಿಪಿಯಾಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಹೆಸರುಕಾಳು 1 ಕಪ್
2-3 ಹಸಿ ಮೆಣಸು
ಸ್ವಲ್ಪ ಹಸಿ ಮೆಣಸು, ಸ್ವಲ್ಪ ಶುಂಠಿ
ಉಪ್ಪು
ಎಣ್ಣೆ 2 ಚಮಚ
1 ಚಮಚ ಜೀರಿಗೆ
ಸ್ವಲ್ಪ ಅರಿಶಿಣ ಪುಡಿ
1/2 ಚಮಚ ಆಮ್ಚೂರು ಪೌಡರ್
1/2 ಚಮಚ ಜೀರಿಗೆ ಪುಡಿ
ರೋಸ್ಟ್ ಮಾಡಿದ ಕೊತ್ತಂಬರಿ ಪುಡಿ 1/2 ಚಮಚ
ಖಾರದ ಪುಡಿ 1/2 ಚಮಚ (ಖಾರ ಕಡಿಮೆ ಬೇಕೆಂದು ಬಯಸುವುದಾದರೆ ಹಸಿ ಮೆಣಸು
ಹಾಕಿರುವುದರಿಂದ ಇದನ್ನು ಸ್ಕಿಪ್ ಮಾಡಬಹುದು)
ಸ್ವಲ್ಪ ಕೊತ್ತಂಬರಿ ಸೊಪ್ಪು
ಗೋಧಿ ಹಿಟ್ಟು ಒಂದು ಕಪ್
ಗೋಧಿ ಹಿಟ್ಟು ಕಲೆಸಿ ಚಮಚ ಎಣ್ಣೆ, ಸ್ವಲ್ಪ ನೀರು
ಮಾಡುವ ವಿಧಾನ:
- ಹೆಸರುಕಾಳು 6-8 ಗಂಟೆ ನೆನೆ ಹಾಕಿ
- ನಂತರ ಹೆಸರುಕಾಳು ನೀರು ಸೋಸಿ, ಕಾಳುಗಳನ್ನು ಮಿಕ್ಸಿ ಜಾರ್ನಲ್ಲಿ ಹಾಕಿ
- ಈಗ ಅದಕ್ಕೆ ಉಪ್ಪು, ಶುಂಠಿ, ಬೆಳ್ಳುಳ್ಳಿ ಸೇರಿಸಿ ನುಣ್ಣನೆ ರುಬ್ಬಿ
- ಈಗ ಬಾಣಲೆ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ ನಂತರ 1 ಚಮಚ ಜೀರಿಗೆ ಹಾಕಿ
- ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಸ್ವಲ್ಪ ಅರಿಶಿಣ ಪುಡಿ ಸೇರಿಸಿ
- ಬಳಿಕ ರುಬ್ಬಿದ ಹೆಸರುಕಾಳಿನ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ
- ಈಗ ಆಮ್ಚೂರ್ ಸೇರಿಸಿ(ಮಾವಿನಕಾಯಿ ಪುಡಿ) ಇದರ ಬದಲಿಗೆ ನಿಂಬೆರಸ ಸೇರಿಸಬಹುದು (ನಿಂಬೆರಸ ಸೇರಿಸುವುದಾದರೆ ಮಿಶ್ರಣ ಉರಿಯಿಂದ ಇಳಿಸಿ ಬಳಿಕ ಸೇರಿಸಿ)
- ಕೊತ್ತಂಬರಿ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಸೇರಿಸಿ ಮಿಕ್ಸ್ ಮಾಡಿ
- ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
- ಈಗ ಉರಿ ಆರ್ಫ್ ಮಾಡಿ ಈ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿಡಿ.
ಈಗ ಚಪಾತಿ ಹಿಟ್ಟು ಕಲೆಸಿ
- ಚಪಾತಿಗೆ ಎಣ್ಣೆ, ನೀರು, ಉಪ್ಪು ಹಾಕಿ ಕಲೆಸಿ, ನಂತರ ಹಿಟ್ಟಿನಿಂದ ಚಪಾತಿಗೆ ಉಂಡೆಕಟ್ಟಿ. ಉಂಡೆ ಸ್ವಲ್ಪ ತಪ್ಪವಿರಲಿ, ಚಪಾತಿ ತೆಳುವಾದರೆ ಹೆಸರುಕಾಳು ಮಿಶ್ರಣ ಹಾಕಿ ತಟ್ಟುವುದು ಕಷ್ಟವಾಗಬಹುದು.
- ನೀವು ಚಪಾತತಿ ಉಂಡೆ ಕಟ್ಟಿ ಹೋಳಿಗೆಗೆ ಹೂರಣ ತುಂಬವಂತೆ ಹೆಸರಳುಕಾಳಿನ ಮಿಶ್ರಣ ತುಂಬಿ ಮೆಲ್ಲನೆ ರೌಂಡ್ ಶೇಪ್ಗೆ ಲಟ್ಟಿಸಿ ನಂತರ ತವಾದಲ್ಲಿ ಹಾಕಿ
- ಬಳಿಕ ರೊಟ್ಟಿ ಸುಡುವಂತೆ ಸುಟ್ಟರೆ ಹೆಸರುಕಾಳಿನ ಚಪಾತಿ ತುಂಬಾ ಚೆನ್ನಾಗಿರುತ್ತದೆ.
ಈಗ ರೆಡಿಯಾದ ಚಪಾತಿಯನ್ನು ಹೆಸರುಕಾಳಿನ ಪಲ್ಯ ಮತ್ತು ಚಟ್ನಿ ಪುಡಿ ಜೊತೆ ಸವಿದು ನೋಡಿ ಸೂಪರ್ ಆಗಿರುತ್ತದೆ.



Click it and Unblock the Notifications