Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ವಾರದೊಳಗೆ ತೂಕ ಹೆಚ್ಚಿಸಿಕೊಳ್ಳಬೇಕಾ? ಇಲ್ಲಿದೆ ಸುಲಭದ ಪ್ರೋಟೀನ್ ಶೇಕ್!
ಇತ್ತೀಚಿಗೆ ಹಲವು ಮಂದಿಯ ಸಮಸ್ಯೆ ಅಂದ್ರೆ ತೂಕ ಹೆಚ್ಚಾಗೋದು. ಕಡಿಮೆ ವಯಸ್ಸಿನಲ್ಲಿ ಹೆಚ್ಚು ತೂಕ ಹೆಚ್ಚಿಕೊಂಡರೆ ಅದು ದೊಡ್ಡ ಸಮಸ್ಯೆ. ಅದ್ರಲ್ಲೂ ಯುವ ಜನತೆ ಈಗ ತೂಕ ಹೆಚ್ಚಳದಂತಹ ಸಮಸ್ಯೆಯಿಂದಾಗಿ ಡಯೆಟ್, ಜಿಮ್ ಸೇರಿ ಹಲವು ರೀತಿಯ ಕಸರತ್ತು ಮಾಡುತ್ತಾರೆ. ತೂಕ ಇಳಿಸಿಕೊಳ್ಳುವುದೇ ಅವರಿಗೆ ದೊಡ್ಡ ಕೆಲಸ ಆಗಿದೆ.
ಆದ್ರೆ ಮತ್ತೊಂದಿಷ್ಟು ಮಂದಿ ಈಗ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ನೋಡಬಹುದು. ಕಡಿಮೆ ತೂಕದಿಂದ ಅವರು ಸಮಸ್ಯೆಗಳ ಎದುರಿಸಬಹುದು. ಆದ್ರೆ ತೂಕ ಇಳಿಸುವುದು ಎಷ್ಟು ಕಷ್ಟವೋ ಹಾಗೆ ತೂಕ ಹೆಚ್ಚಿಸಿಕೊಳ್ಳುವುದು ಸಹ ಅಷ್ಟೇ ಶ್ರಮದಾಯಕ ಕೆಲಸ. ತೂಕ ಹೆಚ್ಚಿಸಿಕೊಳ್ಳುವ ನೆಪದಲ್ಲಿ ಹೆಚ್ಚು ಹೆಚ್ಚು ಆಹಾರ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ.

ಹಾಗೆ ತೂಕ ಹೆಚ್ಚಿಸಿಕೊಳ್ಳಲು ಹಲವು ರೀತಿಯ ಪ್ರೋಟೀನ್, ಕ್ಯಾಲೋರಿಯ ಅಗತ್ಯತೆ ಇರಲಿದೆ, ಹೀಗಾಗಿ ನಾವು ಸೇವಿಸುವ ಆಹಾರ ಬಹಳ ಮುಖ್ಯವಾಗಿರಲಿದೆ. ಆದ್ರೆ ಏನು ಸೇವಿಸಬೇಕು ಅನ್ನೋದು ಎಲ್ಲರ ಪ್ರಶ್ನೆಯಾಗಿರಲಿದೆ. ಹೀಗಾಗಿ ನಾವಿಂದು ತೂಕ ಹೆಚ್ಚಿಸಿಕೊಳ್ಳಲು ಮುಂದಾಗುವ ಜನರಿಗೆ ನಾವಿಲ್ಲಿ ಸುಲಭವಾಗಿ ರೆಸಿಪಿ ಹೇಳಲಿದ್ದೇವೆ.
ಹಾಗಾದ್ರೆ ತೂಕ ಹೆಚ್ಚಿಸಿಕೊಳ್ಳುವ ಸುಲಭದ ಉಪಾಯವೇನು? ಈ ಡ್ರಿಂಕ್ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ತೂಕ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸುಲಭದ ಡ್ರಿಂಕ್
- ಹಾಲು
- ಖರ್ಜೂರ
- ಬಾದಾಮಿ
- ಗೋಡಂಬಿ
- ದ್ರಾಕ್ಷಿ
- ಹಣ್ಣುಗಳು
ತೂಕ ಹೆಚ್ಚಿಸಿಕೊಳ್ಳಲು ಸುಲಭದ ಪ್ರೋಟೀನ್ ಶೇಕ್ ಮಾಡುವ
ವಿಧಾನ
ಮೊದಲು ನಿಮಗೆ ಬೇಕಾದಷ್ಟು ಬಾದಾಮಿ ತೆಗೆದುಕೊಂಡು ಅದನ್ನು ತೊಳೆದು ಬೌಲ್ಗೆ ಹಾಕಿಟ್ಟುಕೊಳ್ಳಿ. ಇದಕ್ಕೆ ಒಣ ದ್ರಾಕ್ಷಿ, ಗೋಡಂಬಿಗಳು ಸಹ ತೊಳೆದು ಇದೇ ಬೌಲ್ಗೆ ಹಾಕಿ. ಹಾಗೆ ಖರ್ಜೂರ ಸಹ ಹಾಕಿಕೊಳ್ಳಿ. ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಡ್ರೈಫ್ರೂಟ್ಸ್ಗಳ ತೆಗೆದುಕೊಳ್ಳಿ.
ಈ ಬೌಲ್ಗೆ ಅರ್ಧ ಗ್ಲಾಸ್ ಹಾಲು ಹಾಕಿ, ಅಥವಾ ಈ ಡ್ರೈಫ್ರೂಟ್ಸ್ ಮುಳುಗುವಷ್ಟು ಹಾಲು ಹಾಕಿಕೊಂಡು ನೆನೆಯಲು ಬಿಡಿ. ಇದಕ್ಕೆ ಕಾಯಿಸಿದ ಹಾಲು ಬಳಸಬೇಕು. 30 ನಿಮಿಷ ನೆನೆಸಿಕೊಂಡ ಬಳಿಕ ಈ ಎಲ್ಲಾ ಅಂಶಗಳನ್ನು ಸಹ ನೀವು ಮಿಕ್ಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
ಅನಂತರ ಜರಡಿ ಹಿಡಿದು ಕೇವಲ ಅದರ ಪೇಸ್ಟ್ ತೆಗೆದುಕೊಳ್ಳಿ. ಇದಕ್ಕೆ ಸಕ್ಕರೆ ಬಳಸುವ ಅಗತ್ಯವಿಲ್ಲ. ಈಗ ಇದಕ್ಕೆ ಬೇಕಿದ್ದರೆ ಹಣ್ಣಗಳನ್ನು ಸಹ ಸೇರಿಸಿಕೊಳ್ಳಬಹುದು.
ಮೊದಲಿಗೆ ಮಿಕ್ಸಿ ಜಾರ್ಗೆ ಒಂದು ಬಾಳೆ ಹಣ್ಣು ಹಾಗೆ ಸೇಬು ಹಣ್ಣನ್ನು ಕತ್ತರಿಸಿ ಹಾಕಿ ಬಳಿಕ ಹಾಲು ಹಾಕಿ ರುಬ್ಬಿ ನುಣ್ಣಗೆ ಮಾಡಿಕೊಂಡು ಇದೇ ಬೌಲ್ಗೆ ಸೇರಿಸಿಕೊಳ್ಳಬಹುದು. ಈ ಡ್ರಿಂಕ್ ಅನ್ನು ಸುಲಭವಾಗಿ ಮಾಡಿ ಸವಿಯಬಹುದು. ಇದನ್ನು ಊಟದ ನಂತರ ಸೇವಿಸಬಹುದು. ಇನ್ನು ಮಕ್ಕಳಿಗೂ ಸಹ ನೀಡಬಹುದು.
ಹಾಗೆ ಒಂದು ಮಿಕ್ಸಿ ಜಾರ್ಗೆ ಬಿಸಿ ಹಾಲು ಹಾಕಿಕೊಂಡು ಅದಕ್ಕೆ 1 ಸ್ಪೂನ್ ಖರ್ಜೂರದ ಪೇಸ್ಟ್ ಹಾಕಿ ಮಿಶ್ರಣ ಮಾಡಿ. ನಂತರ ಜರಡಿ ಹಿಡಿದು ಅದನ್ನು ಮಕ್ಕಳಿಗೆ ನೀಡಬಹುದು. ಖರ್ಜೂರದಲ್ಲಿನ ಕಬ್ಬಿಣ ಅಂಶ ಮಕ್ಕಳಿಗೆ ಬಹಳ ಉತ್ತಮ. ಈ ಎಲ್ಲಾ ಪದಾರ್ಥಗಳು ನಿಮ್ಮ ತೂಕ ಹೆಚ್ಚಿಸಿಕೊಳ್ಳಲು ಬಳಸುವ ಪದಾರ್ಥಗಳಾಗಿವೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications