Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಇಂತ ಚಿತ್ರಾನ್ನ ನೀವೆಂದು ಮಾಡಿರಲ್ಲ..! 'ಮಸಾಲ ಚಿತ್ರಾನ್ನ'ದ ರುಚಿಯೇ ಬೇರೆ..!
ಚಿತ್ರಾನ್ನ ಇದೊಂತರ ಇಂಟರ್‌ನ್ಯಾಷನಲ್ ಫುಡ್ ಇದ್ದಂಗೆ. ಭಾರತದ ಯಾವುದೇ ಮೂಲೆಗೆ ಹೋದ್ರು ನಿಮಗೆ ಚಿತ್ರಾನ್ನ ಸಿಕ್ಕೇ ಸಿಗುತ್ತೆ. ದಕ್ಷಿಣ ಭಾರತದಲ್ಲಂತು ಚಿತ್ರಾನ್ನ ಸಿಕ್ಕಾಪಟ್ಟೆ ಫೇಮಸ್, ಬೆಳಗ್ಗೆ, ಮಧ್ಯಾಹ್ನ, ಸಂಜೆ ಎನ್ನದೆ ಸೇವಿಸುತ್ತಾರೆ. ಮನೆಯಲ್ಲಿ ಹಳೆಯ ಅನ್ನ ಬೆಳಗ್ಗೆ ಚಿತ್ರಾನ್ನ ಮಾಡೋದು ಸಹ ಅಲಿಖಿತ ನಿಯಮ ಆಗಿಬಿಟ್ಟಿದೆ.
ಇನ್ನು ಚಿತ್ರಾನ್ನ ಅಂದ್ರೆ ಮೂಗು ಮುರಿಯುವರೂ ಇದ್ದಾರೆ. ಏಕೆಂದ್ರೆ ಚಿತ್ರಾನ್ನ ಅಂದ್ರೆ ಅವರು ಒಂದೇ ರೀತಿಯ ರುಚಿ ಎಂದುಕೊಂಡಿರುತ್ತಾರೆ. ಆದ್ರೆ ಚಿತ್ರಾನ್ನದಲ್ಲಿ ಹಲವು ರೀತಿಯ ಪ್ರಕಾರಗಳಿವೆ. ಅದರಲ್ಲೂ ರುಚಿಕರ, ವಿಶೇಷ ರೀತಿಯಲ್ಲಿ ಚಿತ್ರಾನ್ನ ಮಾಡಬಹುದು. ಇನ್ನು ಇದರಲ್ಲಿ ಮಸಾಲ ಚಿತ್ರಾನ್ನವೂ ಒಂದು. ಈ ಮಸಾಲ ಚಿತ್ರಾನ್ನ ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸಬೇಕು ಅನ್ನೋ ರುಚಿ ಇದು.

ಹಾಗಾದರೆ ಮಸಾಲ ಚಿತ್ರಾನ್ನ ಮಾಡುವುದು ಹೇಗೆ? ಮಸಾಲ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥವೇನು?, ಮಾಡುವ ಪಾಕವಿಧಾನವೇನು ಎಂಬುದನ್ನು ನೋಡಿ.
ಮಸಾಲ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ-2 ಕಪ್
- ಕರಿಬೇವು-2 ಕಡ್ಡಿ
- ಅರಿಶಿನ-ಅರ್ಧ ಚಮಚ
- ನಿಂಬೆ ಹುಳಿ-2 ಚಮಚ
- ಹಸಿಮೆಣಸು-4
- ಇಡಿ ಕಡಲೆ-
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
- ಶುಂಠಿ
- ಬೆಳ್ಳುಳ್ಳಿ
- ಲವಂಗ
- ಸಾಸಿವೆ
- ಜೀರಿಗೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಇಂಗು
- ಉಪ್ಪು
ಮಸಾಲ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ತಂಗಿನಕಾಯಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಲವಂಗ, ಚೆಕ್ಕೆಯನ್ನು ಒಂದು ಸಣ್ಣ ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರನ್ನು ಹಾಕಬೇಡಿ, ತರಿತರಿಯಾಗಿ ಮಸಾಲೆಯನ್ನು ರುಬ್ಬಿಕೊಳ್ಳಿ.
ನಂತರ ಈ ಮಸಾಲೆ ಬದಿಗಿಡಿ. ಇದಾದ ಬಳಿಕ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಸಾವಿವೆ, ಕಡಲೆ ಕಾಳು, ಉದ್ದಿನ ಬೇಳೆ, ಕೆಡಲೆ ಬೇಳೆ ಹಾಕಿ ಚೆನ್ನಾಗಿ ಕಾಯಿಸಿ. ಒಂದೆರಡು ನಿಮಿಷ ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ. ಬಳಿಕ ಅದಕ್ಕೆ ಅರಿಶಿನ ಪುಡಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಒಂದು ನಿಮಿಷದ ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ಇದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸುವಾಸನೆಗಾಗಿ ಇಂಗು ಕೂಡ ಹಾಕಿ. ಬೇಕಾದರೆ ಈರುಳ್ಳಿ, ಬೆಳ್ಳುಳ್ಳಿಯನ್ನು ಈ ಒಗ್ಗರಣೆ ಮಾಡುವಾಗ ಹಾಕಿಕೊಳ್ಳಬಹುದು. ಹಾಕದೆಯೋ ಮಾಡಬಹುದು.
ಇದಾದ ಬಳಿಕ ಒಲೆ ಆಫ್ ಮಾಡಿ. ಈಗ ನಿಮ್ಮ ಮುಂದೆ ಮಸಾಲ ಚಿತ್ರಾನ್ನ ಗೊಜ್ಜು ರೆಡಿಯಾಗಿದೆ. ಈ ಗೊಜ್ಜು ಎಷ್ಟು ಬೇಕೋ ಅಷ್ಟು ತೆಗೆದಿಟ್ಟುಕೊಳ್ಳಬಹುದು. ಇಲ್ಲವೆ ಅಷ್ಟೂ ಗೊಜ್ಜಿಗೂ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ನಿಮ್ಮ ಮುಂದೆ ಮಸಾಲ ಚಿತ್ರಾನ್ನ ರೆಡಿಯಾಗಿದೆ. ಆದರೆ ನೋಡಲು ಇದು ಸಾಮಾನ್ಯ ಚಿತ್ರಾನ್ನದಂತೆ ಕಂಡರೂ ಸೇವಿಸುವಾಗ ಇದಕ್ಕೆ ಹಾಕಿರುವ ಮಸಾಲೆ ನಿಮಗೆ ಅತ್ಯಂತ ಸ್ವಾದಿಷ್ಟ ರುಚಿ ನೀಡಲಿದೆ.
ಈ ಚಿತ್ರಾನ್ನದ ಜೊತೆ ನೀವು ತೆಂಗಿನ ಕಾಯಿ ಚಟ್ನಿ, ಕಡಲೆ ಚಟ್ನಿ ಹಾಕಿಕೊಂಡು ಸವಿಯಬಹುದು. ಈ ಚಿತ್ರಾನ್ನಕ್ಕೆ ಹಿಂದಿನ ದಿನದ ಅನ್ನವನ್ನೂ ಬಳಸಬಹುದು ಇಲ್ಲದೆ ಇದ್ದರೆ ಕೂಡಲೇ ರೆಡಿ ಮಾಡಿರುವ ಅನ್ನವನ್ನು ಬಿಸಿ ಇದ್ದಾಗಲೇ ಮಾಡಿಕೊಂಡು ಸೇವಿಸಬಹುದು. ಈ ಚಿತ್ರಾನ್ನ ಸಹ ಬಿಸಿ ಇದ್ದಾಗಲೇ ಸೇವಿಸಿದರೆ ರುಚಿ ಮತ್ತಷ್ಟು ಹೆಚ್ಚಿರುತ್ತದೆ. ತಣ್ಣಗಾದ ಮೇಲೆ ಇದು ರುಚಿ ಅನಿಸುವುದಿಲ್ಲ.
ಇನ್ನು ಮಸಲಾ ಚಿತ್ರಾನ್ನದ ಗೊಜ್ಜನ್ನು ಫ್ರಿಡ್ಜ್‌ನಲ್ಲಿಟ್ಟು ಮೂರ್ನಾಲ್ಕು ದಿನ ಬಿಟ್ಟು ಸಹ ಮತ್ತೆ ಇದೇ ಚಿತ್ರಾನ್ನ ಮಾಡಬಹುದು. ಗೊಜ್ಜನ್ನು ಮಾಡುವಾಗಲೇ ಸ್ವಲ್ಪ ಜಾಸ್ತಿ ಮಾಡಿಕೊಂಡರೆ ಇನ್ನೊಮ್ಮೆ ಚಿತ್ರಾನ್ನ ಮಾಡಲು ನೆರವಾಗುತ್ತದೆ.



Click it and Unblock the Notifications