Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸೂಪರ್ ಬ್ರೇಕ್‍ಫಾಸ್ಟ್.. ಇದನ್ನು ತಿಂದರೆ ತೂಕ ಇಳಿಯೋದು ಗ್ಯಾರಂಟಿ! ದಿನವಿಡೀ ಫುಲ್ ಎನರ್ಜಿ
ಹೆಲ್ತಿ ಬ್ರೇಕ್‌ಫಾಸ್ಟ್, ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಬೇಕು ಅಂತೀರಾ! ಬೆಳಗಿನ ಉಪಾಹಾರ ಸಾಮಾನ್ಯವಾಗಿ ದೋಸೆ, ಇಡ್ಲಿ, ಬೋಂಡಾ ಎಂದು ತಿನ್ನುವುದು ರೂಢಿ. ಆದರೆ, ಇವುಗಳಲ್ಲಿ ಕೆಲವು ಹೆಚ್ಚು ಎಣ್ಣೆಯಿಂದ ತಯಾರಾಗುವುದರಿಂದ ಕೆಲವರು ಇವುಗಳಿಂದ ದೂರ ಇರುತ್ತಾರೆ. ಅಂಥವರಿಗಾಗಿ ಇಲ್ಲೊಂದು ವಿಶೇಷವಾದ ಉಪಾಹಾರವಿದೆ. ಇದನ್ನು ಒಮ್ಮೆ ಸವಿದರೆ ಪದೇ ಪದೇ ಸವಿಯಬೇಕೆನಿಸುತ್ತದೆ.
ಹೌದು, ಕೆಲವರು ತಿಂಡಿಯ ಬದಲು ಅನ್ನವನ್ನೇ ತಿನ್ನಲು ಬಯಸುತ್ತಾರೆ. ಆದರೆ, ಬೊಜ್ಜು, ಮಧುಮೇಹದಂತಹ (ಡಯಾಬಿಟಿಸ್) ಕಾಯಿಲೆ ಇರುವವರು ತಮ್ಮ ಇಷ್ಟವನ್ನು ಬದಿಗಿಟ್ಟು ಅದರಿಂದ ದೂರವಿರುತ್ತಾರೆ. ಅಂತಹವರು ನಾವು ಇಲ್ಲಿ ತಿಳಿಸುವ ತಿಂಡಿಯನ್ನು ತಿನ್ನಬಹುದು. ನಿಮ್ಮ ನಿಯಮಿತ ಆಹಾರದಲ್ಲಿ ಅಲ್ಪ ಪ್ರಮಾಣದ ಅನ್ನ ಸೇವಿಸುವುದರಿಂದ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಹಾಗಿದ್ರೆ, ಕೋಕನಟ್ ರೈಸ್ (Coconut Rice) ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Coconut Rice Recipe) ತಿಳಿಯೋಣ.

ಅನೇಕ ಪೋಷಕಾಂಶ ಲಭ್ಯ
ಕೊಬ್ಬರಿ, ಆರೋಗ್ಯಕರ ಪದಾರ್ಥಗಳನ್ನು ಸೇವಿಸುವುದರಿಂದ ಪ್ರಯೋಜನಕಾರಿಯಾಗಿದೆ. ಕೊಬ್ಬರಿ ಅನ್ನದಂತಹ ಖಾದ್ಯಗಳನ್ನು ನಿಮ್ಮ ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳಿ. ಪೋಷಕಾಂಶ ಭರಿತ ಕೊಬ್ಬರಿ ಸೇವಿಸುವುದರಿಂದ ಹಲವು ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ಇದು ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಆರೋಗ್ಯಕರ ಕೊಬ್ಬು, ಮೆಗ್ನೀಷಿಯಂ, ತಾಮ್ರ, ಸೆಲೆನಿಯಂ, ಮ್ಯಾಂಗನೀಸ್, ರಂಜಕ, ಕಬ್ಬಿಣ, ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.
ಕೋಕನಟ್ ರೈಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಒಣ ಕೊಬ್ಬರಿ ತುರಿ - 2 ಕಪ್
• ಬಾಸ್ಮತಿ ಅಕ್ಕಿ - 1 ಕಪ್
• ಶೇಂಗಾ - 4 ಚಮಚ
• ಗೋಡಂಬಿ - 8 ರಿಂದ 10
• ಕಡಲೆಬೇಳೆ - 4 ಚಮಚ (ನೆನೆಸಿದ)
• ಉದ್ದಿನಬೇಳೆ - 4 ಚಮಚ
• ಸಾಸಿವೆ - 1 ಚಮಚ
• ಜೀರಿಗೆ - 1 ಚಮಚ
• ಕರಿಬೇವಿನ ಎಲೆಗಳು - 5 ರಿಂದ 6
• ಒಣ ಮೆಣಸಿನಕಾಯಿ - 1
• ಸಣ್ಣಗೆ ಹೆಚ್ಚಿದ ಹಸಿಮೆಣಸು - 2
• ರುಚಿಗೆ ತಕ್ಕಷ್ಟು ಉಪ್ಪು
• ತುಪ್ಪ - 3 ಚಮಚ

ಕೋಕನಟ್ ರೈಸ್ ತಯಾರಿಸುವ ವಿಧಾನ ಹೀಗಿದೆ
ಮೊದಲು ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಬಳಿಕ 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಒಂದು ಬಾಣಲೆ ಅಥವಾ ಪ್ಯಾನ್ ಬಿಸಿ ಮಾಡಿ. ಬಳಿಕ 1 ಚಮಚ ತುಪ್ಪ ಹಾಕಿ. ಈಗ ಅದಕ್ಕೆ ಶೇಂಗಾ, ಗೋಡಂಬಿ ಹಾಕಿ ಹುರಿಯಿರಿ. ಇದನ್ನು ಪಕ್ಕಕ್ಕಿಡಿ.
ಇದಾದ ಬಳಿಕ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ. ಇದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಎಲೆ, ನೆನೆಸಿದ ಉದ್ದಿನಬೇಳೆ, ಕಡಲೆಬೇಳೆ ಹಾಕಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಒಂದು ನಿಮಿಷ ಹುರಿಯಿರಿ. ನಂತರ ಹುರಿದ ಗೋಡಂಬಿ, ಶೇಂಗಾ, ತುರಿದ ಕೊಬ್ಬರಿ ಹಾಕಿ ಎಲ್ಲವನ್ನೂ ಒಟ್ಟಾಗಿ ಸುಮಾರು ಎರಡು ನಿಮಿಷ ಹುರಿಯಿರಿ.
ಬಳಿಕ ನೆನೆಸಿದ ಬಾಸ್ಮತಿ ಅಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮತ್ತೊಮ್ಮೆ ಎಲ್ಲವನ್ನೂ ಬೆರೆಸಿ 2 ನಿಮಿಷ ಹುರಿಯಿರಿ. ಈಗ ಈ ಮಿಶ್ರಣವನ್ನು ಪ್ರೆಶರ್ ಕುಕ್ಕರ್‌ಗೆ ಹಾಕಿ ನೀರು ಹಾಕಿ ಬೇಯಿಸಿ. ಸುಮಾರು ಎರಡು ಅಥವಾ ಮೂರು ಸೀಟಿಗಳ ನಂತರ ಕುಕ್ಕರ್ ಇಳಿಸಿ. ಇಷ್ಟು ಮಾಡಿದರೆ ಸಾಕು, ರುಚಿಕರವಾದ ಕೋಕನಟ್ ರೈಸ್ ಅಥವಾ ಕೊಬ್ಬರಿ ಅನ್ನ ಸಿದ್ಧ. ಈ ಟೇಸ್ಟಿ ಮತ್ತು ಹೆಲ್ದಿ ತಿಂಡಿಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.



Click it and Unblock the Notifications