Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ದೋಸೆ ಹಿಟ್ಟು ತುಂಬಾ ಹುಳಿಯಾಗುವುದನ್ನು ತಡೆಗಟ್ಟಲು ಈ ಟಿಪ್ಸ್ ಟ್ರೈ ಮಾಡಿ
ತುಂಬಾ ಜನ ಹೇಳುತ್ತಾರೆ, ಈ ಹೋಟೆಗಳಲ್ಲಿ ದೋಸೆ ತಿನ್ನುವಾಗ ಅದರಲ್ಲಿ ಹುಳಿ ಸರಿಯಾಗಿ ಇರುತ್ತದೆ, ಅದೇ ನಾವು ಮಾಡಿದರೆ ಕೆಲವೊಮ್ಮೆ ಹಿಟ್ಟು ಹುಳಿಯಾಗುವುದು, ಅದರಿಂದ ದೋಸೆ, ಇಡ್ಲಿ ಏನೇ ಮಾಡಲಿ ಅಷ್ಟೊಂದು ರುಚಿ ಅನಿಸಲ್ಲ. ಹಾಗಾಗಿ ದೋಸೆ ಹಿಟ್ಟು ಹುಳಿಯಾಗುವುದನ್ನು ತಡೆಯಲು ಹೀಗೆ ಮಾಡಿ:

ಮೆಂತೆ ಬೀಜ ಸೇರಿಸಿ
ಮೆಂತೆ ಕಹಿ ರುಚಿ. ಹಾಗಾಗಿ ನೀವು ಅಕ್ಕಿ ನೆನೆ ಸಹಾಕುವಾಗ ಸ್ವಲ್ಪ ಮೆಂತೆ ಕೂಡ ನೆನೆ ಹಾಕಿ, ಇದು ಹಿಟ್ಟು ತುಂಬಾ ಹುಳಿಯಾಗದಂತರೆ ತಡೆಗಟ್ಟುತ್ತದೆ, ಅಲ್ಲದೆ ದೋಸೆಯ ರುಚಿಯನ್ನು ಕೂಡ ಹೆಚ್ಚಿಸುತ್ತದೆ. ಇನ್ನು ಚಳಿಗಾಲದಲ್ಲಿ ಮೆಂತೆ ಸೇರಿಸಿದರೆ ಹಿಟ್ಟು ಹುದುಗು ಬರಲು ಕೂಡ ಸಹಕಾರಿ.
ಉದ್ದಿನ ಬೇಳೆ ಬದಲಿಗೆ ಉದ್ದು ಬಳಸಿ (ಒಡೆದಿರದ)
ಉದ್ದು ಸಿಪ್ಪೆ ಸಹಿತ ಇದ್ದರೆ ಇನ್ನೂ ಒಳ್ಳೆಯದು. ಇಂಥ ಉದ್ದು ಹಶಾಕಿ ದೋಸೆ ಹಿಟ್ಟು ರುಬ್ಬಿದರೆ ದೋಸೆ ಹೆಚ್ಚು ಹುಳಿಯಾಗುವುದನ್ನು ತಡೆಯಬಹುದು ಮಾತ್ರವಲ್ಲ, ದೋಸೆ ಕ್ರಿಸ್ಪಿಯಾಗಿ ಬರುತ್ತದೆ.
ಇನ್ನು ಮಿಕ್ಸಿ ಗ್ರೈಂಡರ್ ತುಂಬಾ ಬಿಸಿಯಾದಾಗ ರುಬ್ಬಬೇಡಿ
ಅಕ್ಕಿ ರುಬ್ಬುವಾಗ 2-3 ಸಾರಿ ಹಾಕಿ ರುಬ್ಬಿದಾಗ ಗ್ರೈಂಡರ್ ಬಿಸಿಯಾಗುತ್ತದೆ,
ಹೀಗೆ ರುಬ್ಬಿದಾಗ ಕೂಡ ಹಿಟ್ಟು ಹುಳಿಯಾಗುವುದು, ಅದರ ಬದಲಿಗೆ ಗ್ರೈಂಡರ್ ತುಂಬಾ
ಬಿಸಿಯಾದರೆ ಸ್ವಲ್ಪ ಹೊತ್ತು ಬಿಟ್ಟು ಗ್ರೈಂಡ್ ಮಾಡಿ, ಅಕ್ಕಿ, ಉದ್ದು ಇವೆಲ್ಲಾ
ಜೊತೆಗೆ ಹಾಕಿ ರುಬ್ಬಿದರೆ ಹಿಟ್ಟು ತುಂಬಾ ಹುಳಿಯಾಗಲ್ಲ.
ತಣ್ಣನೆಯ ಸ್ಥಳದಲ್ಲಿಡಿ
ಬೇಸಿಗೆಯಲ್ಲಿ ನೀವು ಹಿಟ್ಟನ್ನು ತಣ್ಣನೆಯ ಸ್ಥಳದಲ್ಲಿ ಇಡೇಕು, ಅದೇ ಚಳಿಗಾಲದಲ್ಲಿ
ಆದರೆ ಹಿಟ್ಟಿಗೆ ರುಬ್ಬುವಾಗ ಸ್ವಲ್ಪ ಬಿಸಿ ನೀರು ಹಾಕಿ ರುಬ್ಬುಇದರೆ
ಒಳ್ಳೆಯದು,ಗ್ರೈಂಡರ್ ಬಿಸಿಯಾದಾಗ ರುಬ್ಬಿದರೂ ತೊಂದರೆಯಿಲ್ಲ.
ಹಿಟ್ಟು ರುಬ್ಬಿದ ಮೇಲೆ ಒಂದು ಬಟ್ಟೆಯಿಂದ ಮುಚ್ಚಿಡಿ
ಹಿಟ್ಟನ್ನು ರುಬ್ಬಿದ ಮೇಲೆ ಅಗಲಬಾಯಿಯ ಹಿಟ್ಟು ಹಾಕಿದಾಗ ಆ ಹಿಟ್ಟು ಆ ಪಾತ್ರೆಯ ಅರ್ಧಭಾಗ ಮಾತ್ರ ಇರಬೇಕು ಅಂಥ ಪಾತ್ರೆಯಲ್ಲಿ ರುಬ್ಬಿದ ಹಿಟ್ಟು ಹಾಕಿ, ಇಲ್ಲದಿದ್ದರೆ ಹಿಟ್ಟು ಹುದುಗು ಬರುವಾಗ ಪಾತ್ರೆಯೊಂದ ಹೊರಚೆಲ್ಲುತ್ತೆ. ರುಬ್ಬಿದ ಹಿಟ್ಟು ಹಾಕಿ ಮಿಕ್ಸ್ ಮಾಡಿ ಬಟ್ಟೆಯನ್ನು ಮುಚ್ಚಿ.
ಅಕ್ಕಿ ಮತ್ತು ಉದ್ದು ರುಬ್ಬುವಾಗ ಫಿಲ್ಟರ್ ನೀರು ಬಳಸಿ
ಹೌದು ಅಕ್ಕಿ ಮತ್ತು ಉದ್ದು ನೆನೆ ಹಾಕುವಾಗ ನೀವು ಫಿಲ್ಟರ್ ನೀರು ಬಳಸಿ ರುಬ್ಬಿದರೆ ಇನ್ನೂ ಒಳ್ಳೆಯದು, ಇದು ಹಿಟ್ಟು ತುಂಬಾ ಹುಳಿ ಬರುವುದನ್ನು ತಡೆಗಟ್ಟುತ್ತದೆ.
ಹಿಟ್ಟು ತುಂಬಾ ಹೊತ್ತು ಹೊರಗಡೆ ಇಡಬೇಡಿ
ದೋಸೆ ಹಿಟ್ಟು ರುಬ್ಬಿದ ಮೇಲೆ 8 ಗಂಟೆ ಇಟ್ಟರೆ ಸಾಕು , ಅದಕ್ಕಿಂತ ಹೆಚ್ಚು ಹೊತ್ತು ಇಟ್ಟರೆ ಹಿಟ್ಟು ಹುಳಿಯಾಗುವುದು, 8 ಗಂಟೆಯ ಬಳಿಕ ಹಿಟ್ಟನ್ನು ಫ್ರಿಡ್ಜ್ನಲ್ಲಿಡಿ, ಹಾಗೆಯೇ ಇಡಬೇಡಿ.



Click it and Unblock the Notifications
