Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೀಗೆ ಪಾಸ್ತಾ ಮಾಡಿದರೆ ಯಾವ ಸಾಸ್, ರೆಡಿಮೇಡ್ ಮಸಾಲೆ ಬೇಕಾಗಿಲ್ಲ, ರುಚಿ ತುಂಬಾ ಚೆನ್ನಾಗಿರುತ್ತೆ
ಮಕ್ಕಳು ಅಮ್ಮಾ ಪಾಸ್ತಾ ಮಾಡು ಅಂದಾಗ ಈ ಪಾಸ್ತಾ-ಗೀಸ್ತಾವೆಲ್ಲಾ ನಮಗೆ ಮಾಡೋಕೆ ಬರಲ್ಲ ಎಂದು ಹೇಳಬೇಡಿ, ಅಮ್ಮಾ.....ನೀನು ಮಾಡಿದ ಪಾಸ್ತಾ ಇದೆಯಲ್ಲಾ ಸೂಪರ್ ಅಮ್ಮಾ ಅನ್ನುವಂತೆ ನೀವು ಯಾವುದೇ ಹೊರಗಡೆ ಸಾಸ್ ಬಳಸದೆ ಪಾಸ್ತಾ ಮಾಡಬಹುದು. ಇದೊಂದು ಸುಲಭದ ರೆಸಿಪಿಯಾಗಿದೆ, ಅಲ್ಲದೆ ಹೀಗೆ ಪಾಸ್ತಾ ಸೂಪರ್ ಆಗಿರುತ್ತೆ, ಇನ್ನು ಕ್ರೀಮಿ-ಕ್ರೀಮಿಯಾಗಿ ಬೇಕೆಂದರೆ ಚೀಸ್ ಕೂಡ ಸೇರಿಸಿದರೆ ಇನ್ನೂ ಸೂಪರ್, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಪಾಸ್ತಾ 1 ಕಪ್
ಪೇಸ್ಟ್ ಮಾಡಲು
1 ಕ್ಯಾರೆಟ್
1 ಟೊಮೆಟೊ
1 ಕ್ಯಾಪ್ಸಿಕಂ
1 ಈರುಳ್ಳಿ 1 ಚಮಚ
ಪಾಸ್ತಾ ರೆಡಿ ಮಾಡುವಾಗ
ಎಣ್ಣೆ 3-4 ಚಮಚ
1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
1 ಚಮಚ ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಕ್ಯಾಪ್ಸಿಕಂ (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಚಮಚ ಕಾಳು ಮೆಣಸಿನ ಪುಡಿ
1 ಚಮಚ ಒರೆಗ್ನೋ ಪುಡಿ
1 ಚಮಚ ಚಿಲ್ಲಿ ಫ್ಲೇಕ್ಸ್
ಚೀಸ್
ಮಾಡಿಟ್ಟ ಪೇಸ್ಟ್
ಪಾಸ್ತಾ
ಇದಕ್ಕೆ ತರಕಾರಿ ಕೂಡ ಹಾಕುವುದರಿಂದ ತರಕಾರಿ ಕೂಡ ಮಕ್ಕಳ ಹೊಟ್ಟೆ ಸೇರುತ್ತೆ.
ಸ್ಟೆಪ್ 1
ಮೊದಲಿಗೆ ನೀವು ಎಷ್ಟು ಬೇಕೋ ಅಷ್ಟು ಪಾಸ್ತಾ ತಗೊಂಡು ಅದಕ್ಕೆ ಸ್ವಲ್ಪ ಉಪ್ಪು
ಸೇರಿಸಿ ಬೇಯಿಸಿ (7-8 ನಿಮಿಷ ಬೆಂದರೆ ಸಾಕು.
ಬೆಂದ ಮೇಲೆ ಅದಕ್ಕೆ ನೀರು ಸೇರಿಸಿ ಸೋಸಿ, ಹೀಗೆ ಮಾಡುವುದರಿಂದ ಪಾಸ್ತಾ
ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.
ಸ್ಟೆಪ್ 2
- ಪಾತ್ರೆ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ, ಅದಕ್ಕೆ ಒಂದು ಈರುಳ್ಳಿ ಕತ್ತರಿಸಿ ಹಾಕಿ ಸೌಟ್‌ನಿಂದ ಆಡಿಸುತ್ತಾ 2-3 ನಿಮಿಷ ಬೇಯಿಸಿ.
- ಈಗ ಹಸಿಮೆಣಸು ಸೇರಿಸಿ
- ನೀವು ಒಂದು ಕ್ಯಾರೆಟ್, 1 ಕ್ಯಾಪ್ಸಿಕಂ 1 ಟೊಮೆಟೊ (ಎಲ್ಲಾ ಕತ್ತರಿಸಿದ್ದು) ಸೇರಿಸಿ, 5 ಗೋಡಂಬಿ, 5 ಬಾದಾಮಿ ಸೇರಿಸಿ 5-6 ನಿಮಿಷ ಫ್ರೈ ಮಾಡಿ. ನಂತರ ತರಕಾರಿ ಬೇಯಲಿ (ಬಯಲು ಸ್ವಲ್ಪ ನೀರು ಸೇರಿಸಿ)
- ಈಗ ಬೆಂದ ತರಕಾರಿ, ಸ್ವಲ್ಪ ನೀರು-ನೀರಿದ್ದರೂ ತೊಂದರೆಯಿಲ್ಲ, ಎಲ್ಲಾ ಮಿಕ್ಸಿ ಜಾರ್‌ಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ
- ಈಗ ನೀವು ಗ್ಯಾಸ್ ಸ್ಟೌವ್ ಮೇಲೆ ಒಂದು ಪಾತ್ರೆ ಇಟ್ಟು ಬಿಸಿ ಮಾಡು, ಪಾತ್ರೆ ಬಿಸಿಯಾದಾಗ 3-4 ಚಮಚ ನೀರು ಹಾಕಿ.
- ಈಗ ನೀವು ಚಿಕ್ಕದಾಗಿ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿ.
- ಈಗ ನೀವು ಚಿಕ್ಕದಾಗಿ ಕತ್ತರಿಸಿದ ಕ್ಯಾಪ್ಸಿಕಂ ಬೇಕಿದ್ದರೆ ಸೇರಿಸಬಹುದು.
- ಈಗ ನೀವು ರುಬ್ಬಿಟ್ಟ ಪೇಸ್ಟ್ ಸೇರಿಸಿ
- ಈಗ ನೀವು ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ
- ಅರ್ಧ ಚಮಚ ಒರೆಗ್ನೋ ಪುಡಿ (ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುತ್ತೆ)
- ಚಿಲ್ಲಿ ಫ್ಲೇಕ್ಸ್ 1 ಚಮಚಸೇರಿಸಿ
- (ಒರೆಗ್ನೋ, ಚಿಲ್ಲಿ ಫ್ಲೇಕ್ಸ್ ಇಲ್ಲಾಂದ್ರೆ ಬಳಸದೆಯೂ ಇರಬಹುದು)
- ಒಂದು ಕುದಿ ಬಂದ ತಕ್ಷಣ ಇದಕ್ಕೆ ಬೇಯಿಸಿಟ್ಟ ಪಾಸ್ತಾ ಸೇರಿಸಿ ಮಿಕ್ಸ್ ಮಾಡಿ, ಉಪ್ಪು ಸರಿಯಾಗಿದೆಯೇ ನೋಡಿ, ಚೀಸ್ ಸೇರಿಸಿ, ಚೀಸ್ ಕರಗುವವರೆಗೆ ಬೇಯಸಿದರೆ ರುಚಿಯಾದ ಪಾಸ್ತಾ ರೆಡಿ.



Click it and Unblock the Notifications
