Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕುಕ್ಕರ್‌ನಲ್ಲಿ 10 ನಿಮಿಷದೊಳಗೆ ಚಿತ್ರಾನ್ನ ಮಾಡಿ..! ಹೇಗೆ ಗೊತ್ತಾ?
ನಾವು ಕುಕ್ಕರ್ ಬಳಸಿ ಹಲವು ರೀತಿಯ ಅಡುಗೆಯನ್ನ ಮಾಡಿರುತ್ತೇವೆ, ಅನ್ನ ಮಾಡಲು ಕುಕ್ಕರ್ ಬೇಕೇ ಬೇಕು. ಕುಕ್ಕರ್‌ನಲ್ಲಿ ಅಡುಗೆ ಮಾಡೋದೇ ಸಮಯ ಉಳಿಸಲು ಹಾಗೂ ಗ್ಯಾಸ್ ಸಹ ಉಳಿಸಬಹುದು. ಹೀಗಾಗಿ ಅನ್ನ, ಪಲಾವ್, ಸಾಂಬಾರ್ ಸಹ ನಾವು ಕುಕ್ಕರ್‌ನಲ್ಲಿ ಮಾಡುತ್ತೇವೆ. ಆದ್ರೆ ಎಲ್ಲಾ ಅಡುಗೆಯನ್ನ ಪ್ರೇಷರ್ ಕುಕ್ಕರ್ ಬಳಸಿ ಮಾಡಲಾಗುವುದಿಲ್ಲ. ಕೆಲವೊಂದನ್ನ ಪಾತ್ರೆಯಲ್ಲಿಟ್ಟು ಎಣ್ಣೆ ಬಳಸಿ ಮಾಡಬೇಕಾಗುತ್ತದೆ.
ಆದ್ರೆ ಬೆಳಗಿನ ತಿಂಡಿಯನ್ನ ನಾವು ಕುಕ್ಕರ್‌ನಲ್ಲಿ ಮಾಡುವ ಅವಕಾಶ ಸಿಕ್ಕರೆ ಖಂಡಿತ ಮಾಡಿಯೇ ಮಾಡುತ್ತಾರೆ. ಕುಕ್ಕರ್ ಬಳಸಿ ಮಾಡುವುದು ಸುಲಭ ಹಾಗೂ ಸಮಯವೂ ಕಡಿಮೆ ಸಮಯದಲ್ಲಿಯೆ ಮಾಡಬಹುದು. ಆದ್ರೆ ಬೆಳಗ್ಗೆ ತಿಂಡಿಗೆ ನೀವು ಮಾಡುವ ಚಿತ್ರಾನ್ನವನ್ನ ಕುಕ್ಕರ್ ಬಳಸಿ ಮಾಡುವುದು ಎಂಬುದು ನಿಮಗೆ ತಿಳಿದಿದ್ಯಾ?

ಹೌದು ಚಿತ್ರಾನ್ನವನ್ನ ಕುಕ್ಕರ್ ಬಸಸಿ ಮಾಡಬಹುದು, ಕಡಿಮೆ ಸಮಯದಲ್ಲಿ ಮಾಡಬಹುದಾದ ಖಾದ್ಯದಲ್ಲಿ ಈ ಚಿತ್ರನ್ನವೂ ಸಹ ಒಂದು. ಆದ್ರೆ ಕುಕ್ಕರ್ ಬಳಸಿ ಇನ್ನೂ ಕಡಿಮೆ ಸಮಯದಲ್ಲಿ ಮಾಡಬಹುದು. ಹಾಗಾದ್ರೆ ಕುಕ್ಕರ್‌ನಲ್ಲಿ ಚಿತ್ರಾನ್ನ ಮಾಡುವುದು ಹೇಗೆ? ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ವಸ್ತುಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಕ್ಕರ್‌ನಲ್ಲಿ ಚಿತ್ರಾನ್ನ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ- 1 ಕಪ್
- ಅರಶಿನ
- ಸಾಸಿವೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ತೆಂಗಿನಕಾಯಿ
- ಶುಂಠಿ
- ಕರಿಬೇವು
- ಕೊತ್ತೊಂಬರಿ ಸೊಪ್ಪು
- ಒಣ ಮೆಣಸಿನ ಕಾಯಿ
- ಉಪ್ಪು
- ನಿಂಬೆ
- ಎಣ್ಣೆ
- ಹಸಿರು ಮೆಣಸು
ಕುಕ್ಕರ್‌ನಲ್ಲಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಕುಕ್ಕರ್‌ಗೆ 2 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಕಡಲೆ ಬೀಜ ಹಾಕಿ ಹುರಿದುಕೊಳ್ಳಿ. ಬಳಿಕ ಅದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಎಣ್ಣೆಗೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸಾಸಿವೆ ಸಹ ಹಾಕಿಕೊಳ್ಳಿ, ಇದಕ್ಕೆ ಇಂಗು ಸಹ ಸೇರಿಸಿದರೆ ಒಳ್ಳೆಯ ಸುವಾಸನೆ ಬರಲಿದೆ.
ನಂತರ ಇದಕ್ಕೆ ಸೀಳಿರುವ ಹಸಿ ಮೆಣಸು, ಒಣ ಮೆಣಸು, ಕರಿಬೇವು, ಶುಂಠಿಯನ್ನು ಕರಿಯಲು ಬಿಡಿ, ಫ್ರೈ ಆದ ಬಳಿಕ ಅರಶಿಣ ಹಾಕಿ, 30 ಸೆಕೆಂಡ್‌ಗಳ ಬಳಿಕ 1 ಕಪ್ ಚೆನ್ನಾಗಿ ತೊಳೆದಿದ್ದ ಅಕ್ಕಿಯನ್ನು ಹಾಕಿಕೊಳ್ಳಿ. ಅದೇ ಗ್ಲಾಸ್‌ನಲ್ಲಿ 2 ಗ್ಲಾಸ್ ನೀರು ಹಾಕಿ. ನಂತರ ಒಗ್ಗರಣೆ ಜೊತೆ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಮ್ಮೆ ತಿರುಗಿಸಿ, ಮಧ್ಯಮ ಉರಿಯಲ್ಲಿ ಬಿಡಿ.
ಮುಚ್ಚಳ ಹಾಕಿ 2 ಸೀಟಿ ಹೊಡೆಯಲು ಬಿಡಿ. ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ಕಲಸಿಕೊಳ್ಳಿ, ನಂತರ ಇದಕ್ಕೆ ನಿಂಬೆ ಹಣ್ಣಿನ ರಸ, ಮೊದಲು ಹುರಿದು ಇಟ್ಟುಕೊಂಡಿದ್ದ ಕಡಲೆ ಬೀಜ ಹಾಕಿಕೊಂಡಿ ತಿರುಗಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಚಿತ್ರಾನ್ನ ರೆಡಿಯಾಗುತ್ತದೆ, ಅದ್ರಲ್ಲೂ ಕುಕ್ಕರ್‌ನಲ್ಲಿ ಮಾಡಲು ಕೇವಲ 10 ನಿಮಿಷ ಸಾಕಾಗುತ್ತದೆ.
ಇದನ್ನು ಲಂಚ್ ಬಾಕ್ಸ್ ಗೂ ಬಳಸಬಹುದು, ಹಾಗೆ ಬೆಳಗ್ಗೆ ತಿಂಡಿಗೆ ಸುಲಭವಾಗಿ ವೇಗವಾಗಿ ಮಾಡಬಹುದು.



Click it and Unblock the Notifications
