Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಿ ರುಚಿ, ಆರೋಗ್ಯಕ್ಕೂ ಎರಡಕ್ಕೂ ಬೆಸ್ಟ್ ಈ ಬೆಲ್ಲ ರಾಗಿಯ ತಿಂಡಿ!!
ಮಳೆಗಾಲದ ಸಮಯದಲ್ಲಿ ನೀವು ಬಿಸಿ ಬಿಸಿಯಾದ ಯಾವುದಾದರು ಸ್ನ್ಯಾಕ್ಸ್ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಸಂಜೆ ಸಮಯದಲ್ಲಿ ಸವಿಯುವ ಸ್ನ್ಯಾಕ್ಸ್ ಹಾಗೆ ಆರೋಗ್ಯದ ದೃಷ್ಟಿಯಲ್ಲೂ ಉತ್ತಮವಾಗಿರುವ ಖಾದ್ಯ ಮಾಡೋದು ಅಂದ್ರೆ ಈಗ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಬೆಲ್ಲ ಹಾಗೂ ರಾಗಿಯ ಉಂಡೆ ಮಾಡಿ ಸವಿಯಲು ಬಹಳ ರುಚಿ ನೀಡಲಿದೆ.
ರಾಗಿ ನಮ್ಮ ದೇಹಕ್ಕೆ ಎಷ್ಟು ಉತ್ತಮ ಎಂಬುದನ್ನು ಕೂಡ ನೀವು ತಿಳಿದಿರುತ್ತೀರಿ. ರಾಗಿಯಿಂದ ಹಲವು ರೀತಿಯ ಖಾದ್ಯಗಳ ಕೂಡ ಮಾಡಬಹುದು. ಅದ್ರಲ್ಲೂ ಬೆಲ್ಲ ಹಾಗೂ ರಾಗಿ ಬಳಸಿ ಮಾಡುವಂತಹ ರುಚಿ ರುಚಿಯ ಈ ಉಂಡೆಯಂತು ಅದ್ಭುತ ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರಲಿದೆ.

ಸಿಹಿ ಸಿಹಿಯಾದ ಈ ರಾಗಿ ಉಂಡೆಯನ್ನು ನೀವು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಮಕ್ಕಳ ಆರೋಗ್ಯಕ್ಕೂ ಇದು ಬಹಳ ಇಷ್ಟವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಬೆಲ್ಲ, ರಾಗಿಯ ಉಂಡೆ ಮಾಡಿ ಸವಿಯಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ಬೆಲ್ಲದ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು
- ರಾಗಿ ಹಿಟ್ಟು
- ಬೆಲ್ಲದ ಪುಡಿ
- ಕೊಬ್ಬರಿ ಪುಡಿ
- ಏಲಕ್ಕಿ ಪುಡಿ
- ಗೋಡಂಬಿ
- ಉಪ್ಪು
- ಎಣೆ
- ಹಸಿ ಎಳ್ಳು
ರಾಗಿ ಬೆಲ್ಲದ ಉಂಡೆ ಮಾಡುವುದು ಹೇಗೆ?
ಮೊದಲು ಬಾಣಲೆ ಬಿಸಿ ಮಾಡಿಕೊಂಡು ಅದಕ್ಕೆ ತುಪ್ಪ ಹಾಕಿ ಬಳಿಕ ಗೋಡಂಬಿ ಹಾಕಿ ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ಹಾಗೆ ಅದೇ ಬಾಣಲೆಗೆ ರಾಗಿ ಹಿಟ್ಟು ಹಾಕಿಕೊಂಡು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಕೈಬಿಡದೆ ಚೆನ್ನಾಗಿ 5 ನಿಮಿಷ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಸಣ್ಣ ಪಾತ್ರೆ ಇಟ್ಟು ಬೆಲ್ಲದ ಪಾಕ ಮಾಡಿಕೊಳ್ಳಿ. ಬೆಲ್ಲ ಹಾಗೂ ನೀರು ಹಾಕಿಕೊಂಡು ಚೆನ್ನಾಗಿ ಬೆಲ್ಲ ಕರಗಲು ಬಿಡಿ. ಬೆಲ್ಲ ಕರಗಿ ಅಂಟು ಅಂಟಾಗಿ ಪಾಕ ಬರಲಿ. ಬಹಳ ಗಟ್ಟಿಯಾಗಿರಬಾರದು, ನೀರಾಗಿ ಪಾಕ ಬರಲಿ. ನಂತರ ಇದನ್ನು ಇಳಿಸಿಕೊಂಡು ಜರಡಿ ಹಿಡಿದು ಇಟ್ಟುಕೊಳ್ಳಿ. ಬಳಿಕ ಪಾಕ ಸ್ವಲ್ಪ ತಣ್ಣಗಾಗಲು ಬಿಡಿ.
ಈಗ ಬಾಣಲೆಯಲ್ಲಿರುವ ರಾಗಿ ಹಿಟ್ಟಿಗೆ ತುಪ್ಪ, ಏಲಕ್ಕಿ ಪುಡಿ, ಹುರಿದುಕೊಂಡಿದ್ದ ಗೋಡಂಬಿ ಪುಡಿಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಉಗುರು ಬೆಚ್ಚಗಿರುವ ಬೆಲ್ಲದ ಪಾಕವನ್ನು ಇದಕ್ಕೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಬೇಕು.
ಪಾಕವನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳುವುದು ಉತ್ತಮ. ಈ ಹಿಟ್ಟು ಉಂಡೆ ಕಟ್ಟಲು ಬರಬೇಕು. ಆ ರೀತಿಯಾಗಿ ಹದ ಬರುವವರರೆಗೂ ಹದ ಮಾಡಿಕೊಳ್ಳಿ. ನಂತರ ಹಿಟ್ಟನ್ನು ತೆಗೆದುಕೊಂಡು ಲಡ್ಡು ರೀತಿಯಲ್ಲಿ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಲ್ಲ ರಾಗಿ ಉಂಡೆ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
