Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಹೋಟೆಲ್ ರೀತಿ ಇಡ್ಲಿ ಹಿಟ್ಟು ಮಾಡಿ..! ಇಲ್ಲಿದೆ ಸಿಂಪಲ್ ಟಿಪ್ಸ್..!
ನಾವು ನಿತ್ಯ ಅಲ್ಲದಿದ್ದರೂ ವಾರದಲ್ಲಿ ಒಂದು ದಿನವಾದರು ಇಡ್ಲಿ ಸವಿಯುತ್ತೇವೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಇಡ್ಲಿ ಸಾಂಬಾರ್ ಫೇಮಸ್. ಇಡ್ಲಿ ಆರೋಗ್ಯಕ್ಕೂ ಉತ್ತಮ. ಕಡಿಮೆ ಎಣ್ಣೆ ಅಂಶ ಬಳಸಿ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಖಾದ್ಯ. ಹೀಗಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಾಯಿ ಚಪ್ಪರಿಸಿ ಸವಿಯುವ ತಿಂಡಿ ಇದಾಗಿದೆ. ಹೀಗಾಗಿ ಹೋಟೆಲ್ಮ ಕ್ಯಾಂಟೀನ್ನಲ್ಲಿ ಇಡ್ಲಿ ಯಾವಾಗಲೂ ಇದ್ದೇ ಇರುತ್ತೆ.
ಅದರಲ್ಲು ಇಡ್ಲಿಯನ್ನು ಹತ್ತಾರು ರೀತಿ ಮಾಡುವುದನ್ನು ನಾವು ನೋಡಿದ್ದೇವೆ. ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ರವೆ ಇಡ್ಲಿ ಹೀಗೆ ಹತ್ತಾರು ರೀತಿಯ ವಿಧಗಳಿಗೆ ಹತ್ತಾರು ಶೈಲಿಯಲ್ಲಿ ಮಾಡಬಹುದಾಗಿದೆ. ಆದರೆ ನಾವು ಇಡ್ಲಿ ಮಾಡುವಾಗ ಎಷ್ಟು ರೀತಿಯಲ್ಲಿ ಮಾಡಿರುತ್ತೇವೆ. ಆದ್ರೆ ಈ ಎಲ್ಲಾ ವಿಧದ ಇಡ್ಲಿ ಕೂಡ ಸವಿಯಲು ಬಹಳ ರುಚಿಕರವಾಗಿರುತ್ತದೆ.

ಆದ್ರೆ ನಮಗೆಲ್ಲಾ ಇಡ್ಲಿ ಮಾಡುವಾಗ ಕಾಡುವ ಏಕೈಕ ಸಮಸ್ಯೆ ಅಂದರೆ ಇಡ್ಲಿಗೆ ಹಿಟ್ಟು ರೆಡಿ ಮಾಡುವುದು. ಹೌದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇಡ್ಲಿ ಹಿಟ್ಟು ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಭಯದಲ್ಲೇ ಹಿಟ್ಟು ರೆಡಿ ಮಾಡಿಕೊಳ್ಳುತ್ತಾರೆ. ಹೇಗೆ ಹಿಟ್ಟು ರೆಡಿ ಮಾಡಿಕೊಂಡರೆ ಮೃದುವಾದ ಹತ್ತಿಯಂತಹ ಇಡ್ಲಿ ಮಾಡಬಹುದು ಎಂಬುದನ್ನು ತಿಳಿಯದೆ ಅವರು ತಮ್ಮ ಪಾಡಿಗೆ ತಾವು ಗಿಟ್ಟು ರೆಡಿ ಮಾಡಿಕೊಳ್ಳುತ್ತಾರೆ.
ಆದ್ರೆ ನಾವಿಂದು ಹೋಟೆಲ್ನಲ್ಲಿ ಹಿಟ್ಟನ್ನು ಹೇಗೆ ರೆಡಿ ಮಾಡಿಕೊಳ್ಳುತ್ತಾರೆ.? ಏನೆಲ್ಲಾ ಹಾಕುತ್ತಾರೆ? ಎಷ್ಟು ಗಂಟೆ ನೆನೆಯಲು ಬಿಡುತ್ತಾರೆ ಎಂಬಂತಹ ಮಾಹಿತಿ ತಿಳಿದುಕೊಳ್ಳೋಣ.
ಹೋಟೆಲ್ ರೀತಿ ಇಡ್ಲಿ ಹಿಟ್ಟು ಮಾಡಲು ಬೇಕಾಗುವ ಪದಾರ್ಥಗಳು
- ಇಡ್ಲಿ ರವೆ- 4 ಕಪ್
- ಮೆಂತ್ಯ
- ಉದ್ದಿನ ಬೇಳೆ
- ಸಾಬೂದಾನಿ
- ಅವಲಕ್ಕಿ
- ಸೋಡಾ
- ಉಪ್ಪು
ಹೋಟೆಲ್ ರೀತಿ ಇಡ್ಲಿ ಹಿಟ್ಟು ಮಾಡಿಕೊಳ್ಳುವುದು ಹೇಗೆ
ಒಂದು ಬೌಲ್ಗೆ ಇಡ್ಲಿ ರವೆ ಹಾಕಿ ಅದನ್ನು ಚೆನ್ನಾಗಿ ತೊಳೆದು ನೆನೆಯಲು ಬಿಡಿ. ಈಗ ಮತ್ತೊಂದು ಬೌಲ್ಗೆ ಉದ್ದಿನ ಬೇಳೆ, ಸಾಬೂದಾನಿ, ಮೆಂತ್ಯ ಹಾಕಿ ಅದನ್ನು ಸಹ ನೆನೆಸಿಕೊಳ್ಳಿ. 6 ರಿಂದ 6 ಗಂಟೆ ನೆನೆಯಲು ಬಿಡಿ. ಇಷ್ಟಾದ ಬಳಿ ಇವೆಲ್ಲವನ್ನು ರುಬ್ಬಿಕೊಳ್ಳುವ 15 ನಿಮಿಷ ಮೊದಲು ಉದ್ದಿನ ಬೇಳೆ ಇರುವ ಬೌಲ್ಗೆ ಅವಲಕ್ಕಿ ಹಾಕಿ ನೆನೆಸಿಕೊಳ್ಳಿ.
ಈಗ ಎಲ್ಲಾ ವಸ್ತುಗಳಿಂದ ನೀರು ತೆಗೆದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಳ್ಳಬೇಕು. ಎಲ್ಲಾ ವಸ್ತುಗಳನ್ನು ರುಬ್ಬಿವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಈ ಹಿಟ್ಟನ್ನು ಕೈ ಯಿಂದ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಪಾತ್ರೆ ಮುಚ್ಚಳ ಮುಚ್ಚಿ ಒಂದು ರಾತ್ರಿ ಇಡಬೇಕು. ಮಾರನೆ ದಿನ ಬೆಳಗ್ಗೆ ಹಿಟ್ಟಿಗೆ ಉಪ್ಪು ಹಾಕಿಕೊಂಡು ಕೈಯಿಂದ ಕಲಸಿಕೊಳ್ಳಬೇಕು. ಇದು ಹೋಟೆಲ್ನಲ್ಲಿ ಮಾಡುವ ಇಡ್ಲಿ ಹಿಟ್ಟಿನ ವಿಧಾನವಾಗಿದೆ. ಆದ್ರೆ ಅವರು ಈ ಹಿಟ್ಟಿಗೆ ಬೆಳಗ್ಗೆ ಉಪ್ಪು ಹಾಕುವ ಸಮಯದಲ್ಲಿ ಅಡುಗೆ ಸೋಡಾ ಸಹ ಹಾಕಿಕೊಂಡು ಕಲಸಿಕೊಳ್ಳುತ್ತಾರೆ. ಇದರಿಂದ ಇಡ್ಲಿ ಸಿಕ್ಕಾಪಟ್ಟೆ ಮೃದುವಾಗುತ್ತದೆ. ಹಾಗೆ ಹಿಟ್ಟು ಸಹ ಒದಗಿ ಬರುತ್ತದೆ. ನೀವು ಸಹ ಇದೇ ವಿಧಾನದಲ್ಲಿ ಹಿಟ್ಟು ರೆಡಿ ಮಾಡಿಕೊಂಡು ನೋಡಿ.



Click it and Unblock the Notifications