Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಒಂದು ಬರಿ ಈ ಸೂಪ್ ಕುಡಿದರೆ ಕಬ್ಬಿಣದಂತಹ ದೇಹ ಪಡೆಯಬಹುದು..! ಮಾಡೋದು ಹೇಗೆ?
ನಿಮ್ಮ ದೈನಂದಿನ ಕೆಲಸದ ನಡುವೆ ಹಲವು ರೀತಿಯ ಅನಾರೋಗ್ಯ ಕಾಡುವುದು ನೋಡಬಹುದು. ನಿಮ್ಮಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾದ ಶೀತ,ನೆಗಡಿ, ಮೈ ಕೈ ನೋವು, ಮೂಳೆ ಸೆಳೆತದಂತಹ ಸಮಸ್ಯೆಗಳ ನೋಡಬಹುದು. ಕೆಲವರು ನಿತ್ಯ ಸೊಂಟ ನೋವಿನಂತಹ ಸಮಸ್ಯೆಗಳ ಎದುರಿಸುವುದು ಕೂಡ ಸಾಮಾನ್ಯ, ಆದ್ರೆ ನಾವಿಂದು ಇದೆಲ್ಲದಕ್ಕೂ ಮನೆಯಲ್ಲೇ ಪರಿಹಾರ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ನಮ್ಮ ಮನೆಯಲ್ಲೇ ಕೆಲವೊಂದು ಆಹಾರಗಳ ಸೇವನೆ ಮೂಲಕ ಇಂತಹ ಸಮಸ್ಯೆಗಳನ್ನು ದೂರ ಇಡಬಹುದು. ಅದರಲ್ಲೂ ಜೀರಿಗೆ ಹಾಗೂ ಕಾಳು ಮೆಣಸು ಸೇರಿದಂತೆ ಒಂದಿಷ್ಟು ಅಂಶಗಳ ಹಾಕಿ ಮಾಡುವ ಸೂಪ್ ಕುಡಿದರೆ ನೀವು ಇಂತಹ ಹತ್ತಾರು ಸಮಸ್ಯೆಗಳಿಂದ ಹೊರಬರಬಹುದು. ಕೇವಲ ಒಂದು ಬಾರಿ ಕುಡಿದರೆ ನಿಮ್ಮ ದೇಹ ಕಬ್ಬಿಣದಂತಾಗುತ್ತದೆ.

ಹಾಗಾದ್ರೆ ಈ ಅದ್ಭುತ ರುಚಿಯಲ್ಲಿ ಸೂಪ್ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ನಮ್ಮ ದೇಹಕ್ಕೆ ಯಾವುದೇ ಸಮಸ್ಯೆ ಇದ್ದರೂ ಕೆಲವೊಂದು ನಿವಾರಕಗಳನ್ನು ಮನೆಯಲ್ಲಿ ಮಾಡಿಕೊಳ್ಳಬಹುದು. ಆಯುರ್ವೇದದಲ್ಲಿ ಕೂಡ ಇಂತಹ ಹಲವು ಮನೆಮದ್ದುಗಳ ನಾವು ನೋಡಬಹುದು. ಆದ್ರೆ ನಾವಿಂದು ಅದ್ಭುತ ಚೇತೋಹಾರಿಯಾದ ಈ ಸೂಪ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ರುಚಿ ರುಚಿಯ ಸೂಪ್ ಮಾಡುವುದು ಹೇಗೆ? ಆರೋಗ್ಯಕ್ಕೆ ಅತ್ಯುತ್ತಮವಾದ ಈ ಅಕ್ಕಿ, ಕಾಳು ಮೆಣಸಿನ ಸೂಪ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೂಪ್ ಮಾಡಲು ಬೇಕಾಗುವ ವಸ್ತುಗಳು
- ತುಪ್ಪ
- ಜೀರಿಗೆ
- ಕಾಳು ಮೆಣಸು
- ಅಕ್ಕಿ
- ಧನಿಯಾ ಕಾಳು
- ಕೊತ್ತಂಬರಿ ಸೊಪ್ಪು
- ಬೆಳ್ಳುಳ್ಳಿ
- ಶುಂಠಿ ಪುಡಿ
- ತೆಂಗಿನ ಕಾಯಿ
- ಉಪ್ಪು
ಸೂಪ್ ಮಾಡುವ ವಿಧಾನವೇನು?
ಮೊದಲಿಗೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ, ಜೀರಿಗೆ, ಕಾಳು ಮೆಣಸು, ಉದ್ದಿನ ಬೇಳೆ, ಒಂದು ಸ್ಪೂನ್ ಅಕ್ಕಿ, ಧನಿಯಾ ಕಾಳು, ಕತ್ತರಿಸಿಕೊಂಡ ಬೆಳ್ಳುಳ್ಳಿ, ಕರಿಬೇವು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಕತ್ತರಿಸಿಕೊಂಡ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ.
ಈಗ ಈ ಎಲ್ಲಾ ವಸ್ತುಗಳು ತಣ್ಣಗಾಗಲು ಬಿಡಿ. ತಣ್ಣಗಾದ ಈ ವಸ್ತುಗಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ಒಣ ಶುಂಠಿ ಪುಡಿ, ಉಪ್ಪು, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಬಾಣಲೆ ಒಟ್ಟು ಅದಕ್ಕೆ ನೀರು ಹಾಕಿಕೊಂಡು ಬಿಸಿ ಮಾಡಿ. ನೀರು ಬಿಸಿಯಾದಾಗ ರುಬ್ಬಿಕೊಂಡಿರುವ ಪೇಸ್ಟ್ ಅನ್ನು ಈ ನೀರಿಗೆ ಹಾಕಿಕೊಂಡು ನೀರು ಹಾಕಿ ಕೊಳ್ಳಬೇಕು. ನೀರು ತೆಳುವಾಗಿ ಇರಬೇಕು.
ನಂತರ ಇದನ್ನು ಕುದಿಬರಲು ಬಿಡಿ, ಹೀಗೆ ಸ್ವಲ್ಪ ಉಪ್ಪು ಹಾಕಿ ಕುದಿಬರುವಂತೆ ಮಾಡಿ. ಕುದಿಬರುವಾಗ ಮತ್ತೆ 1 ಸ್ಪೂನ್ ತುಪ್ಪ ಹಾಕಿಕೊಳ್ಳಬೇಕು. ಹಾಗೆ ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಸೂಪ್ ರೆಡಿಯಾಗುತ್ತದೆ. ಇದನ್ನು ಬಿಸಿ ಬಿಸಿ ಇದ್ದಾಗಲೇ ಕುಡಿಯಲು ನೀಡಿದರೆ ಅದರ ರುಚಿ ಅದ್ಭುತವಾಗಿರುತ್ತೆ. ಹಾಗೆ ದೇಹಕ್ಕೆ ಬಹಳ ಉತ್ತಮ ಸೂಪ್ ಇದಾಗಿದೆ. ಇದರಿಂದ ನಿಮ್ಮ ದೇಹ ಸಮತೋಲನ ಕಾಪಾಡಿಕೊಳ್ಳಲಿದೆ. ಹಾಗೆ ಹಲವು ಸಮಸ್ಯೆಗಳು ನಿವಾರಣೆ ಆಗಲಿದೆ.



Click it and Unblock the Notifications
