Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಂಗಳೂರು ಶೈಲಿಯಲ್ಲಿ ಕೋರಿ ಸುಕ್ಕಾ ಮಾಡುವುದು ಹೇಗೆ?
Recipes
oi-Reena TK
Posted By: Reena TK
ಮಂಗಳೂರಿನಲ್ಲಿ ಚಿಕನ್ ಅಡುಗೆಯಲ್ಲಿ ಸುಕ್ಕಾ ಇರಲೇಬೇಕು, ಈ ಚಿಕನ್ ಪೆಪ್ಪರ್, ಚಿಕನ್ ಡ್ರೈಗಿಂತ ಆ ಕಡೆ ಸುಕ್ಕಾ ಇಷ್ಟಪಡುತ್ತಾರೆ, ಈ ಸುಕ್ಕಾ ಟೇಸ್ಟ್ ಮಾಡುತ್ತಿದ್ದರೆ ಕೂತಲ್ಲಿ ನಾವೆಷ್ಟು ತಿಂದಿದ್ದೇವೆ ಎಂಬ ಲೆಕ್ಕ ಸಿಗಲ್ಲ ಅಷ್ಟೊಂದು ರುಚಿಯಾಗಿರುತ್ತದೆ. ಮಂಗಳೂರು ಶೈಲಿಯ ಕೋರಿ ಸುಕ್ಕಾ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಚಿಕನ್ ಒಂದು ಕೆಜಿ (ಬೋನ್ಲೆಸ್, ವಿಥ್ ಬೋನ್ ಬಳಸಬಹುದು, ನಾಟಿ
ಕೋಳಿಯಾದರೆ ಇನ್ನೂ ಸೂಪರ್)
ಬ್ಯಾಡಗಿ ಮೆನಸು 8-10
ತೆಮಗಿನ ತುರಿ 1 ಕಪ್
ಸ್ವಲ್ಪ ಶುಂಠಿ
ಒಂದು ಈರುಳ್ಳಿ
5-6 ಎಸಳು ಬೆಳ್ಳುಳ್ಳಿ
ಕೊತ್ತಂಬರಿ ಬೀಜ 4 ಚಮಚ
ಸೋಂಪು 1 ಚಮಚ
ಜೀರಿಗೆ 1/2 ಚಮಚ
ಕಾಳುಮೆಣಸು 4-6
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕರೆ
3-4 ಲವಂಗ
ಸ್ವಲ್ಪ ಕರಿಬೇವಿ
1/2 ಚಮಚ ಅರಿಶಿಣ ಪುಡಿ
1 ಚಮಚ ಎಣ್ಣೆ
ಮಾಡುವ ವಿಧಾನ
- ಮೊದಲು ನೀವು ಸುಕ್ಕಾ ಮಾಡಲು ಮಸಾಲೆ ರೆಡಿ ಮಾಡಿ
- ತೆಂಗಿನ ತುರಿಯನ್ನು ಒಂದು ಚಮಚ ಎಣ್ಣೆ ಹಾಕಿ ಕೆಂಪಗೆ ಬರುವವಷ್ಟು ಹೊತ್ತು ಹುರಿಯಿರಿ, ಹೀಗೆ ಹುರಿಯುವಾಗ ಸ್ವಲ್ಪ ಹುಣಸೆಹಣ್ಣು ಕೂಡ ಸೇರಿಸಿ ಹುರಿಯಿರಿ
- ಈಗ ತವಾಗೆ ಬ್ಯಾಡಗಿ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ , ಸೋಂಪು, ಲವಂಗ, ಚಕ್ಕೆ ಎಲ್ಲವನ್ನೂ ಹಾಕಿ ಹುರಿಯಿರಿ,
- ನಂತರ ಹುರಿದ ಮಸಾಲೆಗೆ ಶುಂಠಿ, ಬೆಳ್ಳುಳ್ಳಿ ಸೇರಿಸಿ ನುಣ್ಣನೆ ರುಬ್ಬಿ.
- ನೀವು ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಈರುಳ್ಳಿ, ಕರಿಬೇವು ಹಾಕಿ, ನಂತರ ಚಿಕನ್ ಹಾಕಿ ಅರಿಶಿಣ ಪುಡಿ, ಉಪ್ಪು ಸೇರಿಸಿ ಬೇಯಸಿ. ಚಿಕನ್ ಅರ್ಧ ಬೆಂದಾಗ ರುಬ್ಬಿದ ಮಸಾಲೆ ಹಾಕಿ
- ನಂತರ ಫ್ರೈ ಮಾಡಿಟ್ಟ ಕಾಯಿ ತುರಿಯನ್ನು ರುಬ್ಬಿ (ಇದನ್ನು ತರಿತರಿಯಾಗಿ ರುಬ್ಬಬಹುದು ಅಥವಾ ನುಣ್ಣನೆ ರುಬ್ಬಬಹುದು)
- ರುಬ್ಬಿದ ತೆಂಗಿನ ತುರಿಯನ್ನು ಚಿಕನ್ ಜೊತೆ ಸೇರಿಸಿ, ಮತ್ತೆ 5 ನಿಮಿಷ ಬೇಯಿಸಿದರೆ ಕೋರಿ ಸುಕ್ಕಾ ರೆಡಿ.
Comments
[ of 5 - Users]
Story first published: Friday, July 26, 2024, 16:17 [IST]
Other articles published on Jul 26, 2024



Click it and Unblock the Notifications
