Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹೋಟೆಲ್ ರುಚಿಯ ರೈಸ್ಬಾತ್ ರೆಸಿಪಿ..! ಸಖತ್ ಟೇಸ್ಟಿ..!
ಬೆಳಗ್ಗೆಯ ತಿಂಡು ಚೆನ್ನಾಗಿ ಇದ್ದರೆ ಇಡೀ ದಿನ ನಮ್ಮ ಕೆಲಸಗಳು ಆರಾಮವಾಗಿ ನಡೆಯುತ್ತವೆ. ಇಲ್ಲದಿದ್ದರೆ ಇಡೀ ದಿನ ಹಾಳಾಗುತ್ತದೆ. ಬೆಳಗ್ಗೆಯ ತಿಂಡಿ ಎಷ್ಟು ಚೆನ್ನಾಗಿ ಮಾಡುತ್ತೇವೋ, ಮಧ್ಯಾಹ್ನ ಊಟವೂ ಸಹ ಅಷ್ಟೇ ಚೆನ್ನಾಗಿ ಸೇರುತ್ತದೆ. ಇನ್ನು ತಿಂಡಿಗೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸೋದು ಸ್ವಲ್ಪ ಕಷ್ಟ.
ಬೆಳಗ್ಗೆ ಬೇಗ ಮಾಡುವ ಒಂದಿಷ್ಟು ತಿಂಡಿಯನ್ನು ನಾವು ಟ್ರೈ ಮಾಡಿರುತ್ತೇವೆ, ಆದ್ರೆ ದಿನಾಲು ಒಂದೇ ರೀತಿ ಅಡುಗೆ, ತಿಂಡಿ ಮಾಡಿದರೆ ಎಂತವರಿಗೂ ಬೋರ್ ಆಗುತ್ತದೆ. ಹೀಗಾಗಿ ಅನ್ನದಲ್ಲಿ ಮಾಡಬಹುದಾದ ಸ್ಪೆಷಲ್ ರೈಸ್ ಬಾತ್ ಮಾಡುವುದನ್ನು ನೋಡೋಣ.

ಅನ್ನದಲ್ಲಿ ನೀವು ರೈಸ್ ಬಾತ್ ಮಾಡಿರುತ್ತೀರಿ. ಆದ್ರೆ ಎಂದಾದರು ಹೋಟೆಲ್ನಲ್ಲಿ ಸಿಗುವ ರೈಸ್ಬಾತ್ನ ರುಚಿಯನ್ನು ಮನೆಯಲ್ಲಿ ಎಂದಾದರು ಮಾಡಿದ್ದೀರಾ..? ಹೌದು ಹೋಟೆಲ್ನ ರುಚಿಯ ರೈಸ್ ಬಾತ್ ಮನೆಯಲ್ಲೇ ಮಾಡಬಹುದು. ಅದರಲ್ಲೂ ಬೆಳಗ್ಗೆ ತಿಂಡಿಗೆ ಈ ರೈಸ್ ಬಾತ್ ಸಿಕ್ಕಾಪಟ್ಟೆ ರುಚಿಯಾಗಿರುತ್ತದೆ. ಹಾಗಾದರೆ ಹೋಟೆಲ್ ರುಚಿಯಲ್ಲಿ ರೈಸ್ ಬಾತ್ ಮಾಡುವುದು ಹೇಗೆ? ಈ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ರೈಸ್ ಬಾತ್ ಮಾಡುವ ಪಾಕವಿಧಾನ ಯಾವುದು ಎಂದು ತಿಳಿಯೋಣ
ರೈಸ್ ಬಾತ್ ಮಾಡಲು ಯಾವೆಲ್ಲಾ ವಸ್ತು ಬೇಕು?
- ಈರುಳ್ಳಿ- ಚಿಕ್ಕದು
- ಬೆಳ್ಳುಳ್ಳಿ
- ಶುಂಠಿ
- ಹಸಿ ಮೆಣಸು
- ಚೆಕ್ಕೆ
- ಲವಂಗ
- ಏಲಕ್ಕಿ
- ಟೊಮೆಟೋ
- ಕೊತ್ತಂಬರಿ ಸೊಪ್ಪು
- ತೆಂಗಿನ ಕಾಯಿ
- ಸೋಂಕಾಳು
- ಧನಿಯಾ ಪುಡಿ
- ಖಾರದ ಪುಡಿ
- ಅರಶಿನ ಪುಡಿ
- ಪಲಾವ್/ಬಿರಿಯಾನಿ ಎಲೆ
- ಕರಿಬೇವಿನ ಸೊಪ್ಪು
- ಹಸಿ ಬಟಾಣಿ
- ಬೀನ್ಸ್
- ಕ್ಯಾರೆಟ್
- ಆಲೂಗಡ್ಡೆ
- ಮೂಲಂಗಿ
- ಉಪ್ಪು
- ಅಕ್ಕಿ
ರೈಸ್ ಬಾತ್ ಮಾಡುವ ವಿಧಾನ
ಮೊದಲು ಮಸಾಲೆ ರುಬ್ಬಿಕೊಳ್ಳುವುದು ಹೇಗೆ ಎಂಬುದನ್ನು ನೋಡಿ
ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಚಿಕ್ಕ ಈರುಳ್ಳಿ, ಬೆಳ್ಳುಳ್ಳಿ ಹಾಕಿ, ಬಳಿಕ ಶುಂಠಿ ಹಾಕಿ ಫ್ರೈ ಮಾಡಿಕೊಳ್ಳಿ. ಒಂದೆರಡು ನಿಮಿಷ್ ಬಳಿಕ ಹಸಿ ಮೆಣಸಿನಕಾಯಿ, ಏಲಕ್ಕಿ, ಲವಂಗ, ಚಕ್ಕೆ ಪ್ರೈ ಮಾಡಿ. ನಂತರ ಟೊಮೆಟೋ ಹಾಕಿ ಪ್ರೈ ಮಾಡಿ.
ಇದರ ಜೊತೆ ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಹಾಕಿ ತೆಂಗಿನ ಕಾಯಿ, ಸೋಂಕಾಳು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಧನಿಯಾ ಪುಡಿ ಹಾಕಿ ಚೆನ್ನಾಗಿ ತಿರುಗಿಸಿ. ನಂತರ ಖಾರದ ಪುಡಿ, ಅರಶಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಅದನ್ನು ತೆಗೆದು ತಣ್ಣಗಾಗಲು ಇಡಿ.
ಈಗ ಒಗ್ಗರಣೆ ಮಾಡಿಕೊಳ್ಳಿ. ಒಂದು ಕುಕ್ಕರ್ನಲ್ಲಿ ಎಣ್ಣೆ ಹಾಕಿ ಬಳಿಕ ಈರುಳ್ಳಿ, ಪಲಾವ್/ ಬಿರಿಯಾಣಿ ಎಲೆ, ಕರಿಬೇವಿನ ಸೊಪ್ಪು ಹಾಕಿ ಫ್ರೈ ಮಾಡಿ. ಇದಾದ ಬಳಿಕ ತರಕಾರಿಗಳನ್ನು ಹಾಕಿ ಬೇಯಿಸಿ. ಈಗ ಎಲ್ಲಿಯೂ ನೀರು ಬಳಸಬೇಡಿ. ಬಳಿಕ ಮೊದಲು ಫ್ರೈ ಮಾಡಿಕೊಂಡಿದ್ದ ಮಸಾಲೆಗಳನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ ರುಬ್ಬಿಕೊಳ್ಳಿ, ಇದು ತುಂಬಾನೆ ನಯವಾಗಬಾರದು ತರಿತರಿಯಾಗಿ ರುಬ್ಬಿಕೊಳ್ಳಿ.
ಈ ರುಬ್ಬಿಕೊಂಡ ಮಸಾಲೆಯನ್ನು ಕುಕ್ಕರ್ಗೆ ಹಾಕಿ ಇದಕ್ಕೆ ಉಪ್ಪು ಹಾಕಿ ಕುದಿಸಿ. ಒಂದೆರಡು ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ಬಳಿಕ ಎರಡು ಗ್ಲಾಸ್ ಅಕ್ಕಿ ಹಾಕಿ ಅದೇ ಗ್ಲಾಸ್ನಲ್ಲಿ 3 ಗ್ಲಾಸ್ ನೀರು ಹಾಕಿದರೆ ಸಾಕು. ಇಲ್ಲವೆ ನಿಮ್ಮ ಅಂದಾಜಿನಲ್ಲಿ ಎಷ್ಟು ನೀರು ಬೇಕೋ ಅಷ್ಟು ಹಾಕಿ. ಅಕ್ಕಿ ಹಾಕುವ ಮುನ್ನ ಅದನ್ನು ನೆನೆಸಿಟ್ಟು ಹಾಕಿದರೆ ಉತ್ತಮ.
ಅಕ್ಕಿ ಹಾಕಿದ ಬಳಿಕ ಚೆನ್ನಾಗಿ ತಿರುಗಿಸಿ ಎರಡು ಸೀಟಿ ಹೊಡೆಯಲು ಬಿಡಿ. ಎರಡು ಸೀಟಿ ಹೊಡೆದ ಬಳಿಕ ಕುಕ್ಕರ್ ತೆರೆದು ಚೆನ್ನಾಗಿ ಬೆರಸಿ, ಇದಕ್ಕೆ ತುಪ್ಪ ಬೇಕಾದರೆ ಹಾಕಿ ತಿರುಗಿಸಬಹುದು. ಈಗ ನಿಮ್ಮ ಮುಂದೆ ಹೋಟೆಲ್ ರುಚಿಯ ರೈಸ್ಬಾತ್ ರೆಡಿಯಾಗಿರುತ್ತದೆ.



Click it and Unblock the Notifications
