Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹುರುಳಿಕಾಳಿನ ಚಟ್ನಿ ಪುಡಿ ರೆಸಿಪಿ: ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಸಹಕಾರಿ
ಹುರುಳಿಕಾಳಿನ ಚಟ್ನಿ ತುಂಬಾನೇ ರುಚಿಯಾಗಿರುತ್ತೆ, ಅಷ್ಟೇ ರುಚಿಯಾಗಿರುತ್ತೆ ಹುರುಳಿಕಾಳಿನ ಚಟ್ನಿ ಪುಡಿ, ಅನ್ನ, ದೋಸೆ, ಇಡ್ಲಿ ಜೊತೆ ಸವಿಯಲು ತುಂಬಾನೇ ರಚಿಯಾಗಿರುತ್ತದೆ, ಬನ್ನಿ ಹುರುಳಿಕಾಳಿ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಹುರುಳಿಕಾಳು 1 ಕಪ್
ಸ್ವಲ್ಪ ತೆಂಗಿನ ತುರಿ 1/4 ಕಪ್
6-8 ಒಣಮೆಣಸು
ರುಚಿಗ ತಕ್ಕ ಉಪ್ಪು
ಸ್ವಲ್ಪ ಹುಣಸೆಹಣ್ಣು
ಸ್ವಲ್ಪ ಬೆಲ್ಲ
ಸ್ವಲ್ಪ ಕರಿಬೇವು
2 ಚಮಚ ಎಣ್ಣೆ
ಮಾಡುವ ವಿಧಾನ
ಮೊದಲೇ ಹುರುಳಿ ಕಾಳು ತೊಳೆದು ಒಣಗಿಸಿಟ್ಟಿರಿ
ಈಗ ಪ್ಯಾನ್ ಬಿಸಿ ಮಾಡಿ ಅದರಲ್ಲಿ ಹುರುಳಿಕಾಳು ಹಾಕಿ ರೋಸ್ಟ್ ಮಾಡಿ
ನಂತರ ಅದನ್ನು ತಟ್ಟೆಗೆ ಹಾಕಿ
ಈಗ ಅದೇ ಪ್ಯಾನ್ಗೆ ಎಣ್ಣೆ ಹಾಕಿ ಒಣ ಮೆಣಸನ್ನು ರೋಸ್ಟ್ ಮಾಡಿ
ಕರಿಬೇವು ರೋಸ್ಟ್ ಮಾಡಿ
ನಂತರ ಕೊಬ್ಬರಿಯನ್ನು ರೋಸ್ಟ್ ಮಾಡಿ,ಕೊಬ್ಬರಿ ರೋಸ್ಟ್ ಮಾಡುವಾಗ ಹುಣಸೆ ಹಣ್ಣು
ಕೂಡ ಸೇರಿಸಿ, ರೋಸ್ಟ್ ಮಾಡಿ
ಈಗ ಬೆಲ್ಲ ಉಪ್ಪು ಸೇರಿಸಿ ಎಲ್ಲಾ ಮಿಶ್ರಣ ಜಾರ್ಗೆ ಹಾಕಿ ತರಿ ತರಿಯಾಗಿ ರುಬ್ಬಿ
ಈ ಚಟ್ನಿ ಸರ್ವ್ ಮಾಡಲು ರೆಡಿ.
ಸಲಹೆ
ನೀವು ಹುರುಳಿಯನ್ನು ಹುರಿಯುವಾಗ ಪ್ಯಾನ್ ತುಂಬಾನೇ ಬಿಸಿಯಾಗಿರಬೇಕು, ಅಲ್ಲದೆ
ಹುರುಳಿ ಕಪ್ಪು ಬಣ್ಣಕ್ಕೆ ಬರುವವರೆಗೆ ರೋಸ್ಟ್ ಮಾಡದಿರಿ
ಖಾರಕ್ಕೆ ತಕ್ಕ ಒಣ ಮೆಣಸು ಹಾಕಿ
ಬೆಲ್ಲವನ್ನು ಹಾಕಲೇಬೇಕೆಂದು ಕಡ್ಡಾಯವಿಲ್ಲ
ಇದನ್ನು ಮಾಡಿಟ್ಟರೆ ತಿಂಗಳವರೆಗೆ ಬಳಸಬಹುದು, ಚಟ್ನಿ ಪುಡಿ ಮಾಡಿ ಗಾಳಿಯಾಡದ
ಡಬ್ಬದಲ್ಲಿ ಹಾಕಿಡಿ.
ಹುರುಳಿಕಾಳಿನ ಪ್ರಯೋಜನಗಳು:
ದೇಹದಲ್ಲಿ ಇನ್ಸುಲಿನ್ ಸಮತೋಲನದಲ್ಲಿಡಲು ಸಹಾಯ
ಮಾಡುತ್ತದೆ
ಮಧುಮೇಹಿಗಳಿಗೆ ಈ ಹುರುಳಿ ಕಾಳು ತುಂಬಾನೇ ಪ್ರಯೋಜನಕಾರಿಯಾಗಿದೆ, ರಕ್ತದಲ್ಲಿ
ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮೂತ್ರ ಸೋಂಕಿನ ಸಮಸ್ಯೆ ತಡೆಗಟ್ಟಲು ಸಹಕಾರಿ
ಹುರುಳಿ ಕಾಳು ದಿನದಲ್ಲಿ ಎರಡು ಬರಿ ಸೇವಿಸಿದರೆ ಸಾಕು ಮೂತ್ರ ಸೋಂಕಿನ ಸಮಸ್ಯೆ
ತಡೆಗಟ್ಟಲು ಸಹಕಾರಿ.
ಕಿಡ್ನಿ ಸ್ಟೋನ್ ತಡೆಗಟ್ಟುತ್ತದೆ
ಈ ಹುರುಳಿಕಾ ಳು ಕಿಡ್ನಿ ಸ್ಟೋನ್ ಹೊರಹಾಕಲು ಸಹಕಾರಿ. ದಿನಾ ಸ್ವಲ್ಪ ಹುರುಳಿ
ಕಾಳು ತಿಂದರೆ ಕಿಡ್ನಿ ಸ್ಟೋನ್ ಇರುವವರು ಉತ್ತಮ ಪ್ರಯೋಜನ ಪಡೆಯಬಹುದು.
ಅಸ್ತಮಾ ಸಮಸ್ಯೆ ಇರುವವರೆಗೆ ಒಳ್ಳೆಯದು
ಈ ಚಟ್ನಿ ಪುಡಿ ದಿನಾ ತಿಂದರೆ ಅಸ್ತಮಾ ಕಾಯಿಲೆ ಇರುವವರೆಗೆ ತುಂಬಾ ಒಳ್ಳೆಯದು,
ಕೆಮ್ಮು, ಶೀತ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಹುರುಳಿಕಾಳಿನಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ, ಪ್ರೊಟೀನ್ ಈ ಅಂಶಗಳಿರುವುದರಿಂದ
ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಳೆಗಾಲ, ಚಳಿಗಾಲಕ್ಕೆ ತುಂಬಾನೇ ಒಳ್ಳೆಯದು
ಹುರುಳಿಕಾಳು ಮೈಯನ್ನು ಬೆಚ್ಚಗಿಡಲು ಸಹಕಾರಿ, ಹಾಗಾಗಿ ಇದು ಮಳೆಗಾಲ ಹಾಗೂ
ಚಳಿಗಾಲದ ಅತ್ಯುತ್ತಮ ಆಹಾರ.



Click it and Unblock the Notifications
